For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಡಬ್ ಆಗ್ತಿದೆ ಪ್ರಿಯಾ ವಾರಿಯರ್ ಸಿನಿಮಾ

  |

  'ಕೆಜಿಎಫ್' ಸಿನಿಮಾದ ಪರಿಣಾಮವೋ ಏನೋ ಈಗ ದಕ್ಷಿಣ ಭಾರತದ ಸಿನಿಮಾಗಳು ಕನ್ನಡಕ್ಕೆ ಡಬ್ ಆಗುವ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಮಲೆಯಾಳಂನ ಒಂದು ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬರುತ್ತಿದೆ. ವಿಶೇಷ ಅಂದರೆ, ಆಫೀಶಿಯಲ್ ಆಗಿ ಮಲೆಯಾಳಂನಿಂದ ಕನ್ನಡಕ್ಕೆ ಡಬ್ ಆಗುತ್ತಿರುವ ಮೊದಲ ಸಿನಿಮಾ ಇದಾಗಿದೆ.

  ನಟಿ ಪ್ರಿಯಾ ವಾರಿಯರ್ ಅಭಿನಯದ 'ಒರು ಅಡಾರ್ ಲವ್' ಸಿನಿಮಾ ಇದೀಗ ಕನ್ನಡಕ್ಕೆ ಡಬ್ ಆಗಲಿದೆ. ಸಿನಿಮಾ ಫೆಬ್ರವರಿ 14 ರಂದು ಬಿಡುಗಡೆಯಾಗಲಿದ್ದು, ಮಲೆಯಾಳಂ ಜೊತೆಗೆ ಕನ್ನಡ, ತಮಿಳು, ತೆಲುಗುನಲ್ಲಿಯೂ ರಿಲೀಸ್ ಮಾಡುವುದಾಗಿ ಚಿತ್ರತಂಡ ಸ್ಪಷ್ಟಪಡಿಸಿದೆ.

  ಪ್ರೇಕ್ಷಕರ ನಂತರ ಪ್ರಶಸ್ತಿ ಕೂಡ ಪ್ರಿಯಾ ವಾರಿಯರ್ ಪಾಲಾಯ್ತು

  ಕನ್ನಡದಲ್ಲಿ ಸಿನಿಮಾಗೆ 'ಕಿರಿಕ್ ಲವ್ ಸ್ಟೋರಿ' ಎಂಬ ಹೆಸರನ್ನ ಇಡಲಾಗಿದೆ. ಸ್ಕೂಲ್ ಲವ್ ಸ್ಟೋರಿಯಾಗಿರೋ ಈ ಚಿತ್ರದಲ್ಲಿ ಹೈಸ್ಕೂಲ್ ಪ್ರೇಮಕಥೆಯನ್ನು ತೋರಿಸಲಾಗಿದೆ. ಪ್ರೇಮಿಗಳ ದಿನಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ.

  ಈ ಚಿತ್ರದ ಒಂದು ಸಣ್ಣ ದೃಶ್ಯದ ಮೂಲಕ ಪ್ರಿಯಾ ವಾರಿಯರ್ ದೇಶ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದರು. ಆ ವೈರಲ್ ವಿಡಿಯೋದಿಂದ ಕನ್ನಡದಲ್ಲಿ ಕೂಡ ಪ್ರಿಯಾ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿತ್ತು. ಇದೇ ಕಾರಣದಿಂದ ಈ ಚಿತ್ರವನ್ನು ಕನ್ನಡದಲ್ಲಿಯೂ ತರಲು ಚಿತ್ರತಂಡ ತಯಾರಿ ನಡೆಸಿದೆ.

  English summary
  Actress Priya Varrier's 'Oru Adaar Love' movie will be dubbed in kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X