ಅನಾರೋಗ್ಯದಿಂದ ನಟಿ ಪಾರೂಲ್ ಯಾದವ್ ಆಸ್ಪತ್ರೆಗೆ ದಾಖಲು
Recommended Video

Parul Yadav is admitted to hospital in Mumbai due to illness
ನಟಿ ಪಾರೂಲ್ ಯಾದವ್ ಸದ್ಯ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಈಗ ಮುಂಬೈನ ಖಾಸಗಿ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂಬೈನಲ್ಲಿ ಸುರಿದ ಮಳೆಯಿಂದ ಪಾರೂಲ್ ಅಸ್ವಸ್ಥರಾಗಿದ್ದಾರೆ. ಪಾರೂಲ್ ಅನಾರೋಗ್ಯದ ಕಾರಣದಿಂದಾಗಿ ಅವರ 'ಬಟರ್ ಫ್ಲೈ' ಚಿತ್ರದ ಶೂಟಿಂಗ್ ಕೂಡ ಮುಂದೂಡಲಾಗಿದೆ.

'ಬಟರ್ ಫ್ಲೈ' ಚಿತ್ರದ ಚಿತ್ರೀಕರಣ ಇದೇ ತಿಂಗಳ 24 ರಿಂದ ಗೋಕರ್ಣದಲ್ಲಿ ನಡೆಯಬೇಕಿತ್ತು. ಆದರೆ ಈಗ ಪಾರೂಲ್ ಅನಾರೋಗ್ಯದ ಹಿನ್ನಲೆಯಲ್ಲಿ ಚಿತ್ರದ ಶೂಟಿಂಗ್ ಮುಂದಿನ ತಿಂಗಳಿಗೆ ಮುಂದೂಡಲಾಗಿದೆ. ಅಂದಹಾಗೆ, ರಮೇಶ್ ಅರವಿಂದ್ ನಿರ್ದೇಶನದ 'ಬಟರ್ ಫ್ಲೈ' ಸಿನಿಮಾ ಹಿಂದಿಯ 'ಕ್ವೀನ್' ಚಿತ್ರದ ರಿಮೇಕ್ ಆಗಿದೆ.
More from Filmibeat
English summary
Kannada Actress Parul Yadav is admitted to hospital in mumbai due to illness.


Click it and Unblock the Notifications











