»   » 'ಡೈರೆಕ್ಟರ್ ಸ್ಪೆಷಲ್' ಹುಡುಗ ಇದೀಗ 'ವಿಜಯಾದಿತ್ಯ'

'ಡೈರೆಕ್ಟರ್ ಸ್ಪೆಷಲ್' ಹುಡುಗ ಇದೀಗ 'ವಿಜಯಾದಿತ್ಯ'

Posted By:
Subscribe to Filmibeat Kannada

ದೇಶಾದ್ಯಂತ ತೆರೆ ಕಂಡ ಈ ವರ್ಷದ ಅತ್ಯಂತ ಬಿಗ್ ಬಜೆಟ್ ನ 'ಬಾಹುಬಲಿ' ಚಿತ್ರ ರಿಲೀಸ್ ಆದಾಗ ಚಂದನವನದಲ್ಲಿ 'ಛೆ ನಮ್ಮಲ್ಲೂ ಇಂತಹ ಮೂವಿ ಒಂದು ಬಂದಿದ್ದರೆ', ಅಂತ ಕೆಲವರು ಮಾತಾಡಿಕೊಂಡರು,

ಇದೀಗ ನಮ್ಮ ಕನ್ನಡಿಗರ ಆಸೆ ಈಡೇರಿಸಲು ಅಂತಹದ್ದೇ ಒಂದು ಚಿತ್ರ ಬರುತ್ತಿದೆ. ಹೌದು 'ಡೈರೆಕ್ಟರ್ ಸ್ಪೆಷಲ್' ಹುಡುಗ ಧನಂಜಯ್ ರಾಜನಾಗಿ ಕುದುರೆ ಏರಿದ್ದು, 'ಪ್ಯಾರ್ಗೆ ಆಗ್ಬುಟ್ಟೈತೆ' ಅಂತ ಹಾಡಿದ ಹುಡುಗಿ ಪಾರುಲ್ ಯಾದವ್ 'ವಿಜಯಾದಿತ್ಯ' ನ ರಾಣಿಯಾಗಲಿದ್ದಾರೆ.

ಅಂದಹಾಗೆ ಆನಿಮೇಶನ್ ನ ಹಾವಳಿ ಇರುವ ಈಗಿನ ಜಮಾನದಲ್ಲಿ 'ಬಾಹುಬಲಿ' ಚಿತ್ರ ಮಾಡಿದಂತೆ ನಮ್ಮ ಕನ್ನಡದ 'ವಿಜಯಾದಿತ್ಯ' ಮೂಡಿ ಬರಲಿದ್ದಾನೆ. ಜೊತೆಗೆ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡಿದ ಡಿಸೈನರ್ ಗಳೇ ನಿರ್ದೇಶಕ ನಿರ್ಭಯ್ ಚಕ್ರವರ್ತಿ ಆಕ್ಷನ್-ಕಟ್ ಹೇಳುತ್ತಿರುವ 'ವಿಜಯಾದಿತ್ಯ'ನಿಗೂ ಕಾಸ್ಟ್ಯೂಮ್ ಡಿಸೈನ್ ಮಾಡಲಿದ್ದಾರೆ.

Parul Yadav: 'Vijayaditya', will be better then SS Rajamouli's Telugu movie 'Baahubali'

ಇಲ್ಲಿತನಕ ಯಾವುದೇ ಸುಳಿವು ನೀಡದೇ ಸುಮಾರು ಎರಡು ವರ್ಷಗಳಿಂದ ನಿರ್ದೇಶಕ ನಿರ್ಭಯ್ ಚಕ್ರವರ್ತಿ ಅವರು 'ವಿಜಯಾದಿತ್ಯ' ಚಿತ್ರಕ್ಕೆ ಕೆಲಸ ಮಾಡುತ್ತಿದ್ದು, ಇದೀಗ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸ್ವಲ್ಪ ಮಟ್ಟಿಗೆ ಕನ್ನಡಿಗರಲ್ಲಿ ಕುತೂಹಲ ಹುಟ್ಟಿಸುತ್ತಿದ್ದಾರೆ.

ಇನ್ನೂ ನಟಿ ಪಾರುಲ್ ಯಾದವ್ ಅವರು ರಾಜ 'ವಿಜಯಾದಿತ್ಯ'ನ ರಾಣಿಯಾಗಲಿದ್ದು, ಅವರು ಹೇಳುವ ಪ್ರಕಾರ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ತೆಲುಗಿನ 'ಬಾಹುಬಲಿ'ಗಿಂತ ಕನ್ನಡದ 'ವಿಜಯಾದಿತ್ಯ' ಮೂಡಿಬರಲಿದೆ.

ಜೊತೆಗೆ ಇದೊಂಥರಾ ಕನ್ನಡದ 'ಬಾಹುಬಲಿ' ಅಂದರೂ ತಪ್ಪಾಗ್ಲಿಕ್ಕಿಲ್ಲ ಯಾಕೆಂದರೆ ಕನ್ನಡ ಪ್ರೇಕ್ಷಕರು ಬಯಸುವ ಹಾಗೂ ಇಷ್ಟಪಡುವ ಎಲ್ಲಾ ಅಂಶಗಳನ್ನು ನಿರ್ದೇಶಕ ನಿರ್ಭಯ್ ಚಕ್ರವರ್ತಿ ಅವರು ಬಳಸಿಕೊಂಡಿದ್ದಾರೆ. ಖಂಡಿತವಾಗ್ಲೂ ಪೌರಾಣಿಕ ಇಷ್ಟ ಪಡುವ ಕನ್ನಡ ಅಭಿಮಾನಿಗಳಿಗೆ ಇದು ಇಷ್ಟವಾಗುತ್ತದೆ ಎನ್ನುತ್ತಾರೆ ಗ್ಲಾಮರ್ ತಾರೆ ಪಾರುಲ್ ಯಾದವ್.

ಇನ್ನೂ ಚಿತ್ರದಲ್ಲಿ ಧನಂಜಯ್, ಪಾರುಲ್ ಯಾದವ್, ಕಾವ್ಯ ಶೆಟ್ಟಿ, ಶ್ರಾವ್ಯ ರೆಡ್ಡಿ, ಸುಚೇಂದ್ರ ಪ್ರಸಾದ್, ಸುದರ್ಶನ್ ಮತ್ತಿತ್ತರು ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಮುಂಬೈ ಮತ್ತು ಹೈದರಾಬಾದ್ ನಲ್ಲಿ ಚಿತ್ರದ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳ್ಳಲಿದೆ.

ನಟ ಧನಂಜಯ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕುದುರೆ ಮೇಲಿಂದ ಬಿದ್ದು ಕಾಲು ಮುರಿದುಕೊಂಡಿದ್ದು, ಸುಮಾರು ಮೂರು ತಿಂಗಳುಗಳ ಕಾಲ ವಿಶ್ರಾಂತಿಯಲ್ಲಿದ್ದು, ಇದೀಗ ಚೇತರಿಸಿಕೊಂಡಿದ್ದಾರೆ.

ಒಟ್ನಲ್ಲಿ ದರ್ಶನ್ 'ಸಂಗೊಳ್ಳಿ ರಾಯಣ್ಣ', ಯಶ್ 'ಗಜಕೇಸರಿ' ಹೀಗೆ ಐತಿಹಾಸಿಕ ಚಿತ್ರಗಳನ್ನು ಕನ್ನಡ ಪ್ರೇಕ್ಷಕರು ಇಷ್ಟಪಟ್ಟಿದ್ದು, ಇದೀಗ ಒಂದು ಗಂಟೆಯ ಅವಧಿಗೆ ಸುಮಾರು 5 ರಿಂದ 6 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಡಿ ಬರುತ್ತಿರುವ ಧನಂಜಯ್ 'ವಿಜಯಾದಿತ್ಯ' ಕೂಡ ವೀಕ್ಷಕಕರಿಗೆ ಇಷ್ಟವಾಗಬಹುದು ಎಂಬುದು ನಮ್ಮ ಅಭಿಪ್ರಾಯ.

English summary
Kannada movie 'Vijayaditya', will be better then SS Rajamouli's Telugu movie 'Baahubali', Says Kannada Actress Parul Yadav. 'Vijayaditya' features Kannada actor Dananjay, Kannada Actress Parul Yadav, Actress Kavya Shetty, Actor Suchendra Prasad in the lead role. The Movie is directed by Nirbhay Chakravarthi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada