»   » ಪವನ್ ಒಡೆಯರ್-ಕಿಚ್ಚ ಸುದೀಪ್ ನಡುವೆ ಹೊಸ ಒಪ್ಪಂದ.!

ಪವನ್ ಒಡೆಯರ್-ಕಿಚ್ಚ ಸುದೀಪ್ ನಡುವೆ ಹೊಸ ಒಪ್ಪಂದ.!

Posted By:
Subscribe to Filmibeat Kannada

ಸಿನಿಮಾ ಪ್ರದರ್ಶನ ಆಗುವ ಆರಂಭದಲ್ಲಿ ಅಥವಾ ಮಧ್ಯಂತರದಲ್ಲಿ ಬೇರೆ ಸಿನಿಮಾಗಳ ಟ್ರೈಲರ್ ಅಥವಾ ಟೀಸರ್ ಪ್ರದರ್ಶನ ಆಗೋದು ಇತ್ತೀಚಿನ ಹೊಸ ಟ್ರೆಂಡ್. ಪುನೀತ್ ರಾಜ್ ಕುಮಾರ್ ಅವರ 'ಚಕ್ರವ್ಯೂಹ' ಚಿತ್ರದ ಪ್ರದರ್ಶನದ ವೇಳೆ 'ರನ್ ಆಂಟನಿ' ಫಸ್ಟ್ ಲುಕ್ ಟೀಸರ್ ಲಾಂಚ್ ಮಾಡಲಾಗಿತ್ತು.

ಅದೇ ರೀತಿ ಇದೀಗ ನಿರ್ದೇಶಕ ಪವನ್ ಒಡೆಯರ್ ಅವರು ಕೂಡ ಪ್ಲ್ಯಾನ್ ಮಾಡಿದ್ದಾರೆ. ಅಂದಹಾಗೆ ಪವನ್ ಅವರು ದೊಡ್ಡ ತಿಮಿಂಗಿಲಕ್ಕೆ ಗಾಳ ಹಾಕಿದ್ದಾರೆ ಅಂದ್ರೆ ತಪ್ಪಾಗಲ್ಲ ಅನ್ಸುತ್ತೆ.[ನಾಳೆ 'ಚಕ್ರವ್ಯೂಹ' ಸಿನಿಮಾ ನೋಡ್ತೀರಾ? ಒಂದು ಸರ್ ಪ್ರೈಸ್ ಕಾದಿದೆ.!]


Pawan Wadeyar's 'Nataraja Service' trailer with 'Kotigobba 2'

ಯಾಕೆಂದರೆ ಪವನ್ ಒಡೆಯರ್ ತಮ್ಮ ನಿರ್ದೇಶನದ 'ನಟರಾಜ ಸರ್ವಿಸ್' ಚಿತ್ರದ ಟ್ರೈಲರ್ ಪ್ರದರ್ಶನ ಮಾಡಲು ಪ್ಲ್ಯಾನ್ ಮಾಡಿದ್ದು ಸುದೀಪ್ ಅವರ 'ಕೋಟಿಗೊಬ್ಬ 2' ಚಿತ್ರದ ಮಧ್ಯಂತರದಲ್ಲಿ. 'ಕೋಟಿಗೊಬ್ಬ 2' ಚಿತ್ರದ ಮೇಲೆ ಈ ಬಾರಿ ಕೊಂಚ ನಿರೀಕ್ಷೆ ಜಾಸ್ತಿನೇ ಇದೆ. ಆ ದಿನ ಎಲ್ಲಾ ಥಿಯೇಟರ್ ಗಳು ತುಂಬಿ ತುಳುಕೋದು ಗ್ಯಾರೆಂಟಿ.


'ಜೆಸ್ಸಿ' ಯಶಸ್ವಿಯಾದ ನಂತರ ಶರಣ್ ಹಾಗು ಮಯೂರಿ ಅವರ ಜೊತೆ 'ನಟರಾಜ ಸರ್ವಿಸ್'ಗೆ ಕೈ ಹಾಕಿದ ಪವನ್ ಒಡೆಯರ್, ಇದೀಗ ಶೂಟಿಂಗ್ ಮುಗಿಸಿ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ.[ಶರಣ್ ಗೆ ಸರ್ವಿಸ್ ಮಾಡಿದ ಪವರ್ ಸ್ಟಾರ್ ಪುನೀತ್]


Pawan Wadeyar's 'Nataraja Service' trailer with 'Kotigobba 2'

ಅದಕ್ಕಿಂತ ಮುನ್ನ 'ಹೂವಿನ ಜೊತೆಗೆ ನಾರು ದೇವರ ಪಾದ ಸೇರುತ್ತದೆ ಎನ್ನುವ ಹಾಗೆ 'ಕೋಟಿಗೊಬ್ಬ 2' ಚಿತ್ರದ ಮಧ್ಯಂತರದ ವೇಳೆ ಎಲ್ಲಾ ಚಿತ್ರಮಂದಿರಗಳಲ್ಲಿ 'ನಟರಾಜ ಸರ್ವಿಸ್' ಚಿತ್ರದ ಟ್ರೈಲರ್ ಪ್ರದರ್ಶನ ಆಗಲಿದೆ. ಈ ವಿಚಾರವನ್ನು ಖುದ್ದು ಪವನ್ ಅವರೇ ಬಹಿರಂಗಪಡಿಸಿದ್ದಾರೆ.
ಆಗಸ್ಟ್ 12 ರಂದು ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್ ಅಭಿನಯದ 'ಕೋಟಿಗೊಬ್ಬ 2' ತೆರೆಗೆ ಬರಲಿದ್ದು, ಅಂದು 'ನಟರಾಜ ಸರ್ವಿಸ್' ಚಿತ್ರದ ಟ್ರೈಲರ್ ರಿಲೀಸ್ ಆಗಿ ಪ್ರದರ್ಶನಗೊಳ್ಳಲಿದೆ. ಒಟ್ನಲ್ಲಿ ಸುದೀಪ್ ಮತ್ತು ಪವನ್ ಅವರು ಹೊಸ ರೀತಿಯ ಒಪ್ಪಂದ ಮಾಡಿಕೊಂಡ ಹಾಗಿದೆ.[ಟ್ರೈಲರ್: ಅಭಿಮಾನಿಗಳ ಕುತೂಹಲಕ್ಕೆ ಕಿಚ್ಚು ಹಚ್ಚಿದ ಕಿಚ್ಚ]

English summary
Kannada Actor Sharan and Kannada Actress Mayuri starrer 'Nataraja Service' trailer will be screened for the first time during the release of Sudeep's 'Kotigobba 2' on August 12th. 'Nataraja Service' directed by Pawan Wadeyar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada