For Quick Alerts
  ALLOW NOTIFICATIONS  
  For Daily Alerts

  ಸಂಜನಾ ಮತಾಂತರ ವಿವಾದ: ಗಮನಿಸಬೇಕಾಗಿರುವ ವಿಷಯವೆ ಬೇರೆ ಎಂದ ಪ್ರಥಮ್

  |

  ಪ್ರಸ್ತುತ ಎಲ್ಲಾ ಮಾಧ್ಯಗಳಲ್ಲೂ ಸಂಜನಾ ಗಲ್ರಾನಿಯದ್ದೇ ವಿಷಯ. ಮೊದಲಿಗೆ ಡ್ರಗ್ಸ್ ಜಾಲದ ಕುರಿತಿದ್ದ ಚರ್ಚೆಗಳು ಈಗ ಸಂಜನಾ ಧರ್ಮದ ಕುರಿತಾಗಿ ಬದಲಾಗಿವೆ.

  ಚೀನಾ ಗಡಿ ಬಿಕ್ಕಟ್ಟು, ಕೊರೊನಾ ಸಂಕಷ್ಟ, ಹೊಸ ಕಾಯ್ದೆ, ಸಂಸತ್‌ ಅಧಿವೇಶನ, ವಿಧಾನಸಭೆ ಅಧಿವೇಶನ ಎಲ್ಲವನ್ನೂ ಮೀರಿಸಿ ಸಂಜನಾರ ಮತಾಂತರ ಸುದ್ದಿಯೇ ಸದ್ದು ಮಾಡುತ್ತಿದೆ. ಪ್ರಸ್ತುತ ನಾಡಿನ ಜನರ ಮುಂದಿರುವ ಪ್ರಮುಖ ಸಮಸ್ಯೆ ಇದೇ ಎಂಬಂತೆ ಚರ್ಚಿತವಾಗುತ್ತಿದೆ ಸಂಜನಾ ಮತಾಂತರ ವಿಷಯ.

  ಸಂಕಷ್ಟಕ್ಕೆ ಸಿಲುಕಿದ ನೇಕಾರ ದಂಪತಿಯ ನೆರವಿಗೆ ಧಾವಿಸಿದ ನಟಿ ಪ್ರಣೀತಾಸಂಕಷ್ಟಕ್ಕೆ ಸಿಲುಕಿದ ನೇಕಾರ ದಂಪತಿಯ ನೆರವಿಗೆ ಧಾವಿಸಿದ ನಟಿ ಪ್ರಣೀತಾ

  ಕೆಲವರಾದರೂ ನಾಡಿನ ಜನರ ಮುಂದಿರುವ ನಿಜವಾದ ಸಮಸ್ಯೆಗಳೇನು ಎಂಬುದರ ಬಗ್ಗೆ ಬೊಟ್ಟು ಮಾಡುವ ಪ್ರಯತ್ನವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿದ್ದಾರೆ. ಅದರಲ್ಲಿ ಬಿಗ್‌ಬಾಸ್ ಮಾಜಿ ವಿನ್ನರ್, ನಟ ಪ್ರಥಮ್ ಸಹ ಒಬ್ಬರು.

  ಸಂಜನಾ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಅದಕ್ಕೆ ಪೂರಕವಾಗಿ ದಾಖಲೆಯೊಂದನ್ನು ಸಹ ಬಿಡುಗಡೆ ಮಾಡಿದ್ದರು. ಆಗಿನಿಂದಲೂ ಮಾಧ್ಯಮಗಳಲ್ಲಿ ಅದೇ ಚರ್ಚೆಯ ವಿಷಯವಾಗಿದೆ.

  ಸರ್ಕಾರದ ಮೇಲೆ ಒತ್ತಡ ಹೇರಿ: ಪ್ರಥಮ್

  ಸರ್ಕಾರದ ಮೇಲೆ ಒತ್ತಡ ಹೇರಿ: ಪ್ರಥಮ್

  ಈ ಬಗ್ಗೆ ಟ್ವೀಟ್ ಮಾಡಿರುವ ಒಳ್ಳೆ ಹುಡುಗ ಪ್ರಥಮ್, 'ಮುಖ್ಯ ವಿಷಯ'ದ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದ್ದಾರೆ. 'ಸಂಜನಾ ಮುಸ್ಲಿಂ ಆದ್ರಾ, ಅವರದ್ದು ಲವ್ ಜಿಹಾದ್‌ ಇರ್ಬೋದಾ? ಇದೆಲ್ಲಾ ಅವ್ರ ವೈಯಕ್ತಿಕ ವಿಷಯ. ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ ಸೇರಿದಂತೆ ಹಲವು ಕಡೆ ಪ್ರವಾಹ ಬರುತ್ತಿದೆ. ಜನ-ಜಾನುವಾರುಗಳು ಸಾಯುತ್ತಿವೆ. ಅವರ ರಕ್ಷಣೆಗೆ ಸರ್ಕಾರದ ಮೇಲೆ ಒತ್ತಡ ಹಾಕಿ' ಎಂದು ಮೌಲ್ಯಯುತವಾದ ಸಲಹೆ ನೀಡಿದ್ದಾರೆ ಪ್ರಥಮ್.

  'ಸಂಜನಾ ಮತಾಂತರ ಆಗೋದು ಈ ದೇಶದ ಸಮಸ್ಯೆಯಲ್ಲ'

  'ಸಂಜನಾ ಮತಾಂತರ ಆಗೋದು ಈ ದೇಶದ ಸಮಸ್ಯೆಯಲ್ಲ'

  ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಪ್ರಥಮ್, 'ನನ್ನೂರಿನಲ್ಲಿ ಕೃಷಿ ಮಾಡಿಕೊಂಡು ನೆಮ್ಮದಿಯಿಂದ ದಿನ ಕಳೆಯುತ್ತಿದ್ದೇನೆ. ಆಗೊಮ್ಮೆ ಈಗೊಮ್ಮೆ ಸುದ್ದಿ ನೋಡಿದಾಗ 2020 ವರ್ಷ ಇಷ್ಟೋಂದು ಕ್ರೂರವಾಯ್ತಲ್ಲಾ ಅಂತ ಮನಸ್ಸಿಗೆ ಬಹಳ ಬೇಸರವಾಗುತ್ತದೆ. ಸಂಜನಾ ಮತಾಂಥರ ಆಗೋದು ಈ ದೇಶದ ಸಮಸ್ಯೆಯಲ್ಲ, ಆಯಮ್ಮನ ಬಗ್ಗೆ ತಲೆಕೆಡಿಸಿಕೊಳ್ಳುವ ಅಥವಾ ಯೋಚನೆ ಮಾಡುವ ಅಗತ್ಯವೂ ಇಲ್ಲ. ಹೋದವರು ಹೋಗ್ಲಿ, ಆಕೆಯ ಇಷ್ಟ, ಏನಾದ್ರೂ ಮಾಡಿಕೊಳ್ಳಲಿ' ಎಂದಿದ್ದಾರೆ ಪ್ರಥಮ್.

  'ರಾಗಿಣಿ-ಸಂಜನಾ ಬಿಟ್ಟು ಜನರನ್ನು ಕಾಪಾಡುವತ್ತ ಗಮನ ಹರಿಸಿ'

  'ರಾಗಿಣಿ-ಸಂಜನಾ ಬಿಟ್ಟು ಜನರನ್ನು ಕಾಪಾಡುವತ್ತ ಗಮನ ಹರಿಸಿ'

  ಮುಂದುವರೆದು, 'ಇಂದಿನಿಂದ ವಿಧಾನಸಭಾ ಅಧಿವೇಶನ ಪ್ರಾರಂಭವಾಗುತ್ತಿದೆ. ಮಾನ್ಯ ಆಡಳಿತ ಪಕ್ಷ-ವಿರೋಧಪಕ್ಷದವರು ರಾಗಿಣಿ-ಸಂಜನಾ ರ ಜಪ ಬಿಟ್ಟು ದಯವಿಟ್ಟು ಜನ-ಜಾನುವಾರುಗಳನ್ನ ರಕ್ಷಿಸೋಕೆ ಸರ್ವಪಕ್ಷಗಳು ಒಂದಾಗಿ, ಒಬ್ಬ ಸಾಮಾನ್ಯ ಭಾರತೀಯನಾಗಿ ಚುನಾಯಿತ ನಾಯಕರಲ್ಲಿ ಮನವಿ ಮಾಡುತ್ತಿದ್ದೀನಿ' ಎಂದಿದ್ದಾರೆ ಪ್ರಥಮ್.

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
  ಮತಾಂತರಕ್ಕಿಂತಲೂ ಪ್ರವಾಹ ಅಪಾಯಕಾರಿ

  ಮತಾಂತರಕ್ಕಿಂತಲೂ ಪ್ರವಾಹ ಅಪಾಯಕಾರಿ

  'ಸಂಜನಾರ ಮತಾಂತರಕ್ಕಿಂತಲೂ, ಪ್ರವಾಹ ಅತ್ಯಂತ ಅಪಾಯಕಾರಿ ಎಂದು ತಿಳಿಸುವುದಷ್ಟೇ ನನ್ನ ಉದ್ದೇಶ ಎಂದಿರುವ ಪ್ರಥಮ್, ಮಾಧ್ಯಮಗಳು ಹಾಗೂ ರಾಜಕಾರಣಿಗಳು ನಿಜವಾಗಿ ಸ್ಪಂದಿಸಬೇಕಾದ, ಆತಂಕ ಪಡಬೇಕಾದ ವಿಷಯದತ್ತ ಬೊಟ್ಟು ಮಾಡಿದ್ದಾರೆ.

  English summary
  Actor Pratham unhappy that no media is talking enough about flood that hit Karnataka's some districts. He said our focus should shift to Flood from Sanjana's religion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X