»   » ರಿಯಲ್ ಉಪ್ಪಿ ಅವರ ಹಾರರ್ ಚಿತ್ರದಲ್ಲಿ ನಾಡಗೀತೆ ಕಂಪು

ರಿಯಲ್ ಉಪ್ಪಿ ಅವರ ಹಾರರ್ ಚಿತ್ರದಲ್ಲಿ ನಾಡಗೀತೆ ಕಂಪು

Posted By:
Subscribe to Filmibeat Kannada

ತಮಿಳು ಹಾರರ್ ಸಿನಿಮಾ 'ಕಾಂಚನಾ 2' ರೀಮೆಕ್ ಆಗಿರುವ 'ಕಲ್ಪನಾ 2' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಹಲವೆಡೆ ಶೂಟಿಂಗ್ ರಭಸದಿಂದ ಸಾಗುತ್ತಿದೆ.

ಅಂದಹಾಗೆ ಈ ಹಾರರ್ ಸಿನಿಮಾದಲ್ಲಿ ಕನ್ನಡ ಭಾಷೆ ಸೇರಿದಂತೆ ಕರ್ನಾಟಕ ರಾಜ್ಯದ ಕುರಿತಂತೆ ಒಂದು ನಾಡ ಗೀತೆಯನ್ನು ರಚಿಸಲಾಗಿದೆ. ಗೀತೆ ರಚನೆಕಾರ ಡಾ.ನಾಗೇಂದ್ರ ಪ್ರಸಾದ್ ಅವರು ಉಪೇಂದ್ರ ಅವರಿಗಾಗಿ ಅಂತಾನೇ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.[ಫೋಟೋ ಗ್ಯಾಲರಿ: ರಿಯಲ್ ಉಪ್ಪಿ 'ಕಲ್ಪನಾ 2' ಶೂಟಿಂಗ್ ಸ್ಟಿಲ್ಸ್]


Patriotic Kannada song for Upendra's Horror film 'Kalpana 2'

"ನನ್ನನ್ನು ಸಿಗಿದು ಹಾಕಿದರೂ ಕನ್ನಡ, ಕೊಚ್ಚಿ ಹಾಕಿದರೂ ಕನ್ನಡ, ಚುಚ್ಚಿದ್ದು ಕನ್ನಡ, ಕರುನಾಡೇ ನನ್ನ ದೈವ, ಕಾವೇರಿ ನನ್ನ ಜೀವ' ಎಂಬ ಸೊಗಸಾದ ಸಾಲುಗಳನ್ನು ಚಿತ್ರದ ಹಾಡಿಗೆ ಬರೆಯಲಾಗಿದೆ.[ಉಪೇಂದ್ರ ಅವರಿಗೆ ತುಂಬಾ ವಿಶಾಲ ಹೃದಯ ಇದೆಯಂತೆ]


Patriotic Kannada song for Upendra's Horror film 'Kalpana 2'

ಕಲೈ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದು, ಈ ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹಿನ್ನಲೆ ಧ್ವನಿ ನೀಡಿದ್ದಾರೆ. ತಮಿಳಿನ 'ಕಾಂಚನಾ 2' ಚಿತ್ರದ ಆರಂಭದಲ್ಲಿ ದೆವ್ವಗಳ ಬಗ್ಗೆ ಹಾಡನ್ನು ಚಿತ್ರೀಕರಿಸಲಾಗಿದೆ.[ಚಿತ್ರಗಳು: ಅಮೆರಿಕದಲ್ಲಿ ಬೇಸಿಗೆ ರಜೆ ಎಂಜಾಯ್ ಮಾಡುತ್ತಿರುವ ಉಪ್ಪಿ ಕುಟುಂಬ]


Patriotic Kannada song for Upendra's Horror film 'Kalpana 2'

"ಆದರೆ ಕನ್ನಡ 'ಕಲ್ಪನಾ 2' ಚಿತ್ರದಲ್ಲಿ ನಾಡ ಗೀತೆಯನ್ನು ಅಳವಡಿಸಲಾಗುತ್ತಿದೆ. ಮಾತ್ರವಲ್ಲದೇ, ಈ ಹಾಡಿನಲ್ಲಿ ಉಪೇಂದ್ರ ಅವರು ಅಭಿನಯಿಸಿರುವ 20 ಸಿನಿಮಾಗಳ ಹೆಸರುಗಳನ್ನು ಸಾಹಿತ್ಯವಾಗಿ ಬಳಸಿಕೊಳ್ಳಲಾಗಿದೆ" ಎಂದು ಚಿತ್ರದ ನಿರ್ದೇಶಕ ಅನಂತ ರಾಜು ಅವರು ಖ್ಯಾತ ದಿನಪತ್ರಿಕೆ ಒಂದಕ್ಕೆ ಮಾಹಿತಿ ನೀಡಿದ್ದಾರೆ.


Patriotic Kannada song for Upendra's Horror film 'Kalpana 2'

ಚಿತ್ರದಲ್ಲಿ ನಟಿ ಪ್ರಿಯಾಮಣಿ ಮತ್ತು 'ರಂಗಿತರಂಗ' ಖ್ಯಾತಿಯ ನಟಿ ಅವಂತಿಕಾ ಶೆಟ್ಟಿ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ.

English summary
Kannada Actor Upendra’s introductory song in his upcoming movie 'Kalpana 2' will be a patriotic number about Kannada and Karnataka. “Dr Nagendra Prasad has penned the lyrics to go with Upendra’s onscreen personality. Says director Ananth Raju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada