ರಣ ಬರುವ ಮೊದಲೇ ಪಂಕಜ್ 'ರೆಡ್' ಸಿಗ್ನಲ್

ಶ್ರೀನಿವಾಸಮೂರ್ತಿ ನಿರ್ದೇಶನದ 'ರಣ' ಚಿತ್ರವಿನ್ನೂ ತೆರೆಗೆ ಬಂದಿಲ್ಲ. ಅಷ್ಟರಲ್ಲೇ ಪಂಕಜ್ ಇನ್ನೊಂದು ಚಿತ್ರಕ್ಕೆ ನಾಯಕರಾಗಿರುವುದು ಹಲವರ ಹುಬ್ಬೇರಿಸಿದೆ. ಕಾರಣ, ಈ ಬೆಳವಣಿಗೆ ನಡೆದಿರುವುದು ಪಂಕಜ್ ತಂದೆ ನಾರಾಯಣ್ ನಿವೃತ್ತಿ ಘೋಷಣೆ ನಂತರ. ನಾರಾಯಣ್ ಚಿತ್ರರಂಗದಿಂದ ದೂರವಾದರೆ ಪಂಕಜ್ ಗೆ ಗತಿ ಯಾರೆಂದು ಪ್ರಶ್ನಿಸುತ್ತಿದ್ದವರಿಗೆ ಈಗ ಉತ್ತರ ದೊರೆತಿದೆ. ರೆಡ್ ಚಿತ್ರೀಕರಣ ಮೇ 10, 2012ರಿಂದ ಪ್ರಾರಂಭವಾಗಿದೆ.
ಈ ಮೊದಲು ಪಂಕಜ್ ನಾಯಕರಾಗಿದ್ದ ಚೈತ್ರದ ಚಂದ್ರಮ, ವೀರೂ, ಚೆಲುವಿನ ಚಿಲಿಪಿಲಿ ಹಾಗೂ ದುಷ್ಟ ಎಂಬ ಎಲ್ಲಾ ಚಿತ್ರಗಳು ಸೋಲಿನ ಸರಪಳಿ ಸೇರಿಕೊಂಡಿದ್ದವು. ರಣ ಮೂಲಕ ಗೆಲ್ಲುವ ಪಣ ತೊಟ್ಟಿದ್ದಾರೆ ಪಂಕಜ್. ಇದರಲ್ಲಿ ಪಂಕಜ್ ಗೆ ಸುಪ್ರೀತಾ ಮತ್ತು ಸೋನಿಯಾ ಗೌಡ ನಾಯಕಿಯರು. ಆದರೆ ಹೊಸ ಚಿತ್ರ ರೆಡ್ ಗೆ ನಾಯಕಿ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. (ಒನ್ ಇಂಡಿಯಾ ಕನ್ನಡ)
English summary
S Narayan Son, actor Pankaj acts in a new movie called Red. Newcomer Prakash Jade directs this movie and Rana movie producer produces this. It launches soon, in the next week.


Click it and Unblock the Notifications