For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಟೀಸರ್ ಕಂಡು 'ವಾಹ್' ಎಂದ ಪರಭಾಷೆ ತಾರೆಯರು ಯಾರ್ ಯಾರು?

  |

  ಕೆಜಿಎಫ್ ಚಿತ್ರದಿಂದ ಇಡೀ ಭಾರತ ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆ ನೋಡುವಂತಾಗಿದೆ. ಈಗ ಚಾಪ್ಟರ್ 2 ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ನೋಡಿದ ಪರಭಾಷೆ ಮಂದಿ ವಾಹ್ ಎನ್ನುತ್ತಿದ್ದಾರೆ. ಹಾಲಿವುಡ್ ಚಿತ್ರಗಳಿಗೆ ಸೆಡ್ಡು ಹೊಡೆಯುವಂತಹ ಮೇಕಿಂಗ್ ಈ ಟೀಸರ್‌ನಲ್ಲಿ ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಕೆಜಿಎಫ್ ಕನ್ನಡ ಸಿನಿಮಾ ಆಗಿದ್ದರೂ ಈ ಸಿನಿಮಾದ ಮೇಲೆ ಪರಭಾಷೆಯಲ್ಲೂ ಹೆಚ್ಚು ನಿರೀಕ್ಷೆ ಇದೆ. ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಕೆಜಿಎಫ್ ರಿಲೀಸ್ ಆಗುತ್ತಿದ್ದು, ಆಯಾ ಭಾಷೆಯ ಸ್ಟಾರ್ ನಟರ ಚಿತ್ರಗಳಿಗೆ ಸೆಡ್ಡು ಹೊಡೆಯಲಿದೆ ಎಂಬ ಟಾಕ್ ಸಹ ಇದೆ. ಇದೀಗ, ಕೆಜಿಎಫ್ ಟೀಸರ್ ನೋಡಿ ಬೇರೆ ಭಾಷೆಯ ಕಲಾವಿದರು ಏನಂದ್ರು? ಮುಂದೆ ಓದಿ...

  ಕೆಜಿಎಫ್ ಟೀಸರ್ ಸೂಪರ್: ಆದ್ರೂ ಆ ವಿಚಾರಕ್ಕೆ ಬೇಸರಗೊಂಡ ಅಭಿಮಾನಿಗಳು!

  ಕಾರ್ತಿಕೇಯ

  ಕಾರ್ತಿಕೇಯ

  'ಪವರ್‌ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್‌ಫುಲ್.....' ಈ ಸಾಲುಗಳು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬಹಳ ಸೂಕ್ತವಾಗುತ್ತದೆ. ಯಶ್ ಅವರಿಗೆ ಮಾತ್ರವಲ್ಲ ಪ್ರಶಾಂತ್ ನೀಲ್ ಅವರಿಗೂ ಇದು ಚೆನ್ನಾಗಿ ಸೂಕ್ತವಾಗುತ್ತದೆ'' ಎಂದು ತೆಲುಗು ನಟ ಕಾರ್ತಿಕೇಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಹೃತಿಕ್ ರೋಷನ್

  ಹೃತಿಕ್ ರೋಷನ್

  ಬಾಲಿವುಡ್ ಇಂಡಸ್ಟ್ರಿಯ ಸೂಪರ್ ಹೀರೋ ಹೃತಿಕ್ ರೋಷನ್ ಕೆಜಿಎಫ್ ಟೀಸರ್ ನೋಡಿದ್ದು ತೀವ್ರ ಸಂತಸ ಹಂಚಿಕೊಂಡಿದ್ದಾರೆ. ''ಎಂತಹ ಅದ್ಭುತ ಟ್ರೈಲರ್, ಕೆಜಿಎಫ್ ಚಿತ್ರತಂಡಕ್ಕೆ ಶುಭಾಶಯಗಳು ಹಾಗೂ ಹ್ಯಾಪಿ ಬರ್ತಡೇ ಯಶ್'' ಎಂದು ಪೋಸ್ಟ್ ಮಾಡಿದ್ದಾರೆ.

  ಕೆಜಿಎಫ್ 2 ಟೀಸರ್ ಸಕ್ಸಸ್ ಹಿಂದಿದೆ ಮಾಸ್ಟರ್ ಪ್ಲಾನ್, ಆ ಕಾರಣದಿಂದಲೇ ಈ ದಾಖಲೆ ಆಗಿದ್ದು!

  ವಿಷ್ಣು ವಿಶಾಲ್

  ವಿಷ್ಣು ವಿಶಾಲ್

  ತಮಿಳು ನಟ ವಿಷ್ಣು ವಿಶಾಲ್ ಅವರು ಕೆಜಿಎಫ್ ಟೀಸರ್ ಇಷ್ಟಪಟ್ಟಿದ್ದು ಟ್ವಿಟ್ಟರ್ ಮೂಲಕ ಶ್ಲಾಘಿಸಿದ್ದಾರೆ. ''ಕೆಜಿಎಫ್ ಟೀಸರ್ ಸಖತ್ ಆಗಿದೆ. ಯಶ್ ಅವರ ಪರ್ಫಾಮೆನ್ಸ್ ಚಿಂದಿ, ಪ್ರಶಾಂತ್ ನೀಲ್ ಅವರ ಕೆಲಸ ನಿಜಕ್ಕೂ ಅದ್ಭುತ, ಕಾಯುತ್ತಿದ್ದೇವೆ'' ಎಂದು ವಿಷ್ಣು ವಿಶಾಲ್ ಟ್ವೀಟ್ ಮಾಡಿದ್ದಾರೆ.

  ಹರೀಶ್ ಶಂಕರ್ ಎಸ್

  ಹರೀಶ್ ಶಂಕರ್ ಎಸ್

  ತೆಲುಗು ನಿರ್ದೇಶಕ ಹರೀಶ್ ಶಂಕರ್ ಎಸ್ ಸಹ ಕೆಜಿಎಫ್ ಟೀಸರ್ ಕಂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಯಶ್ ಭಾಯ್ ನಿಜಕ್ಕೂ ಅದ್ಭುತ, ಹೊಗಳಲು ಪದಗಳೇ ಸಿಗ್ತಿಲ್ಲ. ಯಶ್ ಮತ್ತು ಪ್ರಶಾಂತ್ ನೀಲ್ ಅವರಿಗೆ ಶುಭಾಶಯಗಳು'' ಎಂದು ಟ್ವೀಟ್ ಮಾಡಿದ್ದಾರೆ.

  ಪೂರಿ ಜಗನ್ನಾಥ್

  ಪೂರಿ ಜಗನ್ನಾಥ್

  ತೆಲುಗಿನ ಸೂಪರ್ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಸಹ ಕೆಜಿಎಫ್ ಟೀಸರ್ ಕಂಡ ಬೆರಗಾಗಿದ್ದಾರೆ. ಕಮರ್ಷಿಯಲ್ ಅಂಶಗಳೊಂದಿಗೆ ಇಂತಹ ಅದ್ಭುತ ಮೇಕಿಂಗ್ ಮಾಡಿರುವುದು ಅತ್ಯುತ್ತಮ ಎನಿಸುತ್ತಿದೆ. ಸೂಪರ್ ಟ್ರೈಲರ್ ಯಶ್, ಹ್ಯಾಪಿ ಬರ್ತಡೇ ಹಾಗೂ ನಿಮ್ಮ ಯಶಸ್ಸು ಮುಂದುವರಿಯಲಿ'' ಎಂದು ವಿಶ್ ಮಾಡಿದ್ದಾರೆ.

  ಶಿವಕಾರ್ತಿಕೇಯನ್

  ಶಿವಕಾರ್ತಿಕೇಯನ್

  ''ಇಷ್ಟು ದಿನ ಈ ಟೀಸರ್‌ಗಾಗಿ ಕಾಯುತ್ತಿದ್ದೇವೆ, ಈಗ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ಕಾತುರದಿಂದ ಇದ್ದೇವೆ. ಯಶ್, ಪ್ರಶಾಂತ್ ನೀಲ್, ಸಂಜಯ್ ದತ್, ರವೀನಾ ಟಂಡನ್, ರವಿ ಬಸ್ರೂರು, ಹೊಂಬಾಳೆ ಫಿಲಂಸ್, ಶ್ರೀನಿಧಿ ಶೆಟ್ಟಿ ಇಡೀ ಕೆಜಿಎಫ್ ಚಿತ್ರತಂಡಕ್ಕೆ ಒಳ್ಳೆಯದಾಗಲಿ'' ಎಂದು ವಿಶ್ ಮಾಡಿದ್ದಾರೆ.

  ದೇವಿಶ್ರೀ ಪ್ರಸಾದ್

  ದೇವಿಶ್ರೀ ಪ್ರಸಾದ್

  ಅದ್ಭುತವಾದ ಟ್ರೈಲರ್, ಇಡೀ ಚಿತ್ರತಂಡಕ್ಕೆ ಮೆಚ್ಚುಗೆ ಎಂದು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಯಶ್ ಅವರ ಹುಟ್ಟುಹಬ್ಬಕ್ಕೆ ಸಹ ವಿಶ್ ಮಾಡಿದ್ದಾರೆ.

  English summary
  Rocking star Yash starrer KGF chapter 2 teaser released. other language actors praised KGF 2 teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X