»   » ಈಕೆಯನ್ನ ನೋಡಿ ಕನ್ ಫ್ಯೂಸ್ ಆದವರೇ ಹೆಚ್ಚು.! ಇವ್ರು ಶಿಲ್ಪಾ ಗಣೇಶ್ ಅಲ್ಲ.!

ಈಕೆಯನ್ನ ನೋಡಿ ಕನ್ ಫ್ಯೂಸ್ ಆದವರೇ ಹೆಚ್ಚು.! ಇವ್ರು ಶಿಲ್ಪಾ ಗಣೇಶ್ ಅಲ್ಲ.!

Posted By:
Subscribe to Filmibeat Kannada

ಇವ್ರನ್ನ ನೋಡಿ ನೀವೂ ಕೂಡ ಒಂದು ಕ್ಷಣ ಕನ್ ಫ್ಯೂಸ್ ಆಗಬಹುದು. ಯಾರೇ ಈ ಫೋಟೋವನ್ನ ನೋಡಿದ್ರೂ, 'ಇವರು ಶಿಲ್ಪಾ ಗಣೇಶ್ ಅಲ್ವಾ' ಎಂದು ಒಂದು ಕ್ಷಣ ಕಣ್ಣರಳಿಸುವುದು ಖಚಿತ. ಆದರೆ ಇವ್ರು ಖಂಡಿತ ಅವರಲ್ಲ. ಅವರಿಗೂ ಇವರಿಗೂ ಯಾವುದೇ ಸಂಬಂಧ ಇಲ್ಲ.

ಹೌದು, ಈಕೆಯನ್ನ ನೋಡಿ ಪ್ರತಿಯೊಬ್ಬರು ಕೇಳೋದು ಒಂದೇ ಪ್ರಶ್ನೆ... ''ನೀವು ಶಿಲ್ಪ ಗಣೇಶ್ ಅಲ್ವಾ, ಮೇಡಂ ಗಣೇಶ್ ಸರ್ ಹೇಗಿದ್ದಾರೆ.?'' ಅಂತ.

people are confused with Shilpa Ganesh and Actress Anusha Rai

ನೋಡಲು ಥೇಟ್ ಶಿಲ್ಪಾ ಗಣೇಶ್ ರಂತೆ ಇರುವ ಈಕೆಯ ಹೆಸರು ಅನುಷಾ ರೈ. ಇತ್ತೀಚಿಗಷ್ಟೆ ರಿಲೀಸ್ ಆದ 'ಮಹಾನುಭಾವರು' ಸಿನಿಮಾದ ನಾಯಕಿ. ಆಕಸ್ಮಿಕವಾಗಿ ಚಿತ್ರದಲ್ಲಿ ಅಭಿನಯಿಸೋದಕ್ಕೆ ಅವಕಾಶ ಸಿಕ್ಕಾಗ ಸರಿಯಾಗಿ ಉಪಯೋಗಿಸಿಕೊಂಡ ಅನುಷಾ ರೈ ಕನ್ನಡ ಮಾತ್ರವಲ್ಲದೆ ಟಾಲಿವುಡ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. 'ಬಿಎಂಡ್ಲ್ಯೂ' ಚಿತ್ರದಲ್ಲೂ ಅನುಷಾ ಹೀರೋಯಿನ್.

ಹಂಸಲೇಖ ಮ್ಯೂಸಿಕ್‌ ಸ್ಕೂಲ್ ನಲ್ಲಿ ಸಂಗೀತ ಕಲಿಯುತ್ತಿರುವ ಅನುಷಾ ಸಿನಿಮಾದ ಜೊತೆಯಲ್ಲಿ ರಾಧರಮಣ, ಸರಾಯೂ, ವಾಣಿರಾಣಿ, ಪ್ರಾರ್ಥನಾ ಹೀಗೆ ಇನ್ನೂ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ರಿಲೀಸ್ ಆಗಿರೋದು ಒಂದೇ ಚಿತ್ರವಾದರೂ ಅವಕಾಶಗಳು ಮಾತ್ರ ಅನುಷಾರನ್ನ ಹುಡುಕಿಕೊಂಡು ಬರುತ್ತಿವೆ.

ಒಂದು ಕಡೆ ತನ್ನ ಅಭಿನಯದಿಂದ ಗುರುತಿಸಿಕೊಳ್ತಿದ್ರೆ ಮತ್ತೊಂದು ಕಡೆ ನೋಡಿದ ಜನರು ಶಿಲ್ಪಾ ಗಣೇಶ್ ಅಂತ ಇವ್ರನ್ನ ನೋಡಿ ಕನ್ ಫ್ಯೂಸ್ ಆಗಿದ್ದಾರೆ.

English summary
People are confused with Shilpa Ganesh and Kannada Film 'Mahanubhavaru' Actress Anusha Rai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada