twitter
    For Quick Alerts
    ALLOW NOTIFICATIONS  
    For Daily Alerts

    ಫ್ಯಾನ್ಸ್‌ಗಾಗಿ 'ನಟಸಾರ್ವಭೌಮ' ಚಿತ್ರದ ಅಸಲಿ ಟೈಟಲ್ ಟ್ರ್ಯಾಕ್: ಸಾಂಗ್‌ನಲ್ಲಿ ಅಪ್ಪುವಿನ 42 ಸಿನಿಮಾ ಶೀರ್ಷಿಕೆ

    |

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ನೋಡಿ ಅಭಿಮಾನಿಗಳು ಮೆಚ್ಚಿದ್ದಾರೆ. ಅಪ್ಪು ಪಾತ್ರವನ್ನು ಕಣ್ತುಂಬಿಕೊಂಡು ಮನಸಾರೆ ಇಷ್ಟಪಟ್ಟಿದ್ದರು. ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇದೇ ಸಿನಿಮಾದ ಟೈಟಲ್ ಸಾಂಗ್ ಅನ್ನು ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಮತ್ತೆ ರಿಲೀಸ್ ಮಾಡಲು ನಿರ್ದೇಶಕ ಪವನ್ ಒಡೆಯರ್ ನಿರ್ಧರಿಸಿದ್ದಾರೆ. ಆದರೆ, ಈ ಹಾಡಿನಲ್ಲೊಂದು ಸೀಕ್ರೆಟ್ ಇದೆ.

    'ನಟಸಾರ್ವಭೌಮ' ಸಿನಿಮಾದಲ್ಲಿರುವ ಟೈಟಲ್ ಟ್ರ್ಯಾಕ್ ಅಸಲಿ ಸಾಂಗ್ ಅಲ್ಲ. ಸಿನಿಮಾದಲ್ಲಿರುವ ಹಾಡಿಗೂ ಮುನ್ನವೇ ಮತ್ತೊಂದು ಸಾಂಗ್‌ ಅನ್ನು ಕಂಪೋಸ್ ಮಾಡಲಾಗಿತ್ತು. ಪವನ್ ಒಡೆಯರ್ ಆ ಹಾಡಿಗೆ ಸಾಹಿತ್ಯ ರಚಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಈ ಸಾಂಗ್ ಅನ್ನು ಸಿನಿಮಾದಿಂದ ಕೈ ಬಿಡಲಾಗಿತ್ತು. ಅದೇ ಹಾಡನ್ನೀಗ ಅಪ್ಪು ಹುಟ್ಟುಹಬ್ಬದ ನೆನಪಿಗಾಗಿ ರಿಲೀಸ್ ಮಾಡಲಿದ್ದಾರೆ. ಅಂದ್ಹಾಗೆ ಈ 'ನಟಸಾರ್ವಭೌಮ' ಸಿನಿಮಾ ಒರಿಜಿನಲ್ ಸಾಂಗ್‌ ಯಾವುದು? ಯಾವಾಗ ರಿಲೀಸ್ ಆಗುತ್ತೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.

    2 ಹೆಲಿಕಾಪ್ಟರ್, ಪಟಾಕಿ, 10 ಜೆಸಿಬಿ, ಪೋಸ್ಟರ್, ಫ್ಲೆಕ್ಸ್‌ಗಳಿಗೆ ಅಪ್ಪು ಫ್ಯಾನ್ಸ್ ಖರ್ಚು ಮಾಡಿದ್ದೆಷ್ಟು?2 ಹೆಲಿಕಾಪ್ಟರ್, ಪಟಾಕಿ, 10 ಜೆಸಿಬಿ, ಪೋಸ್ಟರ್, ಫ್ಲೆಕ್ಸ್‌ಗಳಿಗೆ ಅಪ್ಪು ಫ್ಯಾನ್ಸ್ ಖರ್ಚು ಮಾಡಿದ್ದೆಷ್ಟು?

     ಒರಿಜಿನಲ್ ಟೈಟಲ್ ಟ್ರ್ಯಾಕ್ ಯಾವಾಗ?

    ಒರಿಜಿನಲ್ ಟೈಟಲ್ ಟ್ರ್ಯಾಕ್ ಯಾವಾಗ?

    'ನಟಸಾರ್ವಭೌಮ' ಸಿನಿಮಾದ ಟೈಟಲ್ ಟ್ರ್ಯಾಕ್‌ ಅನ್ನು ಕೇಳಿ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದರು. ಪುನೀತ್ ಡ್ಯಾನ್ಸ್ ಮೂವ್ಮೆಂಟ್ಸ್‌ಗೆ ತಕ್ಕಂತೆ ಟ್ಯೂನ್ ಹಾಕಿ ಸಾಹಿತ್ಯ ರಚಿಸಲಾಗಿತ್ತು. ನಿರ್ದೇಶಕ ಪವನ್ ಒಡೆಯರ್ ಅವರೇ ಈ ಹಾಡನ್ನು ಬರೆದಿದ್ದರು. ಸಿನಿಮಾದಲ್ಲಿರುವ ಹಾಡಿನ ಸಾಹಿತ್ಯ 'ನಟಸಾರ್ವಭೌಮ ಹಿ ಈಸ್ ಕಿಂಗ್ ಆಫ್ ದಿ ಸಿನಿಮಾ' ಎಂದು ಆರಂಭ ಆಗುತ್ತೆ. ಆದರೆ, ಈ ಹಾಡಿಗೆ ಮೊದಲು ಬೇರೆಯದ್ದೇ ಸಾಹಿತ್ಯವಿತ್ತು. ಅಪ್ಪು ಅಭಿನಯದ ಎಲ್ಲಾ ಸಿನಿಮಾ ಟೈಟಲ್‌ಗಳನ್ನು ಇಟ್ಟುಕೊಂಡು ಪವನ್ ಒಡೆಯರ್ ಸಾಹಿತ್ಯ ರಚಿಸಿದ್ದರು. ಆದರೆ, ಅಪ್ಪು ಸಾಹಿತ್ಯವೇ ಬೇಡ ಎಂದು ನಿರಾಕರಿಸಿದ್ದರು.

    ವಿಶ್ವದಾದ್ಯಂತ 4 ಸಾವಿರ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಜಾತ್ರೆ: ಚಿತ್ರಮಂದಿರದ ಮುಂದೆ ಹೇಗಿದೆ ಸಂಭ್ರಮ?ವಿಶ್ವದಾದ್ಯಂತ 4 ಸಾವಿರ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಜಾತ್ರೆ: ಚಿತ್ರಮಂದಿರದ ಮುಂದೆ ಹೇಗಿದೆ ಸಂಭ್ರಮ?

     ಟೈಟಲ್‌ ಟ್ರ್ಯಾಕ್‌ನಲ್ಲಿತ್ತು 42 ಸಿನಿಮಾ ಟೈಟಲ್

    ಟೈಟಲ್‌ ಟ್ರ್ಯಾಕ್‌ನಲ್ಲಿತ್ತು 42 ಸಿನಿಮಾ ಟೈಟಲ್

    'ನಟಸಾರ್ವಭೌಮ' ಟೈಟಲ್‌ ಟ್ರ್ಯಾಕ್‌ಗೆ ಪವನ್ ಒಡೆಯರ್ ಪುನೀತ್ ಅಭಿನಯಿಸಿದ 42 ಸಿನಿಮಾಗಳ ಟೈಟಲ್ ಅನ್ನು ಬಳಸಿದ್ದರು. ಪ್ರೇಮದ ಕಾಣಿಕೆ ಚಿತ್ರದಿಂದ 'ಅಂಜನಿಪುತ್ರ' ಚಿತ್ರದ ಟೈಟಲ್‌ಗಳನ್ನೇ ಬಳಸಿ ಸಾಹಿತ್ಯ ರಚಿಸಿದ್ದರು. "ಪ್ರೇಮದ ಕಾಣಿಕೆಯಿಂದ ಭಾಗ್ಯವಂತನಾದ, ಬೆಟ್ಟದ ಹೂವು ಪಡೆದ ಭಕ್ತಪ್ರಹ್ಲಾದ" ಅಲ್ಲದೆ "ಆಕಾಶದಿ ಅಭಿಯಾಗಿ, ಕನ್ನಡ ಪೃಥ್ವಿಗೆ ನೀ ಅರಸು, ಅಣ್ಣಾ ಬಾಂಡ್ ದೊಡ್ಮನೆ ಹುಡುಗನ ನಾನ್ ಸ್ಟಾಟ್ ಸ್ಟೆಪ್ಪು ಡ್ಯಾನ್ಸ್ ವಿಥ್ ಅಪ್ಪು" ಹೀಗೆ ಅಪ್ಪು ಸಿನಿಮಾ ಟೈಟಲ್ ಬಳಸಿ ಸಾಂಗ್ ರೆಡಿ ಮಾಡಿದ್ದರು. ಆದರೆ, ಹಾಡು ಕೇಳಿದ ಬಳಿಕ ಪುನೀತ್ ರಾಜ್‌ಕುಮಾರ್ ಸಾಹಿತ್ಯವನ್ನು ಬದಲಾಯಿಸುವಂತೆ ಮನವಿ ಮಾಡಿಕೊಂಡಿದ್ದರು. ಮತ್ತೆ ಇದೇ ಟ್ಯೂನ್‌ಗೆ ಹೊಸದಾಗಿ ಸಾಹಿತ್ಯ ರಚಿಸಲಾಗಿತ್ತು.

     ಒರಿಜಿನಲ್ ಸಾಂಗ್ ತಿರಸ್ಕರಿಸಿದ್ದೇಕೆ?

    ಒರಿಜಿನಲ್ ಸಾಂಗ್ ತಿರಸ್ಕರಿಸಿದ್ದೇಕೆ?

    41 ಟೈಟಲ್ ಇಟ್ಟುಕೊಂಡು ಬರೆದ ಸಾಂಗ್ ಕೇಳಿದ ಕೂಡಲೇ ಅಪ್ಪು ಬೇಡ ಅಂದಿದ್ದರು. ನನ್ನ ಬಗ್ಗೆನೇ ಹೊಗಳಿದರೆ ಚೆನ್ನಾಗಿ ಕಾಣುವುದಿಲ್ಲ. ಅದು ಅಭಾಸ ಅನಿಸಬಹುದು. ದಯವಿಟ್ಟು ಈ ಹಾಡಿನ ಸಾಹಿತ್ಯವನ್ನು ಬದಲಾಯಿಸಿ ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದರಂ‍ತೆ. ನಿರ್ದೇಶಕ ಪವನ್ ಒಡೆಯರ್‌ಗೆ ಈ ಹಾಡು ಚೆನ್ನಾಗಿದೆ ಅಂತ ಅನಿಸಿದ್ದರೂ, ಅಪ್ಪು ಒತ್ತಾಯಕ್ಕೆ ಅದೇ ಟ್ಯೂನ್‌ಗೆ ಹೊಸದಾಗಿ ಸಾಹಿತ್ಯ ರಚಿಸಿ, ಸಂಜಿತ್ ಹೆಗ್ಡೆ ಹಾಗೂ ಅಂಟೋನಿ ದಾಸನ್ ಅವರಿಂದ ಹಾಡಿಸಲಾಗಿತ್ತು. ಈಗ ಅಪ್ಪು ನೆನಪಿಗಾಗಿ ಆ ಒರಿಜಿನಲ್ ಸಾಂಗ್ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.

    ಕೋಟಿ, ಕೋಟಿ ಆಫರ್ ಬಿಟ್ಟ 'ಜೇಮ್ಸ್' ನಿರ್ಮಾಪಕ!ಕೋಟಿ, ಕೋಟಿ ಆಫರ್ ಬಿಟ್ಟ 'ಜೇಮ್ಸ್' ನಿರ್ಮಾಪಕ!

     ಅಪ್ಪು ಟೈಟಲ್‌ಗಳ ಟ್ರ್ಯಾಕ್ ಯಾವಾಗ?

    ಅಪ್ಪು ಟೈಟಲ್‌ಗಳ ಟ್ರ್ಯಾಕ್ ಯಾವಾಗ?

    'ಪ್ರೇಮದ ಕಾಣಿಕೆ'ಯಿಂದ 'ಅಂಜನಿಪುತ್ರ'ದವರೆಗೂ 41 ಸಿನಿಮಾಗಳಲ್ಲಿ ನಟಿಸಿದ್ದರು. ನಟಸಾರ್ವಭೌಮ ಸಿನಿಮಾನೂ ಸೇರಿದರೆ 42 ಸಿನಿಮಾ ಆಗುತ್ತೆ. ಇಷ್ಟೂ ಟೈಟಲ್‌ಗಳು ಒಂದೇ ಹಾಡಿನಲ್ಲಿ ಇರುವ ಹಾಡು ಮಾರ್ಚ್ 15ಕ್ಕೆ ರಿಲೀಸ್ ಆಗುತ್ತಿದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡ ಈ ಹಾಡನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಪುನೀತ್ ಅಭಿಮಾನಿಗಳಿಗೆ ಪವನ್ ಒಡೆಯರ್ ಹಾಗೂ ತಂಡ ಈ ಹಾಡನ್ನು ಅರ್ಪಿಸಲಿದ್ದಾರೆ.

    English summary
    Pavan Wadeyar releasing a Natasarvabhouma original song which includes Puneeth Movie titles. Pavan wrote Natasarvabhouma introduction song which includes has Puneeth Rajkumar titles in it. But Puneeth Rajkumar refused it.
    Wednesday, March 9, 2022, 15:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X