For Quick Alerts
  ALLOW NOTIFICATIONS  
  For Daily Alerts

  ಕಾಜಲ್, ತಮನ್ನಾ ಜೊತೆ ಸೇರಿ ಮೈಸೂರಿನಲ್ಲಿ ಪಾರೂಲ್ ಪಾರ್ಟಿ

  By Naveen
  |
  ಪಾರೂಲ್ ಹುಟ್ಟುಹಬ್ಬ ಹೇಗೆ ನಡೆಯಿತು ನೋಡಿ | Filmibeat Kannada

  ನಟಿ ಪಾರೂಲ್ ಯಾದವ್ ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಬಾರಿ ಮೈಸೂರಿನಲ್ಲಿ ಪಾರುಲ್ ತಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ವಿಶೇಷ ಅಂದರೆ, ಪಾರೂಲ್ ಬರ್ತ್ ಡೇ ಪಾರ್ಟಿಯಲ್ಲಿ ನಟಿ ಕಾಜಲ್ ಅಗರ್ವಾಲ್, ತಮನ್ನಾ ಭಾಟಿಯಾ ಹಾಗೂ ರಮೇಶ್ ಅರವಿಂದ್ ಸಹ ಸೇರಿಕೊಂಡಿದ್ದರು.

  ಸಂದರ್ಶನ : ಒಂಟಿಯಾಗಿ ಹನಿಮೂನ್ ಗೆ ಹೊರಟ 'ಬಟರ್ ಫ್ಲೈ' ಪಾರೂಲ್ ಸಂದರ್ಶನ : ಒಂಟಿಯಾಗಿ ಹನಿಮೂನ್ ಗೆ ಹೊರಟ 'ಬಟರ್ ಫ್ಲೈ' ಪಾರೂಲ್

  ಕಳೆದ ವರ್ಷ ಸಹ ಪಾರುಲ್ ತಮ್ಮ ಹುಟ್ಟುಹಬ್ಬವನ್ನು 'ಬಟರ್ ಫ್ಲೈ' ಚಿತ್ರತಂಡದ ಜೊತೆಗೆ ಆಚರಣೆ ಮಾಡಿದ್ದರು. ಅದೇ ದಿನ 'ಬಟರ್ ಫ್ಲೈ' ಸಿನಿಮಾ ಲಾಂಚ್ ಆಗಿತ್ತು. ಇನ್ನು ಈ ವರ್ಷ ಸಹ ಅವರು ಇದೇ ಚಿತ್ರತಂಡದ ಜೊತೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಕೇಕ್ ಕತ್ತರಿಸುವ ಮೂಲಕ ಪಾರೂಲ್ ಬರ್ತ್ ಡೇ ಆಚರಣೆ ಜೋರಾಗಿ ನಡೆದಿದೆ.

  ಅಂದಹಾಗೆ, 'ಬಟರ್ ಫ್ಲೈ' ಸಿನಿಮಾ ಹಿಂದಿಯ 'ಕ್ವೀನ್' ಚಿತ್ರದ ರೀಮೇಕ್ ಆಗಿದೆ. ಕಂಗಾನ ಅವರ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ನಿರ್ವಹಿಸುತ್ತಿದ್ದಾರೆ. ತಮಿಳಿನಲ್ಲಿ 'ಪ್ಯಾರಿಸ್ ಪ್ಯಾರಿಸ್', ತೆಲುಗಿನಲ್ಲಿ 'ಒನ್ಸ್ ಅಗೈನ್ ಕ್ವೀನ್' ಮತ್ತು ಮಲೆಯಾಳಂ ನಲ್ಲಿ 'ಜಮ್ ಜಮ್' ಎಂಬ ಹೆಸರಿನಲ್ಲಿ 'ಕ್ವೀನ್' ಸಿನಿಮಾ ದಕ್ಷಿಣ ಭಾರತಕ್ಕೆ ಬರುತ್ತಿದೆ. ತಮಿಳಿನಲ್ಲಿ ಕಾಜಲ್, ಹಾಗೂ ತೆಲುಗಿನಲ್ಲಿ ತಮನ್ನಾ ಲೀಡ್ ರೋಲ್ ಪ್ಲೇ ಮಾಡುತ್ತಿದ್ದಾರೆ.

  ಇನ್ನು ಮೂರು ಭಾಷೆಗಳಲ್ಲಿ ರಮೇಶ್ ಅರವಿಂದ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. 'ಬಟರ್ ಫ್ಲೈ' ಚಿತ್ರದ 90% ಚಿತ್ರೀಕರಣ ಮುಗಿದಿದೆ. ಅಮಿತ್ ತ್ರಿವೇದಿ 'ಬಟರ್ ಫ್ಲೈ' ಸಿನಿಮಾಗೆ ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ ಆರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

  English summary
  Kannada Actress Parul Yadav celebrated her birthday in mysore with Kajal Aggarwal and Tamanna Bhatia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X