For Quick Alerts
  ALLOW NOTIFICATIONS  
  For Daily Alerts

  ಕಾಜಲ್, ತಮನ್ನಾ ಬಳಿ ಡಾ.ರಾಜ್ ಗುಣಗಾನ ಮಾಡಿದ ಪಾರೂಲ್

  |

  ನಟಿ ಪಾರೂಲ್ ಯಾದವ್ ಅವರ ಇತ್ತೀಚಿಗಿನ ಸಂದರ್ಶನದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಾಜ್ ಕುಮಾರ್ ಅಭಿಮಾನಿಗಳಿಗಂತು ಈ ವಿಡಿಯೋ ಬಹಳ ಇಷ್ಟ ಆಗಿದೆ.

  ಪಾರೂಲ್ ಯಾವದ್ 'ಕ್ವೀನ್' ಸಿನಿಮಾದ ರಿಮೇಕ್ ನಲ್ಲಿ ಕಾಣಿಸಿಕೊಂಡಿರುವ ವಿಷಯ ಎಲ್ಲರಿಗೆ ತಿಳಿದಿದೆ. ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗಿದ್ದು, ತಮಿಳು ಹಾಗೂ ತೆಲುಗಿನಲ್ಲಿ ಕಾಜಲ್ ಅಗರ್ವಾಲ್ ಮತ್ತು ತಮನ್ನಾ ನಟಿಸಿದ್ದಾರೆ.

  ಸಖತ್ ಹಾಟ್ ಅಂಡ್ ಕ್ಯೂಟ್ ಆಗಿದೆ 'ಬಟರ್ ಫ್ಲೈ' ಟೀಸರ್ ಸಖತ್ ಹಾಟ್ ಅಂಡ್ ಕ್ಯೂಟ್ ಆಗಿದೆ 'ಬಟರ್ ಫ್ಲೈ' ಟೀಸರ್

  ಈ ಸಿನಿಮಾಗೆ ಸಂಬಂಧಪಟ್ಟ ಸಂದರ್ಶನ ಬಾಲಿವುಡ್ ನ ದೊಡ್ಡ ಯೂ ಟ್ಯೂಬ್ ಚಾನೆಲ್ ವೊಂದರಲ್ಲಿ ಇತ್ತೀಚಿಗೆ ನಡೆದಿತ್ತು. ಈ ವೇಳೆ ಮಾತನಾಡುವಾಗ ಪಾರೂಲ್ ಡಾ ರಾಜ್ ಕುಮಾರ್ ಅವರ ಬಗ್ಗೆ ಗುಣಗಾನ ಮಾಡಿದ್ದಾರೆ.

  ''ನಮ್ಮ ಇಂಡಸ್ಟ್ರಿಯ ದೊಡ್ಡ ನಟರಾದ ರಾಜ್ ಕುಮಾರ್ ಅವರು ಅಭಿಮಾನಿಗಳೆ ದೇವರು ಎಂದು ಹೇಳಿದ್ದಾರೆ. ಅದೇ ಕಾರಣಕ್ಕೆ ನಾನು ನನ್ನ ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಬಳಸುತ್ತೇನೆ. ಜನ ಅಷ್ಟೊಂದು ಪ್ರೀತಿ ನೀಡಿರುವಾಗ ನಾವು ನಮ್ಮ ಭಾಷೆಯಲ್ಲಿಯೇ ಯಾಕೆ ಮಾತನಾಡಬಾರದು ಅಲ್ಲವೇ.'' ಎಂದು ರಾಜ್ ಹಾಗೂ ಕನ್ನಡದ ಮೇಲಿನ ಪ್ರೀತಿಯನ್ನು ಕೇಳಿಕೊಂಡಿದ್ದಾರೆ.

  ಅಂದಹಾಗೆ, ಪಾರೂಲ್ ಯಾದವ್ 'ಬಟರ್ ಫ್ಲೈ' ಸಿನಿಮಾದ ಪ್ರಮೋಷನ್ ಗಾಗಿ ಈ ಸಂದರ್ಶನದಲ್ಲಿ ಭಾಗಿಯಾಗಿದ್ದರು.

  English summary
  Actress Parul Yadav remembers the greatness of DR Rajkumar in her interview.
  Tuesday, January 22, 2019, 13:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X