For Quick Alerts
  ALLOW NOTIFICATIONS  
  For Daily Alerts

  'ಮಾಸ್ತಿ ಗುಡಿ' ದುರ್ಘಟನೆ ಬಳಿಕ ರವಿವರ್ಮಾಗೆ ಕಮ್ಮಿ ಆಗಿಲ್ಲ ಅವಕಾಶಗಳ ಸುರಿಮಳೆ

  By Naveen
  |

  ರವಿವರ್ಮ ಕನ್ನಡ ಚಿತ್ರರಂಗದ ಫೇಮಸ್ ಸ್ಟಂಟ್ ಮಾಸ್ಟರ್. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ರೋಚಕ ಸಾಹಸ ದೃಶ್ಯಗಳನ್ನ ಸಂಯೋಜಿಸಿದ್ದ ರವಿವರ್ಮ ಬಾಲಿವುಡ್ ಗೂ ಹಾರಿ ಸಲ್ಮಾನ್ ಖಾನ್, ಶಾರುಖ್ ಖಾನ್ ಕೈಯಲ್ಲಿ ಭರ್ಜರಿ ಸ್ಟಂಟ್ ಮಾಡಿಸಿದ್ದು ನಿಮಗೆ ಗೊತ್ತೇ ಇದೆ.

  ರವಿವರ್ಮ ಸ್ಯಾಂಡಲ್ ವುಡ್, ಟಾಲಿವುಡ್, ಬಾಲಿವುಡ್ ನಲ್ಲಿ ಬಹುಬೇಡಿಕೆ ಕಂಡುಕೊಳ್ಳುತ್ತಿರುವಾಗಲೇ, ಆಗಬಾರದ್ದ ಅನಾಹುತವೊಂದು ನಡೆದೇ ಹೋಯ್ತು. 'ಮಾಸ್ತಿಗುಡಿ' ಸಿನಿಮಾದ ಶೂಟಿಂಗ್ ನಲ್ಲಿ ರವಿವರ್ಮ ಮತ್ತು ಚಿತ್ರತಂಡದ ಬೇಜವಾಬ್ದಾರಿಯಿಂದ ಇಬ್ಬರು ಖಳನಟರು ದುರಂತ ಸಾವಿಗೀಡಾದರು.['ಮಾಸ್ತಿಗುಡಿ' ದುರಂತ: ನಾಗಶೇಖರ್, ರವಿವರ್ಮಗೆ ಷರತ್ತುಬದ್ಧ ಜಾಮೀನು ]

  'ಮಾಸ್ತಿಗುಡಿ' ದುರ್ಘಟನೆ ಬಳಿಕ ಕೋರ್ಟ್, ಪೊಲೀಸ್ ಸ್ಟೇಷನ್ ಅಂತ ಅಲೆದಾಡಿದ ರವಿವರ್ಮ ಕಥೆ ಬಣ್ಣದ ಲೋಕದಲ್ಲಿ ಮುಗಿದ ಹಾಗೆ ಅಂತ ಎಲ್ಲರೂ ಅಂದಾಜಿಸಿರಬಹುದು. ಆದ್ರೆ, ರವಿವರ್ಮಗೆ ಅದೃಷ್ಟ ಕೈಕೊಟ್ಟಿಲ್ಲ. ಸ್ಟಾರ್ ಗಳ ಸಿನಿಮಾಗಳಲ್ಲಿ ಸಾಹಸ ಸಂಯೋಜಿಸುವ ಅವಕಾಶ ರವಿವರ್ಮ ರವರನ್ನ ಹುಡುಕ್ಕೊಂಡು ಬರೋದು ಇನ್ನೂ ಕಮ್ಮಿ ಆಗಿಲ್ಲ. ಮುಂದೆ ಓದಿ...['ಮಾಸ್ತಿಗುಡಿ' ದುರಂತ: ನಾಗಶೇಖರ್, ರವಿವರ್ಮಗೆ ಷರತ್ತುಬದ್ಧ ಜಾಮೀನು]

  ರವಿವರ್ಮಗೆ ಸಿಕ್ಕಿದೆ ಬಂಪರ್ ಆಫರ್

  ರವಿವರ್ಮಗೆ ಸಿಕ್ಕಿದೆ ಬಂಪರ್ ಆಫರ್

  ರವಿವರ್ಮಗೆ ಸದ್ಯ ಬಂಪರ್ ಆಫರ್ ವೊಂದು ಸಿಕ್ಕಿದೆ. ಟಾಲಿವುಡ್ ನ ಸ್ಟಾರ್ ನಟನೊಬ್ಬನ 25ನೇ ಸಿನಿಮಾಗೆ ರವಿವರ್ಮ ಸಾಹಸ ನಿರ್ದೇಶನ ಮಾಡಲಿದ್ದಾರೆ. ಅಂದಹಾಗೆ ರವಿವರ್ಮ ಸದ್ಯ ಕೆಲಸ ಮಾಡ್ತಿರೋದು ಯಾರ್ ಜೊತೆ ಅಂದುಕೊಂಡ್ರಾ.? ಬೇರೆ ಯಾರ್ ಜೊತೆನೂ ಅಲ್ಲ, ಟಾಲಿವುಡ್ ನ ಗಬ್ಬರ್ ಸಿಂಗ್ ಜೊತೆ.!

  ಗಬ್ಬರ್ ಸಿಂಗ್ ಪವರ್ ಹೆಚ್ಚಿಸಲಿರುವ ರವಿವರ್ಮ

  ಗಬ್ಬರ್ ಸಿಂಗ್ ಪವರ್ ಹೆಚ್ಚಿಸಲಿರುವ ರವಿವರ್ಮ

  ಹೌದು, ಪವರ್ ಸ್ಟಾರ್ ಪವನ್ ಕಲ್ಯಾಣ್ ಮುಂದಿನ ಸಿನಿಮಾದಲ್ಲಿ ಕನ್ನಡಿಗ ರವಿವರ್ಮ ರವರ ಸ್ಟಂಟ್ ಇರಲಿದೆ. ವಿಶೇಷ ಅಂದ್ರೆ ಇದು ಪವನ್ ಕಲ್ಯಾಣ್ ಅಭಿನಯದ 25ನೇ ಸಿನಿಮಾ. ಈ ವಿಷಯವನ್ನ ಸ್ವತ ರವಿವರ್ಮ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಪವನ್ ಮೀಟ್ ಮಾಡಿದ ಫೋಟೊ ಹಾಕಿ ಅವ್ರಿಗೆ ಧನ್ಯವಾದ ಹೇಳಿದ್ದಾರೆ. ಅಂದಹಾಗೆ, ಪವನ್ ಕಲ್ಯಾಣ್ ರ ಈ 25ನೇ ಸಿನಿಮಾವನ್ನ ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಪವನ್ ಗೆ 'ಅತ್ತಾರಿಂಟಿಕಿ ದಾರೇದಿ' ಎನ್ನುವ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿದ್ದ ತ್ರಿವಿಕ್ರಮ್ ಈಗ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ.

  ಕನ್ನಡದಲ್ಲೂ ಫುಲ್ ಬಿಜಿ

  ಕನ್ನಡದಲ್ಲೂ ಫುಲ್ ಬಿಜಿ

  'ಮಾಸ್ತಿಗುಡಿ' ಸಿನಿಮಾದ ದುರ್ಘಟನೆ ಬಳಿಕ ರವಿವರ್ಮ ಎಲ್ಲರ ಕಣ್ಣಿಗೆ ವಿಲನ್ ಆಗಿ ಬಿಟ್ಟಿದ್ರು. ಈಗ ಅದೇ ರವಿವರ್ಮ ಕನ್ನಡದಲ್ಲಿ ಸಖತ್ ಬಿಜಿ ಆಗಿದ್ದಾರೆ. ಇತ್ತೀಚೆಗಷ್ಟೇ ತೆರೆಗೆ ಬಂದ 'ರಾಜಕುಮಾರ' ಮತ್ತು 'ಹೆಬ್ಬುಲಿ' ಸಿನಿಮಾಗಳಲ್ಲಿಯೂ ರವಿವರ್ಮ ಸಾಹಸ ಸಂಯೋಜನೆ ಇತ್ತು. ಅಲ್ಲದೆ ಸದ್ಯ 'ಮಫ್ತಿ', 'ಸನ್ ಆಫ್ ಬಂಗಾರದ ಮನುಷ್ಯ', 'ಸಾಹೇಬ' ಸೇರಿದಂತೆ ಸಾಕಷ್ಟು ಸಿನಿಮಾಗಳು ಅವ್ರ ಕೈಯಲ್ಲಿದೆ.

  ಪಕ್ಕದ ಇಂಡಸ್ಟ್ರಿಯಲ್ಲೂ ಹವಾ

  ಪಕ್ಕದ ಇಂಡಸ್ಟ್ರಿಯಲ್ಲೂ ಹವಾ

  ಬರಿ ಕನ್ನಡದಲ್ಲಷ್ಟೆ ಅಲ್ಲ ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳಿಗೆ ಈ ವರ್ಷ ರವಿವರ್ಮ ಕೆಲಸ ಮಾಡಲಿದ್ದಾರೆ. ಈ ಹಿಂದೆ ಶಾರುಖ್ ಖಾನ್, ಸಲ್ಮಾನ್ ಖಾನ್ ಸಿನಿಮಾಗಳಿಗೆ ವರ್ಕ್ ಮಾಡಿದ್ದ ಅವ್ರು ಈಗ ಟೈಗರ್ ಶ್ರಾಫ್ ಜೊತೆ ಸಿನಿಮಾವೊಂದನ್ನ ಮಾಡ್ತಿದ್ದಾರೆ. ಅಲ್ಲದೇ, ಮಾಲಿವುಡ್ ಸೂಪರ್ ಸ್ಟಾರ್ ಮೋಹಲ್ ಲಾಲ್ ನಟನೆಯ ಸಿನಿಮಾದಲ್ಲೂ ರವಿವರ್ಮ ಚಾನ್ಸ್ ಗಿಟ್ಟಿಸಿದ್ದಾರೆ.

   'ಮಾಸ್ತಿಗುಡಿ' ಬಳಿಕ ಡಿಮ್ಯಾಂಡ್ ಕಡಿಮೆಯಾಗಿಲ್ಲ

  'ಮಾಸ್ತಿಗುಡಿ' ಬಳಿಕ ಡಿಮ್ಯಾಂಡ್ ಕಡಿಮೆಯಾಗಿಲ್ಲ

  'ಮಾಸ್ತಿಗುಡಿ' ಬಳಿಕ ರವಿವರ್ಮ ಡಿಮ್ಯಾಂಡ್ ಸ್ವಲ್ಪವೂ ಕಡಿಮೆಯಾಗಿಲ್ಲ. ಕನ್ನಡ, ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳ ಜೊತೆ ಈಗ ಪವನ್ ಕಲ್ಯಾಣ್ ಸಿಲ್ವರ್ ಜ್ಯೂಬ್ಲಿ ಸಿನಿಮಾ ಸಹ ಅವ್ರ ಪಾಲಾಗಿದೆ.

  English summary
  Ravi Varma is roped in as stunt director for Tollywood Actor Pawan Kalyan's 25th Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X