For Quick Alerts
  ALLOW NOTIFICATIONS  
  For Daily Alerts

  ನೀ ಆಗಮಿಸು ಕಾಯುತ್ತಿದೆ ನನ್ನ ತೋಳು; ಮುದ್ದು ಮಗುಗೆ ಪವನ್ ಒಡೆಯರ್ ಸಾಂಗ್

  |

  'ಆ ಮುಗುಳು ನಗೆ ನನ್ನೊಳಗೆ ಮೂಡುತ್ತಿದೆ...' ಎಂದು ನಿರ್ದೇಶಕ ಪವನ್ ಒಡೆಯರ್ ಪ್ರೀತಿಯ ಪತ್ನಿ ಮತ್ತು ಹುಟ್ಟಲಿರುವ ಮಗುಗಾಗಿ ಬರೆದು ಹಾಡಿರುವ ಹಾಡಿದು. ಪವನ್ ಒಡೆಯರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತೋಷದ ಸುದ್ದಿಯನ್ನು ಪವನ್ ಒಡೆಯರ್ ಇತ್ತೀಚಿಗೆ ಹಂಚಿಕೊಂಡಿದ್ದರು.

  ಇತ್ತೀಚಿಗಷ್ಟೆ ಪತ್ನಿ ಅಪೇಕ್ಷಾ ಪುರೋಹಿತ್ ಅವರ ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ಮಾಡಿದ್ದರು. ಈ ಸುಂದರ ಕ್ಷಣಗಳ ಫೋಟೋವನ್ನು ನಿರ್ದೇಶಕ ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ಮಾಡಲಾಗಿದ್ದು, ಕುಟುಂಬದವರು ಮತ್ತು ಆಪ್ತರು ಮಾತ್ರ ಸೀಮಂತ ಸಂಭ್ರಮದಲ್ಲಿ ಭಾಗಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.

  ಸೀಮಂತ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ಸೀಮಂತ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್

  ಒಡೆಯರ್ ದಂಪತಿ ಮುದ್ದಾದ ಫೋಟೋಶೂಟ್ ಕೂಡ ಮಾಡಿದ್ದಾರೆ. ಇದೀಗ ಮೊದಲ ಮಗುವಿಗಾಗಿ ಬರೆದಿರುವ ಹಾಡನ್ನು ರಿಲೀಸ್ ಮಾಡಿದ್ದಾರೆ. ಪವನ್ ಒಡೆಯರ್ ತಾವೆ ಬರೆದು, ಹಾಡಿ ಮತ್ತು ಕೋರಿಯೋಗ್ರಾಫಿ ಮಾಡಿರುವ ವಿಡಿಯೋ ಹಾಡನ್ನು ರಿಲೀಸ್ ಮಾಡಿದ್ದಾರೆ.

  DIRECTOR'S DIARY : ಬೆಳೆಯೋ ಟೈಮ್ ನಲ್ಲಿ ನನ್ನ ವಿರುದ್ಧ ರವಿ ಬೆಳಗೆರೆ ಪತ್ರಿಕೆಯಲ್ಲಿ ಆರ್ಟಿಕಲ್ ಬಂದಿತ್ತು| Part 1

  ಈ ಮೊದಲೇ ಹಾಡಿನ ಬಗ್ಗೆ ಪವನ್ ಒಡೆಯರ್ ಬಹಿರಂಗ ಪಡಿಸಿದ್ದರು. ಹಾಗಾಗಿ ಪವನ್ ಒಡೆಯರ್ ಆಗಮಿಸಲಿರುವ ಮುದ್ದು ಮಗುವಿಗೆ ಬರೆದು ಹಾಡಿರುವ ಹಾಡು ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದೀಗ ಹಾಡು ರಿಲೀಸ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  English summary
  Pawan Wadeyar release a special song as he and his wife Apeksha expect their first child.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X