twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ನಮನ: 26 ಸಾವಿರ ಮಂದಿಗೆ 1500 ಪಾಸ್‌ ಹಂಚಲು ಪರದಾಟ

    |

    ಪುನೀತ್ ಸ್ಮರಣಾರ್ಥ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ (kFCC) ಪುನೀತ್ ನಮನ ಕಾರ್ಯಕ್ರಮ ಆಯೋಜಿಸಿದೆ. ನವೆಂಬರ್ 16ರಂದು ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಭಾರತದ ತಾರೆಯರಿಗೆ ವಾಣಿಜ್ಯ ಮಂಡಳಿ ಈಗಾಗಲೇ ಆಹ್ವಾನ ನೀಡಿದ್ದು, ನಾಳೆ (ನವೆಂಬರ್ 16) ನಡೆಯಲಿರುವ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆಗಳು ಆರಂಭ ಆಗಿದೆ.

    ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿಯನ್ನು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ವಹಿಸಿದೆ. ಕಾರ್ಯಕ್ರಮ ಸುಗಮವಾಗಿ ಸಾಗುವಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಗಣ್ಯರಿಗೆ ಸ್ವಾಗತ ಕೋರುವುದರಿಂದ ಹಿಡಿದು ಊಟ- ಉಪಚಾರ, ವೇದಿಕೆ, ಸೆಟ್ಟು, ಆಸನದ ವ್ಯವಸ್ಥೆ ಎಲ್ಲದರ ಬಗ್ಗೆನೂ ಗಮನ ಹರಿಸಲಾಗುತ್ತಿದೆ. ಇದೇ ವೇಳೆ ಫಿಲ್ಮ್ ಚೇಂಬರ್‌ಗೆ ಪಾಸ್ ವ್ಯವಸ್ಥೆ ಮಾಡುವುದೇ ದೊಡ್ಡ ತಲೆ ನೋವಾಗಿದೆ.

    1500 ಪಾಸ್‌ಗೆ 26 ಮಂದಿಯಿಂದ ಬೇಡಿಕೆ

    1500 ಪಾಸ್‌ಗೆ 26 ಮಂದಿಯಿಂದ ಬೇಡಿಕೆ

    ನಾಳೆ (ನವೆಂಬರ್ 16) ನಡೆಯಲಿರುವ ಪುನೀತ್ ನಮನ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರಿಗೂ ಪಾಸ್ ನೀಡಲಾಗುತ್ತೆ. ಪಾಸ್ ಇದ್ದವರಿಗೆ ಮಾತ್ರ ಅರಮನೆಯೊಳಗೆ ಪ್ರವೇಶ ನೀಡಲಾಗುತ್ತೆ ಎಂದು ನಿರ್ಮಾಪಕ ಸಾರಾ ಗೋವಿಂದು ಹೇಳಿದ್ದರು. ಸುಮಾರು 1500 ಮಂದಿ ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದರು. ಆದ್ರೀಗ ಅದೇ ದೊಡ್ಡ ಸಮಸ್ಯೆಯಾಗಿ ವಾಣಿಜ್ಯ ಮಂಡಳಿಗೆ ಕಾಡುತ್ತಿದೆ. ಕೇವಲ 1500 ಪಾಸ್‌ಗಳು ವಾಣಿಜ್ಯ ಮಂಡಳಿ ಬಳಿ ಇವೆ. ಆದರೆ, 26 ಸಾವಿರ ಮಂದಿ ಪಾಸ್‌ಗಾಗಿ ಬೇಡಿಕೆ ಇಟ್ಟಿದ್ದಾರೆ.

    1500 ಪಾಸ್ ಕೊಡಲು ಮಾತ್ರ ಅವಕಾಶ

    1500 ಪಾಸ್ ಕೊಡಲು ಮಾತ್ರ ಅವಕಾಶ

    ಪುನೀತ್ ನಮನ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದು, ಈಗಾಗಲೇ ವೇದಿಕೆ ಸಿದ್ಧವಾಗಿದೆ. ಗಣ್ಯರು ಕೂರಲು ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಪಾಸ್ ವಿತರಣೆ ಮಾಡಿದಂತೆ 1500 ಆಸನ ವ್ಯವಸ್ಥೆಗಳಿಗೆ ಮಾತ್ರ ಆಸನದ ವ್ಯವಸ್ಥೆಯಿದೆ. ಆದರೆ, ಚಿತ್ರರಂಗದ ತಂತ್ರಜ್ಞರು, ಕಲಾವಿದರು, ಕಾರ್ಮಿಕರಿಂದ ಹಾಗೂ ವಾಣಿಜ್ಯ ಮಂಡಳಿಯ ಸದಸ್ಯರಿಂದ ಬೇಡಿಕೆ ಹೆಚ್ಚಾಗಿದೆ. "ಸುಮಾರು 26 ಸಾವಿರ ಮಂದಿ ಪಾಸ್ ಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ. ಆದರೆ, 1500 ಪಾಸ್ ಕೊಡಲು ಮಾತ್ರ ಅವಕಾಶವಿದೆ. ನಮಗೆ ಸರ್ಕಾರದಿಂದ ಆದೇಶ ಬಂದಿದೆ. ಹೀಗಾಗಿ 26 ಸಾವಿರ ಮಂದಿಯಿಂದ ಬೇಡಿಕೆ ಇದ್ದರೂ ಕೊಡಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಸರಿಯಾಗಿ ನಡೆಯುತ್ತಿದೆ. ಆದರೆ, ಪಾಸ್ ವಿಚಾರದಲ್ಲಿ ಸ್ವಲ್ಪ ಗೊಂದಲ ಏರ್ಪಟ್ಟಿದೆ." ಅಂತ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಣಕಾರ್ ತಿಳಿಸಿದ್ದಾರೆ.

    ಸಾರ್ವಜನಿಕರಿಗೆ ಅವಕಾಶವಿಲ್ಲ

    ಸಾರ್ವಜನಿಕರಿಗೆ ಅವಕಾಶವಿಲ್ಲ

    ಪುನೀತ್ ನಮನ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಆಗಮಿಸುತ್ತಿದ್ದಾರೆ. ಸಿನಿಮಾ ತಾರೆಯರು, ಪರಭಾಷೆಯ ನಟ-ನಟಿಯರು, ರಾಜಕೀಯ ಮುಖಂಡರು ಆಗಮಿಸಲಿದ್ದಾರೆ. ಹೀಗಾಗಿ ನೂಕುನುಗ್ಗಲು ಆಗಬಾರದು. ಕಾರ್ಯಕ್ರಮ ಸುಗಮವಾಗಿ ನಡೆಯಬೇಕೆಂಬ ಕಾರಣಕ್ಕೆ ಸಾರ್ವಜನಿಕರಿಗೆ ಹಾಗೂ ಅಭಿಮಾನಿಗಳಿಗೆ ಪ್ರವೇಶವಿಲ್ಲವೆಂದು ಮೊದಲೇ ಹೇಳಲಾಗಿತ್ತು. ಒಂದು ವೇಳೆ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೂ ಅವಕಾಶ ನೀಡಿದ್ದರೆ. ವಾಣಿಜ್ಯ ಮಂಡಳಿ ಮತ್ತಷ್ಟು ಗೊಂದಲಕ್ಕೆ ಸಿಲುಕುತ್ತಿತ್ತು.

    2 ಸಾವಿರ ಮಂದಿಗೆ ಉಪಹಾರದ ವ್ಯವಸ್ಥೆ

    2 ಸಾವಿರ ಮಂದಿಗೆ ಉಪಹಾರದ ವ್ಯವಸ್ಥೆ

    ಪುನೀತ್ ನಮನ ಕಾರ್ಯಕ್ರಮಕ್ಕೆ ಬರುವವರಿಗಾಗಿ ಅರಮನೆ ಮೈದಾನದಲ್ಲಿ ಸುಮಾರು 2 ಸಾವಿರ ಮಂದಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮ ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆಯಲಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಬರುವ ಗಣ್ಯಾತಿಗಣ್ಯರಿಗಾಗಿ ಉಪಹಾರ ನೀಡಲಾಗುತ್ತಿದೆ. ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭ ಮಾಡಿ ಆರು ಗಂಟೆಯೊಳಗೆ ಕಾರ್ಯಕ್ರಮ ಮುಗಿಸಲು ಪ್ಲ್ಯಾನ್ ಮಾಡಲಾಗಿದೆ. ಡಾ.ನಾಗೇಂದ್ರ ಪ್ರಸಾದ್ ಹಾಗೂ ಗುರುಕಿರಣ್ ತಂಡದಿಂದ ಗೀತ ನಮನ ಸಲ್ಲಿಸುವುದರಿಂದ ಕಾರ್ಯಕ್ರಮ ಆರಂಭ ಆಗಲಿದೆ.

    English summary
    The Karnataka Film Chamber organizes Puneeth Namana program on November 16th . The Organizers facing pass problem for industry people.
    Monday, November 15, 2021, 17:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X