Don't Miss!
- Technology
Co-Win ಬಗ್ಗೆ ನಿಮಗೆಲ್ಲಾ ಗೊತ್ತು U-WIN ಬಗ್ಗೆ ಗೊತ್ತಾ!: ಇಲ್ಲಿದೆ ಸಂಪೂರ್ಣ ವಿವರ!
- Automobiles
ಬಿಡುಗಡೆಗೆ ಸಜ್ಜಾಗಿರುವ 2023 ಹೋಂಡಾ ಸಿಟಿ ಫೇಸ್ಲಿಫ್ಟ್ನಲ್ಲಿ ಇವೆಲ್ಲವನ್ನು ನಿರೀಕ್ಷಿಸಬಹುದು!
- News
ಚಿರತೆ ದಾಳಿ: 21 ಗ್ರಾಮಗಳಲ್ಲಿ ಕರ್ಫ್ಯೂ ವಿಧಿಸಲು ಅರಣ್ಯ ಇಲಾಖೆ ಮನವಿ
- Finance
ಭಾರೀ ವಂಚನೆಗೆ ಕೈಹಾಕಿತೇ ಅದಾನಿ ಗ್ರೂಪ್: ಏನಿದು ವರದಿ? ಒಂದೇ ದಿನದಲ್ಲಿ ₹ 46,000 ಕೋಟಿ ಕಳೆದುಕೊಂಡಿದ್ದೇಕೆ?
- Sports
ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಸಿಟ್ಟಾದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
- Lifestyle
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಂಗಳೂರಲ್ಲಿ ವಾರಿಸು ಹಿಂದಿಕ್ಕಿ ದೊಡ್ಡ ಬಿಡುಗಡೆ ಕಂಡ ಪಠಾಣ್ ಚಿತ್ರವನ್ನು ಹಿಂದಿಕ್ಕುತ್ತಾ 'ಕ್ರಾಂತಿ'?
2022ರಲ್ಲಿ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ವೀಕ್ಷಿಸಿ ಸಿನಿಮಾ ಕ್ಷೇತ್ರದ ಸುವರ್ಣಯುಗಕ್ಕೆ ಸಾಕ್ಷಿಯಾಗಿದ್ದ ಸಿನಿ ರಸಿಕರು 2023ರ ಸಂಕ್ರಾಂತಿ ಪ್ರಯುಕ್ತ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟ ಸೌತ್ ಸ್ಟಾರ್ ನಟರ ಚಿತ್ರಗಳನ್ನು ವೀಕ್ಷಿಸುವ ಮೂಲಕ ಹೊಸ ವರ್ಷವನ್ನು ಆರಂಭಿಸಿದರು. ಇನ್ನು ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ಎಲ್ಲಾ ಚಿತ್ರಗಳೂ ಸಹ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಅಬ್ಬರಿಸಿದವು.
ಹೀಗೆ ಒಳ್ಳೆಯ ಓಪನಿಂಗ್ ಪಡೆದುಕೊಂಡಿರುವ 2023ರ ಮೊದಲ ತಿಂಗಳ ಅಂತಿಮ ವಾರದಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಮೊದಲ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೌದು, ಇಂದು ( ಜನವರಿ 25 ) ಬಾಲಿವುಡ್‌ನ ಸ್ಟಾರ್ ನಟ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಚಿತ್ರ ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೇ ನಾಳೆ ( ಜನವರಿ 26 ) ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ನಟನೆಯ ಕ್ರಾಂತಿ ಚಿತ್ರ ತೆರೆಗೆ ಬರುತ್ತಿದೆ.
ಈ ಎರಡೂ ಚಿತ್ರಗಳು ಒಂದು ದಿನದ ಅಂತರದಲ್ಲಿ ಬಿಡುಗಡೆಯಾಗುತ್ತಿದ್ದರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಪೋಟಿಗೆ ಬೀಳುವುದು ಖಚಿತ. ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರನ್ನು ಹೊಂದಿರುವ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕ್ರಾಂತಿ ಹಾಗೂ ಪಠಾಣ್ ನಡುವೆ ಜಿದ್ದಾಜಿದ್ದಿ ಏರ್ಪಡುವುದು ಕಾಮನ್. ಇನ್ನು ಈ ಎರಡೂ ಚಿತ್ರಗಳಿಗೂ ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಬೆಂಗಳೂರಿನಲ್ಲಿ ಮುಂಗಡ ಬುಕಿಂಗ್ ಆರಂಭಗೊಂಡಿದ್ದು, ಎರಡೂ ಚಿತ್ರಗಳ ಪೈಕಿ ಯಾವ ಚಿತ್ರ ಬಿಡುಗಡೆ ದಿನ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ. ಇನ್ನು ಬಿಡುಗಡೆ ದಿನ ಬೃಹತ್ ಶೋಗಳನ್ನು ಪಡೆದುಕೊಂಡಿರುವ ಪಠಾಣ್ ಈ ವರ್ಷ ಬಿಡುಗಡೆಗೊಂಡ ಎಲ್ಲಾ ಚಿತ್ರಗಳನ್ನು ಮುಂಗಡ ಬುಕಿಂಗ್‌ನಲ್ಲಿ ಹಿಂದಿಕ್ಕಿದೆ. ಹಾಗಿದ್ದರೆ, ಬೆಂಗಳೂರಿನಲ್ಲಿ ಮೊದಲ ದಿನ ಪಠಾಣ್ ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿದೆ ಹಾಗೂ ಈ ವರ್ಷ ಬಿಡುಗಡೆಗೊಂಡಿದ್ದ ಸ್ಟಾರ್ ನಟರ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿದ್ದವು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿದ ಪಠಾಣ್
ಇಂದು ( ಜನವರಿ 25 ) ವಿಶ್ವದಾದ್ಯಂತ ಬಿಡುಗಡೆಯಾಗಿರುವ ಪಠಾಣ್ ಚಿತ್ರ ಬೆಂಗಳೂರಿನಲ್ಲಿ ಬರೋಬ್ಬರಿ 821 ಪ್ರದರ್ಶನಗಳನ್ನು ಪಡೆದುಕೊಳ್ಳುವುದರ ಮೂಲಕ ಈ ವರ್ಷ ಬಿಡುಗಡೆಗೊಂಡು ಬೆಂಗಳೂರಿನಲ್ಲಿ ಅಧಿಕ ಶೋ ಪಡೆದುಕೊಂಡು ದಾಖಲೆ ನಿರ್ಮಿಸಿದ್ದ ವಿಜಯ್ ವಾರಿಸು ಚಿತ್ರವನ್ನು ಹಿಂದಿಕ್ಕಿದ್ದಾರೆ.

ಅತಿಹೆಚ್ಚು ಶೋ ಪಡೆದುಕೊಂಡ ಚಿತ್ರಗಳು
2023ರಲ್ಲಿ ಇಲ್ಲಿಯವರೆಗೂ ಬಿಡುಗಡೆಗೊಂಡ ಚಿತ್ರಗಳ ಪೈಕಿ ಬೆಂಗಳೂರಿನಲ್ಲಿ ಮೊದಲ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿರುವ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..
1. ಪಠಾಣ್ - 821 ಪ್ರದರ್ಶನಗಳು
2. ವಾರಿಸು - 757 ಪ್ರದರ್ಶನಗಳು
3. ತುನಿವು - 568 ಪ್ರದರ್ಶನಗಳು
4. ವೀರಸಿಂಹ ರೆಡ್ಡಿ - 406 ಪ್ರದರ್ಶನಗಳು
5. ವಾಲ್ತೇರು ವೀರಯ್ಯ - 337 ಪ್ರದರ್ಶನಗಳು

ಕ್ರಾಂತಿ ಈ ದಾಖಲೆ ಹಿಂದಿಕ್ಕುತ್ತಾ?
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರ ಬಿಡುಗಡೆಯ ದಿನ ಸದ್ಯಕ್ಕೆ ಬೆಂಗಳೂರಿನಲ್ಲಿ 661 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಈ ಸಂಖ್ಯೆ ಬಿಡುಗಡೆಯ ದಿನ ಹೆಚ್ಚಾಗಿ ವಾರಿಸು ಹಾಗೂ ಪಠಾಣ್ ಚಿತ್ರಗಳನ್ನು ಹಿಂದಿಕ್ಕಿ ಈ ವರ್ಷ ಬೆಂಗಳೂರಿನಲ್ಲಿ ಬಿಡುಗಡೆಯ ದಿನ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರ ಎಂದು ಕ್ರಾಂತಿ ಕರೆಸಿಕೊಳ್ಳುತ್ತಾ ಎಂಬ ಕುತೂಹಲ ಮೂಡಿದೆ.