»   » ಅಮ್ಮನ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಿದ ಅಪ್ಪು

ಅಮ್ಮನ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಿದ ಅಪ್ಪು

Posted By:
Subscribe to Filmibeat Kannada

ಪಾರ್ವತಮ್ಮ ರಾಜ್ ಕುಮಾರ್, ಕನ್ನಡ ಸಿನಿಮಾ ರಂಗ ಕಂಡ ಧೀಮಂತ ನಿರ್ಮಾಪಕಿ ಹಾಗೂ ವಿತರಕಿ, ದಿವಂಗತ ಪಾರ್ವತಮ್ಮನವರ ಹುಟ್ಟುಹಬ್ಬವನ್ನ ನಟ ಪುನೀತ್ ರಾಜ್ ಕುಮಾರ್ ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ. ತಮ್ಮ ಕುಟುಂಬಕಷ್ಟೇ ಅಲ್ಲದೆ ನೂರಾರು ಕುಟುಂಬಗಳಿಗೆ ವಜ್ರೇಶ್ವರಿ ಕಂಬೈನ್ಸ್ ಮೂಲಕ ತಾಯಿಯಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಕಷ್ಟದಲ್ಲಿರುವ ಹಾಗೂ ಬೀದಿಗೆ ಬಿದ್ದ ಅನಾಥ ಹೆಣ್ಣು ಮಕ್ಕಳಿಗಾಗಿ ಶಕ್ತಿಧಾಮ ಅನ್ನೋ ಫೌಂಡೇಶನ್‌ ನ ಹುಟ್ಟುಹಾಕಿದರು. ಅದೇ ಸ್ಥಳದಲ್ಲಿ ನಟ ಪುನೀತ್ ಅಮ್ಮನ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ.

ಹುಟ್ಟುಹಬ್ಬದ ವಿಶೇಷ: ಪಾರ್ವತಮ್ಮನವರ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯ

ಮೈಸೂರಿನಲ್ಲಿರೋ ಶಕ್ತಿಧಾಮ ಸಂಸ್ಥೆಗೆ ನಟ ಪುನೀತ್ ಹಾಗೂ ಪತ್ನಿ ಅಶ್ವಿನಿ ಪುನೀತ್ ಇತ್ತೀಚೆಗಷ್ಟೇ ಭೇಟಿ ನೀಡಿದ್ದರು. ಶಕ್ತಧಾಮದಲ್ಲಿರುವ ಮಹಿಳೆ ಮತ್ತು ಮಕ್ಕಳಿಗೆ ಹೊಸ ಬಟ್ಟೆ ಹಾಗೂ ಸಿಹಿ ಹಂಚಿ ತಾಯಿಯ ಹುಟ್ಟುಹಬ್ಬವನ್ನ ಆಚರಣೆ ಮಾಡಿದರು. ಇದೇ ಸಮಯದಲ್ಲಿ ಪಾರ್ವತಮ್ಮ ನವರ ಭಾವಚಿತ್ರಕ್ಕೆ ಪುನೀತ್ ಹಾಗೂ ಅಶ್ವಿನಿ ಪೂಜೆ ಸಲ್ಲಿಸಿದರು.

 Parvathamma Rajkumar's birthday at Mysore shakthi dhama

ಸಾಕಷ್ಟು ವರ್ಷಗಳಿಂದ ಶಕ್ತಿಧಾಮ ಸಂಸ್ಥೆಯನ್ನ ಪಾರ್ವತಮ್ಮ ರಾಜ್ ಕುಮಾರ್ ನಡೆಸಿಕೊಂಡು ಬರುತ್ತಿದ್ದರು. ಪುನೀತ್ ರಾಜ್ ಕುಮಾರ್ ಸಿನಿಮಾರಂಗಕ್ಕೆ ಬಂದ ನಂತರ ತಾವೇ ಶಕ್ತಿಧಾಮದ ಉಸ್ತುವಾರಿಯನ್ನ ವಹಿಸಿಕೊಂಡಿದ್ದರು. ಇಂದಿಗೂ ಪುನೀತ್ ಬೇರೆ ನಟರು ಅಭಿನಯಿಸಿದ ಚಿತ್ರಗಳಿಗೆ ಹಾಡಿ ಅದರಿಂದ ಬರುವ ಹಣವನ್ನ ಶಕ್ತಿಧಾಮಕ್ಕೆ ನೀಡುತ್ತಾ ಬಂದಿದ್ದಾರೆ.

 Parvathamma Rajkumar's birthday at Mysore shakthi dhama
English summary
Puneeth Raj Kumar, celebrated late Parvathamma Rajkumar's birthday at Mysore Shakthi Dhama.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada