For Quick Alerts
  ALLOW NOTIFICATIONS  
  For Daily Alerts

  ಸರ್ಜಾ ಕುಟುಂಬದಿಂದ ಬಂದ ಮತ್ತೊಬ್ಬ ಆಕ್ಷನ್ ಹೀರೋ

  By Pavithra
  |

  'ಅಥರ್ವ' ಗಾಂಧಿನಗರದ ಅಂಗಳಕ್ಕೆ ಸರ್ಜಾ ಕುಟುಂಬದಿಂದ ಪರಿಚಯವಾಗುತ್ತಿರುವ ಮತ್ತೊರ್ವ ನಾಯಕನ ಸಿನಿಮಾ. ಅರ್ಜುನ್ ಸರ್ಜಾ ಅವರ ಸಹೋದರಿ ಮಗ ಪವನ್ ತೇಜ್ ಅಭಿನಯದ 'ಅಥರ್ವ' ಚಿತ್ರದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆ ಆಗಿದ್ದು ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

  ಆಕ್ಷನ್, ಎಂಟರ್ಟೈನ್ ಮೆಂಟ್, ಲವ್, ಸೆಂಟಿಮೆಂಟ್ ಎಲ್ಲವೂ ಇರೋ ಸಿನಿಮಾ ಅಥರ್ವ. ಈಗಿನ ಟ್ರೆಂಡ್ ಗೆ ತಕ್ಕಂತ ಸಂಭಾಷಣೆ ಹಾಗೂ ಸಂಗೀತ ಕೂಡ ಸಿನಿಮಾದಲ್ಲಿದೆ ಎನ್ನುವ ಸೂಚನೆ ಟ್ರೇಲರ್ ನಲ್ಲಿ ಸಿಕ್ಕಿದೆ.

  ಅರ್ಥ ವರ್ಷ ಕಳೆದರು ಬರಲೇ ಇಲ್ಲ ಈ ಸ್ಟಾರ್ ಗಳ ಸಿನಿಮಾಗಳುಅರ್ಥ ವರ್ಷ ಕಳೆದರು ಬರಲೇ ಇಲ್ಲ ಈ ಸ್ಟಾರ್ ಗಳ ಸಿನಿಮಾಗಳು

  ಚಿತ್ರರಂಗಕ್ಕೆ ಎಂಟ್ರಿ ಕೊಡುವ ಉದ್ದೇಶದಿಂದಲೇ ಪವನ್ ತೇಜ್ ಸಾಕಷ್ಟು ತಯಾರಿ ಮಾಡಿಕೊಂಡಿರುವುದು ತೆರೆ ಮೇಲೆ ಕಾಣುತ್ತಿದೆ. ಈಗಾಗಲೇ ಅರ್ಜುನ್ ಸರ್ಜಾ, ದ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಅವರಂತೆ ಪವನ್ ತೇಜ್ ಕೂಡ ಸ್ಯಾಂಡಲ್ ವುಡ್ ನಲ್ಲಿ ಪ್ರಖ್ಯಾತಿ ಗಳಿಸುವ ಕನಸು ಕಂಡಿದ್ದಾರೆ.

  ಪವನ್ ತೇಜ್ ಜೊತೆಯಲ್ಲಿ ಸನಂ ಶೆಟ್ಟಿ ಹಾಗೂ ಯಶವಂತ್ ಶೆಟ್ಟಿ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 'ಅಥರ್ವ' ಚಿತ್ರವನ್ನು ಅರುಣ್ ನಿರ್ದೇಶನ ಮಾಡಿದ್ದು ವಿನಯ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ರಾಘವೇಂದ್ರ ವಿ ಸಂಗೀತ ನೀಡಿದ್ದಾರೆ. ಸದ್ಯ ಟ್ರೇಲರ್ ಬಿಡುಗಡೆ ಮಾಡಿರುವ ಸಿನಿಮಾತಂಡ ಜುಲೈ ನಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ದತೆ ಮಾಡಿಕೊಂಡಿದ್ದಾರೆ.

  English summary
  Kannada actor Pawan Tej starring Atharva movie Trailer has been released. Arun is directing the Atharva film and the film is being released in July.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X