Just In
Don't Miss!
- News
ನೇತಾಜಿ ಸಮಾರಂಭದಲ್ಲಿ ಜೈ ಶ್ರೀರಾಮ್ ಘೋಷಣೆ: ಬಿಜೆಪಿಗೆ RSS ಎಚ್ಚರಿಕೆ
- Lifestyle
ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್: ಚೆನ್ನೈಗೆ ಬಂದಿಳಿದ ಜೋ ರೂಟ್ ಪಡೆ
- Finance
900ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್; 13,967 ಪಾಯಿಂಟ್ ನಲ್ಲಿ ನಿಫ್ಟಿ ದಿನಾಂತ್ಯ
- Automobiles
ಅನಾವರಣವಾಯ್ತು 2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್ಎಸ್ ಬೈಕ್
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೈಲ್ವಾನ್ ಪಕ್ಕಾ ಆಯ್ತು, ಕುರುಕ್ಷೇತ್ರ ಗೊಂದಲವಾಗಿಯೇ ಉಳಿದಿದೆ.!
ದರ್ಶನ್ ಅಭಿನಯದ ಪೌರಾಣಿಕ ಚಿತ್ರ ಕುರುಕ್ಷೇತ್ರ ಆಡಿಯೋ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಕಡೆ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಈ ಹಿಂದೆ ಸುದ್ದಿಯಾದಂತೆ ಈ ಎರಡು ಚಿತ್ರಗಳು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತೆರೆಗೆ ಬರಲಿದೆ ಎನ್ನಲಾಗಿತ್ತು.
ಆದ್ರೀಗ ಎರಡೂ ಚಿತ್ರಗಳನ್ನ ತನ್ನ ಬಿಡುಗಡೆ ದಿನಾಂಕ ಬದಲಾಯಿಸಿಕೊಂಡಿದೆ ಎಂಬ ಮಾಹಿತಿ ಸಿಗುತ್ತಿದೆ. ಒಂದು ಸಿನಿಮಾ ಮುಂದಕ್ಕೆ ಹೋದರೇ, ಇನ್ನೊಂದು ಸಿನಿಮಾ ಹಿಂದಕ್ಕೆ ಬಂದಿದೆಯಂತೆ. ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಇರಲಿಲ್ಲ.
'ಪೈಲ್ವಾನ್' ರಿಲೀಸ್ ಡೇಟ್ ಮುಂದಕ್ಕೆ? ಬಿಡುಗಡೆ ದಿನಾಂಕದಲ್ಲಿದೆ ಇಷ್ಟೊಂದು ವಿಶೇಷ
ಇದೀಗ, ಈ ಗೊಂದಲದ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದು ಪೈಲ್ವಾನ್ ಮುಂದೂಡಿಕೆಯಾಗಿರುವುದು ನಿಜಾ ಎಂದಿದ್ದಾರೆ. ಮತ್ತು ಅದಕ್ಕೆ ಕಾರಣ ಕೂಡ ಕೊಟ್ಟಿದ್ದಾರೆ. ಹಾಗಿದ್ರೆ, ಕುರುಕ್ಷೇತ್ರ ಮತ್ತು ಪೈಲ್ವಾನ್ ಬಗ್ಗೆ ಸುದೀಪ್ ಏನಂದ್ರು? ಮುಂದೆ ಓದಿ....

ಯಾವ ಕ್ಲಾಶ್ ಆಗಲ್ಲ - ಸುದೀಪ್
ಕುರುಕ್ಷೇತ್ರ ಮತ್ತು ಪೈಲ್ವಾನ್ ಸಿನಿಮಾ ಒಟ್ಟಿಗೆ ಬಂದ್ರೆ ಯಾವುದೇ ಕ್ಲಾಶ್ ಆಗಲ್ಲ. ಇದೆಲ್ಲ ಸುಮ್ಮನೆ ಮಾತು ಅಷ್ಟೇ. ಕರ್ನಾಟಕದಲ್ಲಿರುವ ಎಲ್ಲ ಚಿತ್ರಮಂದಿರದಲ್ಲೂ ಒಂದೇ ಸಿನಿಮಾ ಬರಲ್ಲ. ಕುರುಕ್ಷೇತ್ರ ಕೆಲವು ಥಿಯೇಟರ್, ಪೈಲ್ವಾನ್ ಸಿನಿಮಾ ಕೆಲವು ಚಿತ್ರಮಂದಿರದಲ್ಲಿ ಬರುತ್ತೆ. ಎಲ್ಲಿಂದ ಥಿಯೇಟರ್ ಸಮಸ್ಯೆಯಾಗುತ್ತೆ ಎಂದು ಸುದೀಪ್ ಪ್ರಶ್ನಿಸಿದ್ದಾರೆ?

ಎರಡೂ ಸಿನಿಮಾನೂ ನೋಡ್ತಾರೆ
ಅಭಿಮಾನಿಗಳು ಎರಡೂ ಚಿತ್ರವನ್ನ ನೋಡ್ತಾರೆ. ಮೊದಲು ಆ ಸಿನಿಮಾ ನೋಡಬಹುದು ಅಥವಾ ನಮ್ಮ ಸಿನಿಮಾ ನೋಡಬಹುದು. ಒಟ್ನಲ್ಲಿ ನೋಡೋದು ಲೇಟ್ ಆದ್ರೂ ಎರಡೂ ಚಿತ್ರವನ್ನ ನೋಡೇ ನೋಡ್ತಾರೆ. ಅಲ್ಲಿಗೆ ಅಭಿಮಾನಿಗಳ ನಡುವೆ ವಾರ್ ಎಲ್ಲಿಂದ. ಎರಡೂ ಕನ್ನಡ ಸಿನಿಮಾನೇ ಅಲ್ವಾ. ಎರಡೂ ಚಿತ್ರವನ್ನ ನೋಡ್ತಾರೆ ಎಂದು ಸಮರ್ಥಿಸಿಕೊಂಡರು.
ವರಮಹಾಲಕ್ಷ್ಮಿ ಹಬ್ಬಕ್ಕು ಮೊದಲೆ ರಿಲೀಸ್ ಆಗುತ್ತೆ ದರ್ಶನ್ 'ಕುರುಕ್ಷೇತ್ರ'?

ಸುದೀಪ್ ಹುಟ್ಟುಹಬ್ಬಕ್ಕೆ ಪೈಲ್ವಾನ್.!
ಪೈಲ್ವಾನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಇನ್ನು ಸಮಯವಕಾಶ ಬೇಕಾಗಿದ್ದು, ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಸುದೀಪ್ ಹುಟ್ಟುಹಬ್ಬದ ವಿಶೇಷ ಸಿನಿಮಾ ರಿಲೀಸ್ ಮಾಡಲು ತಯಾರಿ ಮಾಡುತ್ತಿದ್ದಾರಂತೆ ನಿರ್ದೇಶಕ. ಸೆಪ್ಟೆಂಬರ್ 2 ರಂದು ಸುದೀಪ್ ಹುಟ್ಟುಹಬ್ಬ. ಅದು ಸೋಮವಾರ ಇದೆ. ಹಾಗಾಗಿ, ಅದರ ಹಿಂದಿನ ವಾರ ಅಥವಾ ಮುಂದಿನ ವಾರ ಪೈಲ್ವಾನ್ ಬರಬಹುದು ಎಂದು ಸುದೀಪ್ ಅವರೇ ಹೇಳಿದ್ದಾರೆ.
ನಿರ್ಮಾಪಕ ಮುನಿರತ್ನ ಮೇಲೆ ಮುನಿಸಿಕೊಂಡ ಚಿತ್ರರಂಗ?

ಕುರುಕ್ಷೇತ್ರ ಹಿಂದಕ್ಕೆ ಬಂದಿದ್ದು ನಿಜಾನ?
ಮತ್ತೊಂದೆಡೆ ಆಗಸ್ಟ್ 8 ರಂದು ಬರಲಿದೆ ಎನ್ನಲಾಗುತ್ತಿದ್ದ ಕುರುಕ್ಷೇತ್ರ ಸಿನಿಮಾ ಒಂದು ವಾರ ಹಿಂದಕ್ಕೆ ಬಂದಿದೆ ಎಂಬ ಮಾಹಿತಿ ಇದೆ. ಭಾನುವಾರ ಕುರುಕ್ಷೇತ್ರ ಆಡಿಯೋ ಬಿಡುಗಡೆ ಸಮಾರಂಭ ಇದೆ. ಈ ಕಾರ್ಯಕ್ರಮದಲ್ಲಿ ಕುರುಕ್ಷೇತ್ರ ಬಿಡುಗಡೆ ದಿನಾಂಕ ಘೋಷಣೆಯಾಗಬಹುದು. ಸದ್ಯಕ್ಕೆ ಕುರುಕ್ಷೇತ್ರ ರಿಲೀಸ್ ದಿನಾಂಕ ಗೊಂದಲವಾಗಿಯೇ ಉಳಿದುಕೊಂಡಿದೆ.