For Quick Alerts
  ALLOW NOTIFICATIONS  
  For Daily Alerts

  'ಕಾಸ್ಟಿಂಗ್ ಕೌಚ್' ತಡೆಯಲು ಹೊಸ ಹೆಜ್ಜೆಯಿಟ್ಟ ಪವನ್ ಕಲ್ಯಾಣ್

  By Bharath Kumar
  |

  ಕಳೆದ ಕೆಲವು ತಿಂಗಳಿನಿಂದ ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಗಲಾಟೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ. ಯುವ ನಟಿ ಶ್ರೀರೆಡ್ಡಿ ಸೇರಿದಂತೆ ಹಲವು ನಟಿಯರು ತೆಲುಗು ಸಿನಿ ಲೋಕದ ನಿರ್ದೇಶಕ, ನಿರ್ಮಾಪಕ, ನಟರ ವಿರುದ್ಧ ವಾಗ್ದಾಳಿ ನಡೆಸಿದ್ದರು.

  ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಹೆಸರನ್ನ ಕೂಡ ಈ ಕಾಸ್ಟಿಂಗ್ ಕೌಚ್ ವಿವಾದದಲ್ಲಿ ಎಳೆದು ತಂದು ದೊಡ್ಡ ಸಂಚಲನ ಸೃಷ್ಟಿಸಿದ್ದರು. ಈ ನಡುವೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜನಸೇನಾ ನಾಯಕ ಪವನ್ ವಿರುದ್ಧ ಟ್ವಿಟ್ಟರ್ ನಲ್ಲಿ ದೊಡ್ಡ ಯುದ್ದವನ್ನ ಮಾಡಿದರು.

  ಇದರಿಂದ ತೀವ್ರ ಬೇಸರಗೊಂಡ ಮೆಗಾಸ್ಟಾರ್ ಹಾಗೂ ಮೆಗಾ ಫ್ಯಾಮಿಲಿಯ ಅಭಿಮಾನಿಗಳು ಶ್ರೀರೆಡ್ಡಿ ಮತ್ತು ಆರ್.ಜಿ.ವಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಇದೆಲ್ಲವೂ ಈಗ ಮುಗಿದ ಅಧ್ಯಾಯ. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣದ 'ಕಾಸ್ಟಿಂಗ್ ಕೌಚ್' ತಡೆಯಲು ಇದೀಗ ಪವನ್ ಕಲ್ಯಾಣ್ ಹೊಸ ಹೆಜ್ಜೆಯಿಟ್ಟಿದ್ದಾರೆ. ಏನದು.? ಮುಂದೆ ಓದಿ....

  ಆತ್ಮ ಗೌರವ ಹೋರಾಟ ಸಮಿತಿ

  ಆತ್ಮ ಗೌರವ ಹೋರಾಟ ಸಮಿತಿ

  ಸಿನಿ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಸಂಪ್ರದಾಯವನ್ನ ತಡೆಯಲು ಮತ್ತು ಸಿನಿಮಾ ಇಂಡಸ್ಟ್ರಿಗೆ ಬರುತ್ತಿರುವ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನ ನಿಯಂತ್ರಿಸುವ ಸಲುವಾಗಿ ''ಆತ್ಮ ಗೌರವ ಹೋರಾಟ ಸಮಿತಿ'' ರಚನೆ ಮಾಡುವುದಾಗಿ ಪವನ್ ಕಲ್ಯಾಣ್ ನಿರ್ಧರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

  ಸಮಿತಿಗೆ 'ಜನಸೇನಾ' ಬೆಂಬಲ

  ಸಮಿತಿಗೆ 'ಜನಸೇನಾ' ಬೆಂಬಲ

  ಸಿನಿ ಇಂಡಸ್ಟ್ರಿಯ ಒಳಿತಿಗಾಗಿ ರಚನೆಯಾಗಲಿರುವ 'ಆತ್ಮ ಗೌರವ ಹೋರಾಟ ಸಮಿತಿ'ಗೆ ಜನಸೇನಾ ವೀರ ಮಹಿಳಾ ವಿಭಾಗವೂ ಜೊತೆಯಾಗಿ ನಿಲ್ಲುತ್ತದೆ. ಎಲ್ಲ ರೀತಿಯಲ್ಲೂ ಈ ಸಮಿತಿಗೆ ನಮ್ಮ ಪಕ್ಷದ ಮಹಿಳಾ ವಿಭಾಗ ಬೆಂಬಲವಾಗಿ ನಿಲ್ತಾರೆ'' ಎಂಬ ವಿಷ್ಯವನ್ನ ಪವನ್ ತಿಳಿಸಿದ್ದಾರೆ.

  ಪವನ್ ಕಲ್ಯಾಣ್ ಗೆ ಬೆಂಬಿಡದೆ ಕಾಡುತ್ತಿರುವ ರಾಮ್ ಗೋಪಾಲ್ ವರ್ಮಾಪವನ್ ಕಲ್ಯಾಣ್ ಗೆ ಬೆಂಬಿಡದೆ ಕಾಡುತ್ತಿರುವ ರಾಮ್ ಗೋಪಾಲ್ ವರ್ಮಾ

  ಶ್ರೀರೆಡ್ಡಿ ಏನಂದ್ರು.?

  ಶ್ರೀರೆಡ್ಡಿ ಏನಂದ್ರು.?

  ಇನ್ನು ಪವನ್ ಕಲ್ಯಾಣ್ ಅವರು ಈ ನಿರ್ಧಾರವನ್ನ ತಮ್ಮ ಟ್ವಿಟ್ಟರ್ ಮೂಲಕ ಹೇಳುತ್ತಿದ್ದಂತೆ, ನಟಿ ಶ್ರೀರೆಡ್ಡಿ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಪವನ್ ಟ್ವೀಟ್ ಗೆ ರಿಯಾಕ್ಷನ್ ಕೊಟ್ಟಿದ್ದು, ಎರಡು ಕೈ ಎತ್ತಿ ಮುಗಿಯುತ್ತಿರುವ ಎಮೋಜಿ ಪೋಸ್ಟ್ ಮಾಡಿದ್ದಾರೆ.

  ಪವನ್ ಕಲ್ಯಾಣ್ ವಿವಾದಕ್ಕೆ ಹೊಸ ಟ್ವಿಸ್ಟ್ ನೀಡಿದ ಶ್ರೀರೆಡ್ಡಿಪವನ್ ಕಲ್ಯಾಣ್ ವಿವಾದಕ್ಕೆ ಹೊಸ ಟ್ವಿಸ್ಟ್ ನೀಡಿದ ಶ್ರೀರೆಡ್ಡಿ

  ಇದು ಸಕ್ಸಸ್ ಆಗುತ್ತಾ.?

  ಇದು ಸಕ್ಸಸ್ ಆಗುತ್ತಾ.?

  ತೆಲುಗು ಇಂಡಸ್ಟ್ರಿಯಲ್ಲಿ ಸದ್ಯದ ಮಟ್ಟಿಗೆ ಕಾಸ್ಟಿಂಗ್ ಕೌಚ್ ಇದೆ ಎನ್ನುವುದನ್ನ ಬಹುತೇಕ ಕಲಾವಿದರು ಒಪ್ಪಿಕೊಳ್ಳುತ್ತಿಲ್ಲ. ಕೇವಲ ನೊಂದ ಜೂನಿಯರ್ ಕಲಾವಿದರು ಮಾತ್ರ ಇದೆ ಎಂದು ಆರೋಪಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಕಲಾವಿದರ ಸಂಘ, ವಾಣಿಜ್ಯ ಮಂಡಳಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಗ ಪವನ್ ತೆಗೆದುಕೊಂಡಿರುವ ಈ ನಿರ್ಧಾರದ ಬಗ್ಗೆ ಎಷ್ಟರ ಜನರು ವಿಶ್ವಾಸ ಇಡುತ್ತಾರೆ ಎಂಬುದು ಪ್ರಶ್ನೆಯಾಗಲಿದೆ. ಮತ್ತು ಇದರಿಂದ ಈ ಸಮಸ್ಯೆ ನಿಯಂತ್ರಿಸಲು ಸಾಧ್ಯವಾಗುತ್ತಾ ಎಂಬುದು ಕುತೂಹಲವಾಗಿದೆ.

  ಪವನ್ ಕಲ್ಯಾಣ್ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಿದ ನಟಿಪವನ್ ಕಲ್ಯಾಣ್ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಿದ ನಟಿ

  English summary
  Telugu actor, Janasena party leaders Pawan Kalyan responds on twitter over casting couch in Tollywood. Janasena party support to Film industry women says power star.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X