»   » ರಾಜ್ ಅಭಿನಯದ 30 ಚಿತ್ರಗಳು, ಹುಟ್ಟುಹಬ್ಬ ವಿಶೇಷ

ರಾಜ್ ಅಭಿನಯದ 30 ಚಿತ್ರಗಳು, ಹುಟ್ಟುಹಬ್ಬ ವಿಶೇಷ

Posted By:
Subscribe to Filmibeat Kannada

ಇಂದು (ಏ 24) ಕನ್ನಡ ಚಿತ್ರೋದ್ಯಮದ 'ಮರೆಯಲಾರದ ಮುತ್ತು' ಡಾ. ರಾಜಕುಮಾರ್ ಅವರ 87ನೇ ಹುಟ್ಟುಹಬ್ಬದ ಸಂಭ್ರಮ.

ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳಿಗೆ ಜನಿಸಿದ ರಾಜಕುಮಾರ್, ಬೇಡರ ಕಣ್ಣಪ್ಪ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾದರು. ಒಟ್ಟು 208 ಚಿತ್ರಗಳಲ್ಲಿ ನಟಿಸಿದ ರಾಜ್ ಅವರ ಕೊನೆಯ ಚಿತ್ರ ಶಬ್ದವೇದಿ.

ಪ್ರತಿಷ್ಠಿತ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಹನ್ನೊಂದು ರಾಜ್ಯ ಪ್ರಶಸ್ತಿ, ಹತ್ತು ಫಿಲಂಫೇರ್ ಪ್ರಶಸ್ತಿ, ಉತ್ತಮ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ, ಎನ್ಟಿಆರ್ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ರಾಜ್ ತನ್ನ ಕಲಾಸೇವೆಯ ಮೂಲಕ ಪಡೆದಿದ್ದಾರೆ. (ರಾಜ್ ಜೀವನದಲ್ಲಿನ ಶಿಸ್ತು)

ರಾಜ್ ಹುಟ್ಟುಹಬ್ಬದ ದಿನ ಅವರ ಅಭಿನಯಿಸಿದ 208 ಚಿತ್ರಗಳ ಪೈಕಿ, ಮೂವತ್ತು ಚಿತ್ರಗಳ ಫ್ಲ್ಯಾಶ್ ಬ್ಯಾಕ್, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಬೇಡರ ಕಣ್ಣಪ್ಪ

ಬಿಡುಗಡೆಯಾದ ವರ್ಷ: 1954
ನಿರ್ದೇಶನ: HLN ಸಿಂಹ
ಪ್ರಮುಖ ತಾರಾಗಣ: ರಾಜಕುಮಾರ್, ಪಂಡರೀಬಾಯಿ, ನರಸಿಂಹರಾಜು, ಜಿ ವಿ ಐಯ್ಯರ್

ಭೂಕೈಲಾಸ

ಬಿಡುಗಡೆಯಾದ ವರ್ಷ: 1958
ನಿರ್ದೇಶನ: ಕೆ ಶಂಕರ್
ಪ್ರಮುಖ ತಾರಾಗಣ: ರಾಜಕುಮಾರ್, ಕಲ್ಯಾಣ್ ಕುಮಾರ್, ಜಮುನಾ, ಬಿ ಸರೋಜಾ ದೇವಿ

ಸಂತ ತುಕರಾಂ

ಬಿಡುಗಡೆಯಾದ ವರ್ಷ: 1964
ನಿರ್ದೇಶನ: ಪಿ ಆರ್ ಕೌಂಡಿನ್ಯ
ಪ್ರಮುಖ ತಾರಾಗಣ: ರಾಜಕುಮಾರ್, ಲೀಲಾವತಿ, ಸದಾಶಿವಯ್ಯ

ಮೇಯರ್ ಮುತ್ತಣ್ಣ

ಬಿಡುಗಡೆಯಾದ ವರ್ಷ: 1969
ನಿರ್ದೇಶನ: ಸಿದ್ದಲಿಂಗಯ್ಯ
ಪ್ರಮುಖ ತಾರಾಗಣ: ರಾಜಕುಮಾರ್, ಭಾರತಿ, ದ್ವಾರಕೀಶ್, ಶಂಕರ್

ಶ್ರೀಕೃಷ್ಣ ದೇವರಾಯ

ಬಿಡುಗಡೆಯಾದ ವರ್ಷ: 1970
ನಿರ್ದೇಶನ: ಬಿ ಆರ್ ಪಂತುಲು
ಪ್ರಮುಖ ತಾರಾಗಣ: ರಾಜಕುಮಾರ್, ಭಾರತಿ, ಜಯಂತಿ, ಪಂತುಲು, ರಾಜಮ್ಮ, ನರಸಿಂಹರಾಜು

ಕಸ್ತೂರಿನಿವಾಸ

ಬಿಡುಗಡೆಯಾದ ವರ್ಷ: 1971
ನಿರ್ದೇಶನ: ದೊರೆ - ಭಗವಾನ್
ಪ್ರಮುಖ ತಾರಾಗಣ: ರಾಜಕುಮಾರ್, ಜಯಂತಿ, ಆರತಿ, ರಾಜಾಶಂಕರ್, ಅಶ್ವಥ್, ಟಿ ಎನ್ ಬಾಲಕೃಷ್ಣ, ನರಸಿಂಹರಾಜು

ಶ್ರೀಕೃಷ್ಣ, ರುಕ್ಮಿಣಿ, ಸತ್ಯಭಾಮ

ಬಿಡುಗಡೆಯಾದ ವರ್ಷ: 1971
ನಿರ್ದೇಶನ: ಕೆ ಎಸ್ ಎಲ್ ಸ್ವಾಮಿ
ಪ್ರಮುಖ ತಾರಾಗಣ: ರಾಜಕುಮಾರ್, ಭಾರತಿ, ಆರತಿ, ಬಿ ಸರೋಜಾದೇವಿ, ಶ್ರೀನಾಥ್

ಸಿಪಾಯಿರಾಮು

ಬಿಡುಗಡೆಯಾದ ವರ್ಷ: 1972
ನಿರ್ದೇಶನ: ವೈ ಆರ್ ಸ್ವಾಮಿ
ಪ್ರಮುಖ ತಾರಾಗಣ: ರಾಜಕುಮಾರ್, ಆರತಿ, ಲೀಲಾವತಿ, ತೂಗುದೀಪ ಶ್ರೀನಿವಾಸ, ವಜ್ರಮುನಿ

ಬಂಗಾರದ ಮನುಷ್ಯ

ಬಿಡುಗಡೆಯಾದ ವರ್ಷ: 1972
ನಿರ್ದೇಶನ: ಸಿದ್ದಲಿಂಗಯ್ಯ
ಪ್ರಮುಖ ತಾರಾಗಣ: ರಾಜಕುಮಾರ್, ಭಾರತಿ, ವಜ್ರಮುನಿ, ಟಿ ಎನ್ ಬಾಲಕೃಷ್ಣ, ದ್ವಾರಕೀಶ್

ಜಗಮೆಚ್ಚಿದ ಮಗ

ಬಿಡುಗಡೆಯಾದ ವರ್ಷ: 1972
ನಿರ್ದೇಶನ: ಹುಣಸೂರು ಕೃಷ್ಣಮೂರ್ತಿ
ಪ್ರಮುಖ ತಾರಾಗಣ: ರಾಜಕುಮಾರ್, ಭಾರತಿ, ಎಂ ಪಿ ಶಂಕರ್, ಅಶ್ವಥ್

ಗಂಧದಗುಡಿ

ಬಿಡುಗಡೆಯಾದ ವರ್ಷ: 1973
ನಿರ್ದೇಶನ: ವಿಜಯ್
ಪ್ರಮುಖ ತಾರಾಗಣ: ರಾಜಕುಮಾರ್, ವಿಷ್ಣುವರ್ಧನ್, ಕಲ್ಪನ, ಎಂ ಪಿ ಶಂಕರ್, ಟಿ ಎನ್ ಬಾಲಕೃಷ್ಣ

ದೂರದಬೆಟ್ಟ

ಬಿಡುಗಡೆಯಾದ ವರ್ಷ: 1973
ನಿರ್ದೇಶನ: ಸಿದ್ದಲಿಂಗಯ್ಯ
ಪ್ರಮುಖ ತಾರಾಗಣ: ರಾಜಕುಮಾರ್, ಭಾರತಿ, ಅಶ್ವಥ್, ಸಂಪತ್

ಎರಡುಕನಸು

ಬಿಡುಗಡೆಯಾದ ವರ್ಷ: 1974
ನಿರ್ದೇಶನ: ದೊರೆ - ಭಗವಾನ್
ಪ್ರಮುಖ ತಾರಾಗಣ: ರಾಜಕುಮಾರ್, ಮಂಜುಳ, ಕಲ್ಪನ, ಅಶ್ವಥ್

ಭಕ್ತಕುಂಬಾರ

ಬಿಡುಗಡೆಯಾದ ವರ್ಷ: 1974
ನಿರ್ದೇಶನ: ಹುಣಸೂರು ಕೃಷ್ಣಮೂರ್ತಿ
ಪ್ರಮುಖ ತಾರಾಗಣ: ರಾಜಕುಮಾರ್, ಮಂಜುಳ, ಲೀಲಾವತಿ, ಟಿ ಎನ್ ಬಾಲಕೃಷ್ಣ

ಸಂಪತ್ತಿಗೆ ಸವಾಲ್

ಬಿಡುಗಡೆಯಾದ ವರ್ಷ: 1974
ನಿರ್ದೇಶನ: ಎ ವಿ ಶೇಷಗಿರಿ ರಾವ್
ಪ್ರಮುಖ ತಾರಾಗಣ: ರಾಜಕುಮಾರ್, ಮಂಜುಳ, ಟಿ ಎನ್ ಬಾಲಕೃಷ್ಣ, ವಜ್ರಮುನಿ

ಶ್ರೀ ಶ್ರೀನಿವಾಸ ಕಲ್ಯಾಣ

ಬಿಡುಗಡೆಯಾದ ವರ್ಷ: 1974
ನಿರ್ದೇಶನ: ವಿಜಯ್
ಪ್ರಮುಖ ತಾರಾಗಣ: ರಾಜಕುಮಾರ್, ಬಿ ಸರೋಜ ದೇವಿ, ಮಂಜುಳ, ರಾಜಾಶಂಕರ್

ಮಯೂರ

ಬಿಡುಗಡೆಯಾದ ವರ್ಷ: 1975
ನಿರ್ದೇಶನ: ವಿಜಯ್
ಪ್ರಮುಖ ತಾರಾಗಣ: ರಾಜಕುಮಾರ್, ಮಂಜುಳ, ಶ್ರೀನಾಥ್, ಅಶ್ವಥ್

ಪ್ರೇಮದ ಕಾಣಿಕೆ

ಬಿಡುಗಡೆಯಾದ ವರ್ಷ: 1976
ನಿರ್ದೇಶನ: ವಿ ಸೋಮಶೇಖರ್
ಪ್ರಮುಖ ತಾರಾಗಣ: ರಾಜಕುಮಾರ್, ಆರತಿ, ವಜ್ರಮುನಿ, ಜಯಮಾಲ, ತೂಗುದೀಪ ಶ್ರೀನಿವಾಸ್

ಬಹದ್ದೂರ್ ಗಂಡು

ಬಿಡುಗಡೆಯಾದ ವರ್ಷ: 1976
ನಿರ್ದೇಶನ: ಎ ವಿ ಶೇಷಗಿರಿ ರಾವ್
ಪ್ರಮುಖ ತಾರಾಗಣ: ರಾಜಕುಮಾರ್, ಆರತಿ, ವಜ್ರಮುನಿ, ಜಯಂತಿ, ತೂಗುದೀಪ ಶ್ರೀನಿವಾಸ್

ನಾನಿನ್ನ ಮರೆಯಲಾರೆ

ಬಿಡುಗಡೆಯಾದ ವರ್ಷ: 1976
ನಿರ್ದೇಶನ: ವಿಜಯ್
ಪ್ರಮುಖ ತಾರಾಗಣ: ರಾಜಕುಮಾರ್, ಲಕ್ಷ್ಮಿ, ಬಾಲಕೃಷ್ಣ, ಲೀಲಾವತಿ

ಬಡವರ ಬಂಧು

ಬಿಡುಗಡೆಯಾದ ವರ್ಷ: 1976
ನಿರ್ದೇಶನ: ವಿಜಯ್
ಪ್ರಮುಖ ತಾರಾಗಣ: ರಾಜಕುಮಾರ್, ಜಯಮಾಲ, ಅಶ್ವಥ್, ವಜ್ರಮುನಿ, ಟೈಗರ್ ಪ್ರಭಾಕರ್

ಬಬ್ರುವಾಹನ

ಬಿಡುಗಡೆಯಾದ ವರ್ಷ: 1977
ನಿರ್ದೇಶನ: ಹುಣಸೂರು ಕೃಷ್ಣಮೂರ್ತಿ
ಪ್ರಮುಖ ತಾರಾಗಣ: ರಾಜಕುಮಾರ್, ಜಯಮಾಲ, ಕಾಂಚನ, ಬಿ ಸರೋಜ ದೇವಿ

ಭಾಗ್ಯವಂತರು

ಬಿಡುಗಡೆಯಾದ ವರ್ಷ: 1977
ನಿರ್ದೇಶನ: ಎಚ್ ಆರ್ ಭಾರ್ಗವ
ಪ್ರಮುಖ ತಾರಾಗಣ: ರಾಜಕುಮಾರ್, ಬಿ ಸರೋಜ ದೇವಿ, ಅಶೋಕ್, ರಾಮಕೃಷ್ಣ

ಶಂಕರ್ ಗುರು

ಬಿಡುಗಡೆಯಾದ ವರ್ಷ: 1977
ನಿರ್ದೇಶನ: ವಿ ಸೋಮಶೇಖರ್
ಪ್ರಮುಖ ತಾರಾಗಣ: ರಾಜಕುಮಾರ್, ಜಯಮಾಲ, ವೈಶಾಲಿ, ಪದ್ಮಶ್ರೀ, ಕಾಂಚನ

ವಸಂತಗೀತ

ಬಿಡುಗಡೆಯಾದ ವರ್ಷ: 1980
ನಿರ್ದೇಶನ: ದೊರೆ-ಭಗವಾನ್
ಪ್ರಮುಖ ತಾರಾಗಣ: ರಾಜಕುಮಾರ್, ಗಾಯತ್ರಿ, ಅಶ್ವಥ್, ಶ್ರೀನಿವಾಸಮೂರ್ತಿ

ಚಲಿಸುವ ಮೋಡಗಳು

ಬಿಡುಗಡೆಯಾದ ವರ್ಷ: 1982
ನಿರ್ದೇಶನ: ಸಿಂಗೀತಂ ಶ್ರೀನಿವಾಸ ರಾವ್
ಪ್ರಮುಖ ತಾರಾಗಣ: ರಾಜಕುಮಾರ್, ಸರಿತಾ, ಅಂಬಿಕಾ, ಶಿವರಾಂ, ಅಶ್ವಥ್, ಪುನೀತ್ ರಾಜಕುಮಾರ್

ಭಕ್ತಪ್ರಹ್ಲಾದ

ಬಿಡುಗಡೆಯಾದ ವರ್ಷ: 1983
ನಿರ್ದೇಶನ: ವಿಜಯ್
ಪ್ರಮುಖ ತಾರಾಗಣ: ರಾಜಕುಮಾರ್, ಸರಿತಾ, ತೂಗುದೀಪ ಶ್ರೀನಿವಾಸ್, ಅನಂತನಾಗ್, ಪುನೀತ್ ರಾಜಕುಮಾರ್

ಕವಿರತ್ನ ಕಾಳಿದಾಸ

ಬಿಡುಗಡೆಯಾದ ವರ್ಷ: 1983
ನಿರ್ದೇಶನ: ರೇಣುಕಾ ಶರ್ಮ
ಪ್ರಮುಖ ತಾರಾಗಣ: ರಾಜಕುಮಾರ್, ಜಯಪ್ರದ, ಕೆ ವಿಜಯ, ನಳಿನಿ

ಶ್ರಾವಣ ಬಂತು

ಬಿಡುಗಡೆಯಾದ ವರ್ಷ: 1984
ನಿರ್ದೇಶನ:ಸಿಂಗೀತಂ ಶ್ರೀನಿವಾಸ ರಾವ್
ಪ್ರಮುಖ ತಾರಾಗಣ: ರಾಜಕುಮಾರ್, ಊರ್ವಶಿ, ಶ್ರೀನಾಥ್, ವಿಜಯರಂಜಿನಿ

ಆಕಸ್ಮಿಕ

ಬಿಡುಗಡೆಯಾದ ವರ್ಷ: 1993
ನಿರ್ದೇಶನ: ನಾಗಾಭರಣ
ಪ್ರಮುಖ ತಾರಾಗಣ: ರಾಜಕುಮಾರ್, ಮಾಧವಿ, ಗೀತಾ, ವಜ್ರಮುನಿ

English summary
Padma Bhushan Dr. Rajkumar Birth day special, 30 best movies of Raj filmi career.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada