»   » 'ಒಡೆಯರ್'ಗಾಗಿ ದರ್ಶನ್ ಎದುರಿಸಬೇಕಾಗಿದೆ ಬಹುದೊಡ್ಡ 'ಚಾಲೆಂಜ್'

'ಒಡೆಯರ್'ಗಾಗಿ ದರ್ಶನ್ ಎದುರಿಸಬೇಕಾಗಿದೆ ಬಹುದೊಡ್ಡ 'ಚಾಲೆಂಜ್'

Posted By:
Subscribe to Filmibeat Kannada

ಸದ್ಯ 'ಕುರುಕ್ಷೇತ್ರ' ಚಿತ್ರದಲ್ಲಿ ತೊಡಗಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇರೆ ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ. 50ನೇ ಚಿತ್ರ 'ಕುರುಕ್ಷೇತ್ರ' ಮುಗಿಸಿದ ನಂತರ ತಮ್ಮ 51ನೇ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ.

ಈ ಚಿತ್ರವನ್ನ ಕನ್ನಡದ ಯುವ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು, ಚಿತ್ರದ ಸ್ಕ್ರಿಪ್ಟ್ ವರ್ಕ್ ಮುಗಿಸಿದ್ದಾರೆ. 'ಒಡೆಯರ್' ಚಿತ್ರದ ಇನ್ನು ಸ್ಕ್ರಿಪ್ಟ್ ಹಂತದಲ್ಲಿರುವಾಗಲೇ ದರ್ಶನ್ ಗೆ ಬಹುದೊಡ್ಡ ಸವಾಲು ಎದುರಾಗಿದೆ.

ಹೌದು, ದರ್ಶನ್ ಅವರನ್ನ ತುಂಬ ಸ್ಟೈಲಿಶ್ ಆಗಿ ತೋರಿಸುವ ಪ್ರಯತ್ನ ಮಾಡುತ್ತಿರುವ ಪವನ್ ಒಡೆಯರ್ ಈ ಚಿತ್ರದಲ್ಲಿ ದರ್ಶನ್ ಅವರಿಗೆ ಚಾಲೆಂಜಿಂಗ್ ಟಾಸ್ಕ್ ಕೊಟ್ಟಿದ್ದಾರೆ. ಏನದು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ದರ್ಶನ್ ಲವರ್ ಬಾಯ್

ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿರುವ 51ನೇ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ದರ್ಶನ್ 51ನೇ ಚಿತ್ರಕ್ಕೂ ಭರ್ಜರಿ ತಯಾರಿ, ಡೈರೆಕ್ಟರ್ ಫಿಕ್ಸ್

ತೂಕ ಇಳಿಸಬೇಕಾಗಿದೆ

'ಕುರಕ್ಷೇತ್ರ' ಚಿತ್ರಕ್ಕಾಗಿ ಸುಮಾರು 90 ಕೆಜಿ ತೂಕ ಹೆಚ್ಚಿಸಿಕೊಂಡಿರುವ ದರ್ಶನ್, ಪವನ್ ಒಡೆಯರ್ ಚಿತ್ರಕ್ಕೆ ತೂಕ ಇಳಿಸಬೇಕಾಗಿದೆ. ಲವರ್ ಬಾಯ್ ಇಮೇಜ್ ಗೆ ತಕ್ಕಂತೆ ಸ್ಲಿಮ್ ಆಗಬೇಕಿದೆ.

ಎಕ್ಸ್ ಕ್ಲೂಸಿವ್: ದರ್ಶನ್ 51ನೇ ಸಿನಿಮಾದ ಬಗ್ಗೆ ಇದ್ದ ಡೌಟ್ ಕ್ಲಿಯರ್.!

ಸಿಕ್ಸ್ ಪ್ಯಾಕ್ ಮಾಡಿದ್ದ ದರ್ಶನ್

ಎ.ಪಿ ಅರ್ಜುನ್ ನಿರ್ದೇಶನ ಮಾಡಿದ್ದ 'ಐರಾವತ' ಚಿತ್ರಕ್ಕಾಗಿ ದರ್ಶನ್ ಸಿಕ್ಸ್ ಪ್ಯಾಕ್ ಮಾಡಿದ್ದರು. 'ತಾರಕ್' ಚಿತ್ರಕ್ಕಾಗಿ ತಮ್ಮ ಹೇರ್ ಸ್ಟೈಲ್ ಸಂಪೂರ್ಣವಾಗಿ ಬದಲಿಸಿದ್ದರು. ಹೀಗಾಗಿ, ಪಾತ್ರಗಳಿಗಾಗಿ ಹೊಂದಿಕೊಳ್ಳುವ ದರ್ಶನ್ ಈಗ 'ಒಡೆಯರ್' ಚಿತ್ರಕ್ಕಾಗಿ ಸ್ಲಿಮ್ ಆಗಲಿದ್ದಾರೆ.

Darshan Special Wish | Srujan Lokesh @38

ಚಿತ್ರದ ಟೈಟಲ್ 'ಒಡೆಯರ್'

ಅಂದ್ಹಾಗೆ, ಪವನ್ ಒಡೆಯರ್ ಹಾಗೂ ದರ್ಶನ್ ಕಾಂಬಿನೇಷನ್ ಚಿತ್ರಕ್ಕೆ ಒಡೆಯರ್ ಎಂದು ಟೈಟಲ್ ಇರಿಸಲಾಗಿದೆ. ಈ ಚಿತ್ರವನ್ನ ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರಲಿದೆ.

English summary
Director Pawan Wadeyar is almost ready with the script of Wodeyar he is writing for Darshan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada