For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಗೆ ಪಾಕ್ ಸೂಪರ್ ಮಾಡೆಲ್ ಮೆಹ್ರೀನ್

  By Rajendra
  |

  ಗಡಿ ಪ್ರದೇಶದಲ್ಲಿ ಭಯೋತ್ಪಾದಕರನ್ನು ನುಗ್ಗಿಸುವುದೇ ತನ್ನ ಫುಲ್ ಟೈಮ್ ಕಾಯಕ ಮಾಡಿಕೊಂಡಿರುವ ಪಾಕಿಸ್ತಾನ ಇತ್ತಿತ್ತಲಾಗಿ ಕೆಲವು ಹಾಟ್ ಬೆಡಗಿಯರನ್ನು ಭಾರತದೊಳಗೆ ನುಗ್ಗಿಸುತ್ತಿದೆ. ಮೊನ್ನೆ ಮೊನ್ನೆ ಬಂದ ವೀಣಾ ಮಲಿಕ್ ಇನ್ನೇನು ಇಲ್ಲೇ ಜಾಂಡಾ ಹೂಡುವುದು ಗ್ಯಾರಂಟಿಯಾಗಿದೆ.

  ಈಗ ಮತ್ತೊಬ್ಬ ಕ್ಯಾಟ್ ವಾಕ್ ಚೆಲುವೆ ಸೂಪರ್ ಮಾಡೆಲ್ ಮೆಹ್ರೀನ್ ಸೈಯೀದ್ ಎಂಬಾಕೆ ಸಲಾಮ್ ವಾಲೇಕಂ ಎಂದುಕೊಂಡು ಭಾರತಕ್ಕೆ ಅಡಿಯಿಡುತ್ತಿದ್ದಾರೆ. ಈಕೆ ಚೊಚ್ಚಲ ಚಿತ್ರವನ್ನು ಸಂಜಯ್ ಪುರಾಣ್ ಸಿಂಗ್ ಚೌಹಾಣ್ ನಿರ್ಮಿಸುತ್ತಿದ್ದಾರೆ.

  ಈ ಬಗ್ಗೆ ಮಾತನಾಡಿರುವ ಚೌಹಾಣ್, "ಕಳೆದ ಏಳು ವರ್ಷಗಳಿಂದ ಮೆಹ್ರೀನಾ ಜೊತೆ ನಾನು ಸಂಪರ್ಕದಲ್ಲಿದ್ದೇನೆ. ಆದರೆ ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಯೋಗ ಕೂಡಿಬರಲಿಲ್ಲ. ಈಕೆ 'ಲಾಹೋರ್' ಚಿತ್ರದಲ್ಲಿ ಅಭಿನಯಿಸಬೇಕಾಗಿತ್ತು. ಆದರೆ ಅದೇ ಸಮಯಕ್ಕೆ ಆಕೆಗೆ ಲಂಡನಲ್ಲಿ ಆಕ್ಸಿಡೆಂಟ್ ಆಯಿತು. ಹಾಗಾಗಿ ಆ ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗಿರಲಿಲ್ಲ"

  ಈಗ ಆಕೆಯೊಂದಿಗೆ ಚಿತ್ರ ಮಾಡಲು ಮುಂದಾಗಿದ್ದೇನೆ. ಇದಕ್ಕೆ ಆಕೆ ಒಪ್ಪಿದ್ದಾರೆ ಎನ್ನುತ್ತಾರೆ ಚೌಹಾಣ್. ಕಳೆದ ಕೆಲ ವರ್ಷಗಳಿಂದಲೂ ಆಕೆಗೆ ಬಾಲಿವುಡ್ ನಿಂದ ಆಫರ್ ಗಳ ಮೇಲೆ ಆಫರ್ ಗಳು ಬರುತ್ತಿವೆಯಂತೆ. ಆದರೆ ಆಕೆಗೆ ಒಪ್ಪಿಗೆಯಾಗುವ ಯಾವ ಚಿತ್ರಗಳು ಸಿಗದೆ ಇದ್ದ ಕಾರಣ ಸುಮ್ಮನಿದ್ದರಂತೆ.

  ಈಗ ತಾವು ಕೈಗೆತ್ತಿಕೊಂಡಿರುವ ಚಿತ್ರದ ಕಥಾವಸ್ತು ಬ್ಲ್ಯಾಕ್ ಕಾಮಿಡಿ. ಭಾರತ ಉಪಖಂಡಕ್ಕೆ ಸಂಬಂಧಿಸಿದಂತೆ ಪ್ರಸ್ತುತ ರಾಜಕೀಯ ವಿಡಂಬನೆ ತಮ್ಮ ಚಿತ್ರದಲ್ಲಿರುತ್ತದೆ. ಚಿತ್ರ ಅಕ್ಟೋಬರ್ ನಿಂದ ಆರಂಭವಾಗುತ್ತದೆ ಎನ್ನುತ್ತಾರೆ ಚೌಹಾಣ್.

  ಅಂದಹಾಗೆ ಮೆಹ್ರೀನ್ ನೋಡಲು ವೀಣಾ ಮಲಿಕ್ ಗಿಂತಲೂ ಅದೆಷ್ಟೋ ಪಾಲು ಚೆನ್ನಾಗಿದ್ದಾಳೆ. ಈಕೆಯ ತಾಯಿ ವಿಧವೆ, ವಕೀಲೆ. ಈಕೆಗೆ ಮೂರು ಜನ ಸಹೋದರಿಯರು ಒಬ್ಬ ಸಹೋದರ. ಲಾಹೋರಿನ ಅತಿ ಎತ್ತರದ ಮಾಡೆಲ್ (5'10'). ಈಕೆ ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಡಬೇಕಾದರೆ ಬಹಳಷ್ಟು ವಿರೋಧ ವ್ಯಕ್ತವಾಗಿತ್ತಂತೆ. (ಏಜೆನ್ಸೀಸ್)

  English summary
  Pakistan Super Model Mehreen Syed will make her big Bollywood debut in Lahore director Sanjay Puran Singh Chauhan's next film. Pakistani supermodel Mehreen Syed will join the bevy of ramp beauties to board the Bollywood bandwagon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X