For Quick Alerts
  ALLOW NOTIFICATIONS  
  For Daily Alerts

  ಪವನ್ ಒಡೆಯರ್ 'ರೇಮೋ' ಚಿತ್ರದ ಕ್ಲೈಮ್ಯಾಕ್ಸ್ ಕಳೆದುಹೋಗಿದೆ: ಹೊಸ ಪ್ರಯೋಗ ನೋಡಿದಿರಾ?

  |

  ನಿರ್ದೇಶಕ ಪವನ್ ಒಡೆಯರ್ ತಮ್ಮ ಮುಂದಿನ 'ರೇಮೋ' ಚಿತ್ರಕ್ಕೆಂದು ಬರೆದ ಹೊಸ ಕ್ಲೈಮ್ಯಾಕ್ಸ್ ಕಳೆದುಹೋಗಿದೆಯಂತೆ. ಅದನ್ನು ತಮ್ಮ ಮನೆಯಲ್ಲಿ ಹುಡುಕಾಡಿ ಸೋತು, ಕೊನೆಗೆ ಚಿತ್ರತಂಡದ ಸದಸ್ಯರ ಬಳಿಯೂ ಕೇಳಿದ್ದಾರೆ. ಆದರೆ ಯಾರಿಗೂ ಅದರ ಬಗ್ಗೆ ಮಾಹಿತಿಯೇ ಇಲ್ಲವಂತೆ!

  ಇದೇನು ಹೊಸ ಕಥೆ ಎಂಬ ಗೊಂದಲ ಬೇಡ. ಬಾಲಿವುಡ್ ಮಾಡಿರುವಂತೆಯೇ ಕನ್ನಡದಲ್ಲಿ ಪವನ್ ಒಡೆಯರ್ ಮಾಡಿರುವ ಪ್ರಯೋಗವಿದು. ಇತ್ತೀಚೆಗೆ ಭಾರತೀಯ ಚಿತ್ರರಂಗದ ಖ್ಯಾತನಾಮರಾದ ಅಮಿತಾಬ್ ಬಚ್ಚನ್, ರಜನಿಕಾಂತ್, ಶಿವರಾಜ್ ಕುಮಾರ್, ಮೋಹನ್ ಲಾಲ್, ಮಮ್ಮೂಟಿ, ಚಿರಂಜೀವಿ, ಪ್ರಿಯಾಂಕಾ ಚೋಪ್ರಾ ಮುಂತಾದವರು ಜನರಿಗೆ ನಿಮ್ಮೊಂದಿಗೆ ನಾವೆಲ್ಲಾ ಇದ್ದೇವೆ. ನಮ್ಮದು ಒಂದೇ ಕುಟುಂಬ ಎಂದು ಸ್ಫೂರ್ತಿ ತುಂಬುವ ಉದ್ದೇಶದಿಂದ 'ಫ್ಯಾಮಿಲಿ' ಎಂಬ ಕಿರುಚಿತ್ರ ಮಾಡಿದ್ದರು. ಅದೇ ರೀತಿಯ ಕಿರುಚಿತ್ರವನ್ನು ಪವನ್ ಸೃಷ್ಟಿಸಿದ್ದಾರೆ. ಮುಂದೆ ಓದಿ...

  ಅಮಿತಾಬ್ ಬಚ್ಚನ್ ಕನ್ನಡಕ ಕಳೆದು ಹೋಗಿದೆ: ಶಿವಣ್ಣ ನಿಮಗೆ ಸಿಕ್ಕಿತಾ?ಅಮಿತಾಬ್ ಬಚ್ಚನ್ ಕನ್ನಡಕ ಕಳೆದು ಹೋಗಿದೆ: ಶಿವಣ್ಣ ನಿಮಗೆ ಸಿಕ್ಕಿತಾ?

  ಕೊರೊನಾ ಸಂದೇಶ

  ಕೊರೊನಾ ಸಂದೇಶ

  ಪವನ್ ಈ ಕಿರುಚಿತ್ರವನ್ನು ತಮ್ಮ 'ರೇಮೋ' ಚಿತ್ರತಂಡವನ್ನು ಬಳಸಿಕೊಂಡು ಮಾಡಿದ್ದು, ಕೊನೆಯಲ್ಲಿ ಕೊರೊನಾ ವೈರಸ್ ಸಲುವಾಗಿ ಘೋಷಿಸಿರುವ ಲಾಕ್‌ಡೌನ್‌ನಲ್ಲಿ ಎಲ್ಲರೂ ಸುರಕ್ಷತೆ ಕಾಪಾಡಿಕೊಳ್ಳುವಂತೆ ಸಂದೇಶ ನೀಡಿದ್ದಾರೆ.

  ರೇಮೋದ ಕ್ಲೈಮ್ಯಾಕ್ಸ್

  ಈ ಕಿರುಚಿತ್ರ ಆರಂಭವಾಗುವುದು ರಾಜೇಶ್ ನಟರಂಗ ಅವರಿಂದ. ಗೂಗ್ಲಿ ಕ್ಲೈಮ್ಯಾಕ್ಸ್ ಚೆನ್ನಾಗಿ ಮಾಡಿದ್ದೀರಿ ಎಂದು ಅವರು ಪವನ್ ಒಡೆಯರ್‌ಗೆ ಹೇಳಿದಾಗ ತಮ್ಮ 'ರೇಮೋ' ಚಿತ್ರದ ಕ್ಲೈಮ್ಯಾಕ್ಸ್‌ಅನ್ನು ಬದಲಿಸಿದ್ದನ್ನು ಹೇಳಿದ್ದೀನಾ ಎಂದು ಪವನ್ ಕೇಳುತ್ತಾರೆ. ಅಲ್ಲಿಂದ 'ರೇಮೋ'ದ ಹೊಸ ಕ್ಲೈಮ್ಯಾಕ್ಸ್ ಹುಡುಕಾಟ ಶುರುವಾಗುತ್ತದೆ.

  ರೇಮೋ ಚಿತ್ರತಂಡದವರು

  ರೇಮೋ ಚಿತ್ರತಂಡದವರು

  ನಟ ಅಚ್ಯುತ್ ಕುಮಾರ್, 'ರೇಮೋ' ಚಿತ್ರದ ನಾಯಕ ಇಶಾನ್, ನಾಯಕಿ ಆಶಿಕಾ ರಂಗನಾಥ್, ನಿರ್ಮಾಪಕ ಸಿ.ಆರ್. ಮನೋಹರ್, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ, ಛಾಯಾಗ್ರಾಹಕ ವೈದಿ ಹಾಗೂ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಈ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಫ್ಯಾಮಿಲಿ ಕಿರುಚಿತ್ರ

  ಫ್ಯಾಮಿಲಿ ಕಿರುಚಿತ್ರ

  ಹಿಂದಿಯಲ್ಲಿ ನಿರ್ಮಿಸಿದ್ದ 'ಫ್ಯಾಮಿಲಿ' ಕಿರುಚಿತ್ರದಲ್ಲಿ ಇಡೀ ಭಾರತೀಯ ಚಿತ್ರರಂಗವು ಒಂದಾಗಿದೆ ಎಂಬ ಸಂದೇಶ ನೀಡಲಾಗಿತ್ತು. ವಿವಿಧ ಭಾಷೆಗಳ ಕಲಾವಿದರು ತಮ್ಮ ಭಾಷೆಯಲ್ಲಿಯೇ ಮಾತನಾಡಿದ್ದರು. ಆದರೆ ಅವರೆಲ್ಲರೂ ಒಂದೇ ಮನೆಯಲ್ಲಿ ಇರುವಂತೆ ಚಿತ್ರಿಸಲಾಗಿತ್ತು. ಅಮಿತಾಬ್ ಅವರ ಕಪ್ಪು ಕನ್ನಡಕ ಕಳೆದು ಹೋಗಿದ್ದು ಅದನ್ನು ಹುಡುಕುವ ಪರಿಕಲ್ಪನೆಯ ಮೂಲಕ ಒಗ್ಗಟ್ಟಿನ ಸಂದೇಶ ನೀಡಲಾಗಿತ್ತು.

  ವಾಟ್ಸಾಪ್‌ನಲ್ಲಿಯೇ ನಿರ್ದೇಶನ!

  ವಾಟ್ಸಾಪ್‌ನಲ್ಲಿಯೇ ನಿರ್ದೇಶನ!

  ಈ ಕಿರುಚಿತ್ರವನ್ನೇ ಸ್ಫೂರ್ತಿಯನ್ನಾಗಿಸಿಕೊಂಡಿರುವುದಾಗಿ ಪವನ್ ಒಡೆಯರ್ ತಿಳಿಸಿದ್ದಾರೆ. ತಮ್ಮ 'ರೇಮೋ' ಚಿತ್ರದ ಕ್ಲೈಮ್ಯಾಕ್ಸ್‌ಅನ್ನು ಪರಿಕಲ್ಪನೆಯಾಗಿರಿಸಿಕೊಂಡು ಸ್ಕ್ರಿಪ್ಟ್ ಬರೆದಿದ್ದರು. ಬಳಿಕ ಡೈಲಾಗ್ ಮತ್ತು ಕ್ಯಾಮೆರಾ ಲುಕ್, ಆಂಗಲ್ ಹೇಗೆ ಇರಬೇಕು ಎಂಬುದನ್ನು ವಾಟ್ಸಾಪ್‌ನಲ್ಲಿ ಹಂಚಿಕೊಂಡರು. ಕಲಾವಿದರ ಮನೆಯವರೇ ಮೊಬೈಲ್‌ನಲ್ಲಿ ಶೂಟ್ ಮಾಡಿ ಕಳುಹಿಸಿದರು. ಈ ರೆಕಾರ್ಡ್‌ಗಳನ್ನು ಒಂದುಗೂಡಿಸಿದ ಬಳಿಕ ಪವನ್ ತಮ್ಮ ಭಾಗದ ದೃಶ್ಯಗಳನ್ನು ಚಿತ್ರೀಕರಿಸಿ ಎಡಿಟ್ ಮಾಡಿದ್ದಾರೆ.

  ಮೆಚ್ಚುಗೆ ಗಳಿಸಿದ ವಿಡಿಯೋ

  ಮೆಚ್ಚುಗೆ ಗಳಿಸಿದ ವಿಡಿಯೋ

  ಕಿರುಚಿತ್ರ ಸಂಪೂರ್ಣ ಕಪ್ಪು ಬಿಳುಪಿನಲ್ಲಿ ಚಿತ್ರಿತವಾಗಿದೆ. ಈ ವಿಡಿಯೋವನ್ನು ಪವನ್ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು, ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಸಾವಿರಾರು ಮಂದಿ ಕಿರುಚಿತ್ರವನ್ನು ವೀಕ್ಷಿಸಿದ್ದಾರೆ. ನಿರ್ದೇಶಕರಾದ ಸುನಿ, ಸಂತು, ನಂದಕಿಶೋರ್ ಮುಂತಾದವರು ಕೂಡ ಫೋನ್ ಮಾಡಿ ಪವನ್ ಒಡೆಯರ್‌ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಕ್ಲೈಮ್ಯಾಕ್ಸ್ ಬದಲಿಸಿದ್ದು ನಿಜ

  ಕ್ಲೈಮ್ಯಾಕ್ಸ್ ಬದಲಿಸಿದ್ದು ನಿಜ

  'ಹಿಂದಿಯ ಕಿರುಚಿತ್ರ ನೋಡಿದವರೊಬ್ಬರು, ನೀವೂ ಏಕೆ ಕನ್ನಡದಲ್ಲಿ ಈ ರೀತಿ ಕಿರುಚಿತ್ರ ಮಾಡಬಾರದು? ಎಂದು ಟ್ವಿಟ್ಟರ್‌ನಲ್ಲಿ ನನ್ನನ್ನೂ ಒಳಗೊಂಡಂತೆ ಕೆಲವು ನಿರ್ದೇಶಕರನ್ನು ಟ್ಯಾಗ್ ಮಾಡಿ ಕೇಳಿದ್ದರು. ಹೌದಲ್ವಾ ಎನಿಸಿತು. ಕಂಟೆಂಟ್ ಬೇಕು. ಏನು ಮಾಡುವುದು ಎಂದು ಯೋಚಿಸಿದಾಗ ಹೊಸ ಕ್ಲೈಮ್ಯಾಕ್ಸ್ ನೆನಪಾಯಿತು. 'ರೇಮೋ'ಕ್ಕೆ ಹೊಸದಾಗಿ ಕ್ಲೈಮ್ಯಾಕ್ಸ್ ಮಾಡಿದ್ದೆ. ಅದನ್ನು ಯಾರಿಗೂ ಹೇಳಿರಲಿಲ್ಲ. ಈಗಲೂ ಅದು ಯಾರಿಗೂ ಗೊತ್ತಿಲ್ಲ' ಎಂದು ಪವನ್ ಒಡೆಯರ್ 'ಫಿಲ್ಮಿ ಬೀಟ್'ಗೆ ತಿಳಿಸಿದರು.

  ದೆಹಲಿ ಲಾಕ್‌ಡೌನ್‌ನಿಂದ ತಪ್ಪಿಸಿಕೊಂಡೆವು

  ದೆಹಲಿ ಲಾಕ್‌ಡೌನ್‌ನಿಂದ ತಪ್ಪಿಸಿಕೊಂಡೆವು

  'ರೇಮೋ' ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಹಾಗೆಯೇ ಸ್ಕ್ರಿಪ್ಟ್ ಮೇಲೆ ರೀವರ್ಕ್ ಮಾಡಿ ಕ್ಲೈಮ್ಯಾಕ್ಸ್ ಬದಲಿಸಿದ್ದೆ. ಒಂದು ಹಾಡು ಕಾಶ್ಮೀರ ಮತ್ತೊಂದು ರಾಜಸ್ಥಾನದಲ್ಲಿ ಶೂಟಿಂಗ್ ಅಗಬೇಕಿತ್ತು. ಹಾಗೆ ಹೋಗಿದ್ದರೆ ದೆಹಲಿಯಲ್ಲಿ ಲಾಕ್‌ಡೌನ್ ಆಗುತ್ತಿದ್ದೆವು. ಏಕೆಂದರೆ ಮಾರ್ಚ್ 24ರಂದು ಶೂಟಿಂಗ್‌ಗೆ ಪ್ಲ್ಯಾನ್ ಮಾಡಿಕೊಂಡಿದ್ದೆವು ಎಂದು ಅವರು ಹೇಳಿದರು.

  English summary
  Inspired by super stars Family short film, director Pavan Wadeyar has directed Where is the new climax? short movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X