For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ದೇವರಾಜ್ ಹೊಸ ಸಿನಿಮಾಕ್ಕೆ ಆತ್ಮೀಯ ಗೆಳೆಯನೇ ನಿರ್ದೇಶಕ

  |

  ನಟ ಪ್ರಜ್ವಲ್ ದೇವರಾಜ್ ಒಂದು ರೀತಿ 'ಸರಾಸರಿ' ನಟ. ಸಿನಿಮಾಗಳ ಫಲಿತಾಂಶ ಏನಾದರೂ ಆಗಲಿ ತಮ್ಮ ಕೆಲಸವನ್ನು ತಾವು ಮಾಡುತ್ತಾ ಮುಂದೆ ಸಾಗುತ್ತಿರುತ್ತಾರೆ.

  ಕೆಲವು ದಿನಗಳ ಹಿಂದಷ್ಟೆ ಪ್ರಜ್ವಲ್ ನಟನೆಯ 'ಅರ್ಜುನ್ ಗೌಡ' ಸಿನಿಮಾ ಬಿಡುಗಡೆ ಆಗಿದೆ. ಇದೀಗ ಪ್ರಜ್ವಲ್‌ರ ಹೊಸ ಸಿನಿಮಾ ಘೋಷಣೆ ಆಗಲಿದೆ.

  ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದು, ಈ ಸಿನಿಮಾವನ್ನು ಅವರ ಆತ್ಮೀಯ ಗೆಳೆಯರೇ ಒಬ್ಬರು ನಿರ್ದೇಶಿಸಲಿದ್ದಾರೆ. ಅವರೇ ಪನ್ನಗಾಭರಣ.

  ಪ್ರತಿಭಾವಂತ ನಿರ್ದೇಶಕ ಎನಿಸಿಕೊಂಡಿರುವ ಪನ್ನಗಾಭರಣ, ಈವರೆಗೆ 'ಹ್ಯಾಪಿ ನ್ಯೂ ಇಯರ್', ಪಿಆರ್‌ಕೆ ಪ್ರೊಡಕ್ಷನ್‌ಗಾಗಿ 'ಫ್ರೆಂಚ್ ಬಿರಿಯಾನಿ' ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಗೆಳೆಯ ಪ್ರಜ್ವಲ್ ದೇವರಾಜ್‌ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

  ಪ್ರಜ್ವಲ್ ದೇವರಾಜ್, ಪನ್ನಗಾಭರಣ, ದಿವಂಗತ ಚಿರಂಜೀವಿ ಸರ್ಜಾ ಇವರೆಲ್ಲರೂ ಬಹಳ ಚಿಕ್ಕ ವಯಸ್ಸಿನಿಂದಲೂ ಆತ್ಮೀಯ ಗೆಳೆಯರು. ಇದೀಗ ಪನ್ನಗಾಭರಣ ತಮ್ಮ ಗೆಳೆಯನಿಗಾಗಿಯೇ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ವಿಶೇಷವೆಂದರೆ ಬಾಲಿವುಡ್‌ನಲ್ಲಿ ಕೆಲಸ ಮಾಡಿರುವ ಅಧೀರ್ ಭಟ್ ಈ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದಾರೆ.

  ಇಂದಷ್ಟೆ ಈ ಸಿನಿಮಾದ ಸ್ಕ್ರಿಪ್ಟ್ ಪೂಜೆಯನ್ನು ಬಂಡಿ ಮಹಾಕಾಳಮ್ಮ ದೇವಾಲಯದಲ್ಲಿ ನೆರವೇರಿಸಲಾಗಿದೆ. ಈ ಸಿನಿಮಾವನ್ನು 'ಫಿಲ್ಮಿ ಫೆಲೋ ಸ್ಟುಡಿಯೋಸ್' ಅರ್ಪಿಸುತ್ತಿದ್ದು, ಆಲ್ ಓಶನ್ ಮೀಡಿಯಾ ಪ್ರೈ.ಲಿಮಿಟೆಡ್ ಮತ್ತು ಮಾತ ಭಗವತಿ ಪಿಕ್ಚರ‍್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾದ ಹೆಸರು ಇನ್ನೂ ಅಂತಿಮಗೊಳಿಸಿಲ್ಲ.

  ಸಿನಿಮಾಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ವಿರಾಜ್‌ ಸಿಂಗ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರವೀಣ್‌ ಯಾದವ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿ ಸೇರಿದಂತೆ ಇತರ ತಾರಾಗಾಣದ ಹುಡುಕಾಟದಲ್ಲಿ ಚಿತ್ರತಂಡ ಇದೆ. ಈ ಸಿನಿಮಾದಲ್ಲಿ ಕಮರ್ಶಿಯಲ್ ಅಂಶಗಳು ಹೆಚ್ಚಾಗಿರಲಿವೆ ಎನ್ನಲಾಗಿದ್ದು, ಮೊದಲ ಬಾರಿಗೆ ಪನ್ನಗಾಭರಣ ಪೂರ್ಣ ಆಕ್ಷನ್ ಸಿನಿಮಾ ಒಂದನ್ನು ನಿರ್ದೇಶಿಸಲಿದ್ದಾರೆ.

  ಪ್ರಜ್ವಲ್ ದೇವರಾಜ್​ ನಟನೆಯ 'ಅರ್ಜುನ್ ಗೌಡ' ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಇದೀಗ ಇನ್ನೂ ಕೆಲವು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. 'ಮಾಫಿಯಾ', 'ಗಣ' ಸಿನಿಮಾಗಳ ಚಿತ್ರೀಕರಣಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾಗಳ ಚಿತ್ರೀಕರಣ ಮುಗಿದ ಬಳಿಕ ಅವರು ಪನ್ನಗಾಭರಣ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

  ಗೆಳೆಯ ಪ್ರಜ್ವಲ್‌ ದೇವರಾಜ್‌ಗಾಗಿ ಸಿನಿಮಾ ನಿರ್ದೇಶನ ಮಾಡುತ್ತಿರುವ ಪನ್ನಗಾಭರಣ ಮತ್ತೊಬ್ಬ ಗೆಳತಿ ಮೇಘನಾ ರಾಜ್‌ಗಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿರು ನಿಧನ, ತಾಯ್ತನ ಇತರೆ ಕಾರಣಗಳಿಂದ ನಟನೆಯಿಂದ ದೂರ ಇದ್ದ ಮೇಘನಾ ರಾಜ್‌ ಅನ್ನು ಮತ್ತೆ ರೀಲಾಂಚ್ ಮಾಡುವ ಜವಾಬ್ದಾರಿಯನ್ನು ಪನ್ನಗಾಭರಣ ಹೊತ್ತಿದ್ದು, ಅವರಿಗಾಗಿ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾವು ಥ್ರಿಲ್ಲರ್ ಕತೆಯನ್ನು ಹೊಂದಿದ್ದು, ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ.

  English summary
  Pannaga Bharana to direct Prajwal Devaraj's next movie. Vasuki Vaibhav giving music to the movie.
  Wednesday, January 19, 2022, 9:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X