For Quick Alerts
  ALLOW NOTIFICATIONS  
  For Daily Alerts

  ಸುದೀಪ್ 'ಪೈಲ್ವಾನ್'ಗೆ ಎದುರಾಳಿಯಾಗಿ ನಿಂತ 'ಗ್ಯಾಂಗ್ ಲೀಡರ್'

  |

  ತೆಲುಗು ಸೂಪರ್ ಹಿಟ್ ಚಿತ್ರ 'ಈಗ' ನೆನಪಿರಬಹುದು. ರಾಜಮೌಳಿ ನಿರ್ದೇಶನದ ಈ ಚಿತ್ರದ ಮೂಲಕ ಕನ್ನಡ ನಟ ಕಿಚ್ಚ ಸುದೀಪ್ ಮೊದಲ ಸಲ ತೆಲುಗು ಪ್ರೇಕ್ಷಕರ ಎದುರು ಬಂದರು. ನೆಗಿಟೀವ್ ಪಾತ್ರದಲ್ಲಿ ನಟಿಸಿದ್ದ ಸುದೀಪ್ ಎದುರು ನಾನಿ ನಾಯಕನಾಗಿ ಕಾಣಿಸಿಕೊಂಡಿದ್ದರು.

  ನಾನಿ ವರ್ಸಸ್ ಸುದೀಪ್ ಕಾಂಬಿನೇಷನ್ ನಲ್ಲಿ ಬಂದಿದ್ದ 'ಈಗ' ಸಿನಿಮಾ ಆಲ್ ಟೈಂ ಹಿಟ್ ಚಿತ್ರ. ಈ ಸಿನಿಮಾದ ಬಳಿಕ ಸುದೀಪ್ ಮತ್ತು ನಾನಿ ಒಟ್ಟಿಗೆ ನಟಿಸಿಲ್ಲ. ಇದೀಗ, ಏಳು ವರ್ಷದ ಬಳಿಕ ಬಾಕ್ಸ್ ಆಫೀಸ್ ನಲ್ಲಿ ಸುದೀಪ್ ಮತ್ತು ನಾನಿ ಮುಖಾಮುಖಿ ಆಗ್ತಿದ್ದಾರೆ.

  'ನಿಮ್ಮ ಬಾಸ್ ಯಾರು' ಎಂದು ಕೇಳಿದ್ದಕ್ಕೆ ಸುದೀಪ್ ಹೇಳಿದ ಹೆಸರು ಯಾವುದು?

  ದಿನದಿಂದ ದಿನಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗ್ತಿದ್ಯಾ? | Sudeep | FILMIBEAT KANNADA

  ಅಂದು ಒಂದೇ ಚಿತ್ರದಲ್ಲಿ ಎದುರಾಳಿಗಳಂತೆ ಕಾದಾಡಿದ್ದ ಕಿಚ್ಚ ಮತ್ತು ನಾನಿ ಈಗ ಬೇರೆ ಬೇರೆ ಸಿನಿಮಾಗಳ ಮೂಲಕ ಎದುರಾಳಿಗಳಂತೆ ನಿಂತಿದ್ದಾರೆ. ಹೌದು, ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಬಿಡುಗಡೆಯ ದಿನದಂದೇ ನಾನಿ ಅಭಿನಯದ 'ಗ್ಯಾಂಗ್ ಲೀಡರ್' ಸಿನಿಮಾನೂ ತೆರೆಕಾಣುತ್ತಿದೆ.

  ಇದು ಸಹಜವಾಗಿ ಕರ್ನಾಟಕ ಮತ್ತು ಆಂಧ್ರ, ತೆಲಂಗಾಣದಲ್ಲಿ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ ಬಾಕ್ಸ್ ಆಫೀಸ್ ಪಂಡಿತರು. ಯಾಕಂದ್ರೆ, ಕನ್ನಡದಲ್ಲಿ ಸುದೀಪ್ ಇದ್ದಂತೆ ನಾನಿ ಕೂಡ ತೆಲುಗು ರಾಜ್ಯದಲ್ಲಿ ಕ್ರೇಜ್ ಹೊಂದಿದ್ದಾರೆ.

  'ಮನೆಗೆ ಯಾವಾಗ ಬರ್ತೀರಾ' ಎಂದು ಕಿಚ್ಚನಿಗೆ ಓಪನ್ ಪ್ರಶ್ನೆ ಕೇಳಿದ್ದು ಯಾರು?

  ಕನ್ನಡದ ಪೈಲ್ವಾನ್ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ, ಗ್ಯಾಂಗ್ ಲೀಡರ್ ಮುಂದೆ ಪೈಲ್ವಾನ್ ಗಟ್ಟಿಯಾಗಿ ನಿಲ್ಲಬೇಕಾದ ಸಮಯ ಎದುರಾಗಿದೆ. ಅದೇ ರೀತಿ ಗ್ಯಾಂಗ್ ಲೀಡರ್ ಚಿತ್ರಕ್ಕೆ ಕರ್ನಾಟಕದಲ್ಲಿ ಬಹುದೊಡ್ಡ ಸವಾಲು ಎದುರಾಗಿದೆ. ಕಿಚ್ಚನ ಪೈಲ್ವಾನ್ ಮುಂದೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

  ಇನ್ನುಳಿದಂತೆ ಸುದೀಪ್ ಪೈಲ್ವಾನ್ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣುತ್ತಿದೆ. ಹೆಬ್ಬುಲಿ ಕೃಷ್ಣ ಈ ಚಿತ್ರ ನಿರ್ಮಾಣದ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಆಕಾಂಕ್ಷ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  English summary
  Box office clash this weekend September 12. Kiccha Sudeep's pailwaan and natural star Nani's gang leader releasing same week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X