For Quick Alerts
  ALLOW NOTIFICATIONS  
  For Daily Alerts

  ಬ್ರಿಟಿಷ್ ಬೆಡಗಿ ಜಾಕ್ಸನ್ ಬಿಕಿನಿ ಚಿತ್ರಗಳು

  By ಜೇಮ್ಸ್ ಮಾರ್ಟಿನ್
  |

  ಲಗಾನ್ ಚಿತ್ರದಲ್ಲಿ ಭುವನ್ ಅಮೀರ್ ಖಾನ್ ಜತೆ ವಿದೇಶಿ ಯುವತಿ ರಾಷೆಲ್ ಶೆಲ್ಲಿ ಹಾಡಿ ನಲಿದ ದೃಶ್ಯ ನೆನಪಿಸಿಕೊಳ್ಳಿ ಅದೇ ಮಾದರಿಯಲ್ಲಿ ಆದರೆ ಭಿನ್ನ ಕಥೆಯುಳ್ಳ ತಮಿಳು ಚಿತ್ರಕ್ಕೆ ಇದೇ ರೀತಿ ವಿದೇಶಿ ಹುಡುಗಿಯೊಬ್ಬಳು ಬಂದಳು. ಕಾಲಿವುಡ್ ಚಿತ್ರರಂಗಕ್ಕೆ ಈ ರೀತಿ ಆಮದಾದ ಬ್ರಿಟಿಷ್ ಬೆಡಗಿ ಅಮಿ ಜಾಕ್ಸನ್ ಮದ್ರಾಸಿಪಟ್ಟನಮ್ ಚಿತ್ರದಲ್ಲಿ ಆರ್ಯ ಜತೆ ಕಾಣಿಸಿಕೊಂಡಿದ್ದಳು.

  ಮಾಜಿ ಮಿಸ್ ಲಿವರ್ ಪೂಲ್ ಚೆಲುವೆ ಅಮಿ ಜಾಕ್ಸನ್ ಮದ್ರಾಸಿಪಟ್ಟನಂನಲ್ಲಿ ತೊಟ್ಟಿದ್ದ ಗೌನ್ ಕಳಚಿ ಎಷ್ಟೋ ದಿನಗಳಾಗಿದೆ. ಹಾಲಿವುಡ್ ನಲ್ಲಿ ಅವಕಾಶಗಳಿದ್ದರೂ ಭಾರತೀಯ ಚಿತ್ರರಂಗಕ್ಕೆ ಬಂದಿರುವ ಪ್ರತಿಭೆ ಬಾಲಿವುಡ್ ಗೂ ಕಾಲಿಟ್ಟಿತ್ತು. ಸದ್ಯಕ್ಕೆ ಶಂಕರ್ ಸಿನಿಮಾ Aiನಲ್ಲೂ ನಟಿಸುವ ಅವಕಾಶ ಗಿಟ್ಟಿಸಿಕೊಂಡಿರುವ ಅಮಿ ಇತ್ತೀಚೆಗೆ ಬಿಕಿನಿ ಫೋಟೋ ಶೂಟ್ ನಲ್ಲಿ ಬ್ಯುಸಿಯಾಗಿದ್ದಳು.

  ಸ್ವಿಮ್ ಸೂಟ್ ಧರಿಸಿ ಫೋಟೋ ಶೂಟ್ ಮುಗಿಸಿದ ಮೇಲೆ ಥ್ರಿಲ್ ಆಗಿ ಟ್ವೀಟ್ ಮಾಡಿದ್ದಳು. ಕಡಲ ಕಿನಾರೆಯಲ್ಲಿ ತುಂಡುಡುಗೆಯಲ್ಲಿ ಅಮಿ ತನ್ನ ಮೈಮಾಟವನ್ನು ಪ್ರದರ್ಶಿಸಿದ್ದಾಳೆ. ಅಮಿಗೆ ಇನ್ನೂ 22ರ ಪ್ರಾಯ ಈಗಲೇ ಕಾಲಿವುಡ್, ಬಾಲಿವುಡ್ ಕಂಡಿದ್ದಾಳೆ. ಅಮಿಗೂ ಅಭಿಮಾನಿಗಳ ದಂಡು ಸೃಷ್ಟಿಯಾಗುತ್ತಿದ್ದು ಸೌಂದರ್ಯ ಹಾಗೂ ನಟನಾ ಪ್ರತಿಭೆ ಮೂಲಕ ಭಾರತೀಯ ಚಿತ್ರರಂಗದಲ್ಲೇ ಉಳಿಯುವ ಮಾತನ್ನಾಡಿದ್ದಾಳೆ.

  ಯುಕೆ ಮೂಲದ ಫೊಟೋಗ್ರಾಫರ್ ಜೇಮ್ಸ್ ರುಡ್ಲ್ಯಾಂಡ್ ಅವರ ಕೆಮೆರಾ ಕಣ್ಣಿಗೆ ಬಿದ್ದ ಅಮಿ ಸ್ವಿಮ್ ಸೂಟ್ ಚಿತ್ರಗಳು ಇಲ್ಲಿವೆ ತಪ್ಪದೆ ನೋಡಿ

  ಬಾಲಿವುಡ್ ಎಂಟ್ರಿ

  ಬಾಲಿವುಡ್ ಎಂಟ್ರಿ

  ಗೌತಮ್ ಮೆನನ್ ಅವರ ವಿನ್ನೈತಾಂಡಿ ವೆರುವಾಯಾ ತಮಿಳು ಚಿತ್ರದ ಹಿಂದಿ ಅವತರಣಿಕೆ ಏಕ್ ದೀವಾನಾ ಥಾ ಚಿತ್ರದಲ್ಲಿ ಪ್ರತೀಕ್ ಬಬ್ಬರ್ ಜತೆ ಅಮಿ ನಟಿಸಿದ್ದಳು. ಚಿತ್ರ ಅಷ್ಟಾಗಿ ಕ್ಲಿಕ್ ಆಗಲಿಲ್ಲ. ಆದರೆ, ಅಮಿ ನಟನೆಗೆ ಉತ್ತಮ ಪ್ರಶಂಸೆ ಸಿಕ್ಕಿತ್ತು.

  ಸಪೂರ ಸುಂದರಿ

  ಸಪೂರ ಸುಂದರಿ

  ನೀಲಕಾಯ ಹೊಂದಿರುವ ಚೆಲುವೆ ಅಮಿ ಜಾಕ್ಸನ್ ಅವರು ತನ್ನ ಅಂಗಾಂಗಗಳನ್ನು ಮಾದಕವಾಗಿ ಪ್ರಥಮ ಬಾರಿಗೆ ಪ್ರದರ್ಶಿಸಿದ್ದಾಳೆ

  ವೃತ್ತಿಪರ ನಟಿ

  ವೃತ್ತಿಪರ ನಟಿ

  ಸಾಮಾನ್ಯವಾಗಿ ಆಮದು ಬೆಡಗಿಯರು ಕಿರಿಕ್ ಮಾಡುವುದು ಜಾಸ್ತಿ ಎಂಬ ಮಾತಿದೆ. ಆದರೆ, ಐತಿಹಾಸಿಕ ಚಿತ್ರ ಮದರಾಸಿಪಟ್ಟನಮ್ ನಲ್ಲಿ ಎಲ್ಲರ ಜತೆ ಕೂಡಿ ನಟನೆಯ ಪಾಠ ಕಲಿತ ಅಮಿ ಈಗ ಶಂಕರ್ ಅವರ ಚಿತ್ರಕ್ಕೂ ಎಂಟ್ರಿ ಕೊಟ್ಟಿದ್ದಾಳೆ

  ರೂಪದರ್ಶಿ

  ರೂಪದರ್ಶಿ

  2009ರಲ್ಲಿ ಮಿಸ್ ಟೀನ್ ವಿಶ್ವ ಸ್ಪರ್ಧೆ ಗೆದ್ದ ಅಮಿ ಜಾಕ್ಸನ್ ನಂತರ ಮಿಸ್ ಲಿವರ್ ಪೂಲ್ ಆಗಿ 2010ರಲ್ಲಿ ಕಿರೀಟ ಧರಿಸಿದಳು.

  ಅಲಾನ್ ಜಾಕ್ಸನ್ ಹಾಗೂ ಮರ್ಗೆರಿಟಾ ಜಾಕ್ಸನ್ ದಂಪತಿ ಪುತ್ರಿ ಅಮಿಗೆ ಅಲಿಸಿಯಾ ಎಂಬ ಅಕ್ಕ ಇದ್ದಾಳೆ.

  ಇಂಗ್ಲೀಷ್ ಸಾಹಿತ್ಯ, ತತ್ತ್ವಶಾಸ್ತ್ರ ಓದಿರುವ ಅಮಿಗೆ ಈಗ ಭಾರತೀಯ ಸಿನಿಮಾ ರಂಗದ ವಾತಾವರಣದ ಬಗ್ಗೆ ಕಲಿಯುವ ಆಸಕ್ತಿ ಉಂಟಾಗಿದೆ.

  ಮುಂದಿನ ಚಿತ್ರಗಳು

  ಮುಂದಿನ ಚಿತ್ರಗಳು

  ಅಮಿ ಜಾಕ್ಸನ್ ವಿಕ್ರಮ್ ಹಾಗು ಅನುಷ್ಕಾ ಶೆಟ್ಟಿ ಅಭಿನಯದ ತಾಂಡವಂ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಹಾಗೂ ಶ್ರುತಿ ಹಾಸನ್ ಜತೆ ಯೆವಡು ಎಂಬ ತೆಲುಗು ಚಿತ್ರದಲ್ಲಿ ಅಮಿಗೆ ಅವಕಾಶ ಸಿಕ್ಕಿದೆ. ಏಪ್ರಿಲ್ 2014ರಲ್ಲಿ ಶಂಕರ್ ನಿರ್ದೇಶನದ Ai ಚಿತ್ರದ ನಾಯಕಿಯಾಗಿ ವಿಕ್ರಮ್ ಜತೆ ಕಾಣಿಸಿಕೊಳ್ಳಲಿದ್ದಾಳೆ

  ವೈಯಕ್ತಿಕ ಬದುಕು

  ವೈಯಕ್ತಿಕ ಬದುಕು

  ಡೈಲಿ ಮೇಲ್ ಪ್ರಕಾರ ಅಮಿ ಜಾಕ್ಸನ್ ಗೆ ಬಾಲಿವುಡ್ ಚಿತ್ರಗಳ ಬಗ್ಗೆ ತಿಳಿದಿದ್ದು ಶಿಲ್ಪಾ ಶೆಟ್ಟಿಯನ್ನು ನೋಡಿದ ಮೇಲೆ ಅಂತೆ. ಬಿಗ್ ಬ್ರದರ್ ರಿಯಾಲಿಟಿ ಶೋ ನಲ್ಲಿ ಶಿಲ್ಪಾ ನೋಡಿದ ಮೇಲೆ ಅಮಿಗೆ ಚಿತ್ರರಂಗದ ಪರಿಚಯ ಆಯಿತಂತೆ.

  ಡೇಟಿಂಗ್

  ಡೇಟಿಂಗ್

  ಏಕ್ ದಿವಾನಾ ತಾ ಚಿತ್ರದ ನಂತರ ನಾಯಕ ನಟ ರಾಜ್ ಬಬ್ಬರ್ ಮಗ ಪ್ರತೀಕ್ ಬಬ್ಬರ್ ಜತೆ ಅಮಿ ಕೆಲಕಾಲ ಡೇಟಿಂಗ್ ನಡೆಸಿದ್ದಳು. ನಂತರ ಪ್ರತೀಕ್ ಬಿಟ್ಟು ಮತ್ತೆ ತಮಿಳು ಚಿತ್ರರಂಗಕ್ಕೆ ಮರಳಿದ್ದಾಳೆ. ಆದರೆ, ಮುಂಬೈನಲ್ಲೇ ಮನೆ ಮಾಡಿದ್ದಾಳೆ.

  ಪ್ರಶಸ್ತಿ, ಪುರಸ್ಕಾರ

  ಪ್ರಶಸ್ತಿ, ಪುರಸ್ಕಾರ

  ಟೈಮ್ಸ್ ಭಾರತದ ಮೋಸ್ಟ್ ಡಿಸೈರಬಲ್ ಮಹಿಳೆ 2012 ಪಟ್ಟಿಯಲ್ಲಿ 22ನೇ ಸ್ಥಾನ

  FHM ಮ್ಯಾಗಜೀನ್ 100 ಸೆಕ್ಸಿ ಮಹಿಳೆಯರ ಪೈಕಿ 56ನೇ ಸ್ಥಾನ

  ಟೈಮ್ಸ್ ಉದಯೋನ್ಮುಖ ತಾರೆಯರ ಪಟ್ಟಿಯಲ್ಲಿ 7ನೇ ಸ್ಥಾನ

  ಚಿತ್ರದಲ್ಲೂ ಬಿಕಿನಿ

  ಚಿತ್ರದಲ್ಲೂ ಬಿಕಿನಿ

  ಇದೊಂದು ಖಾಸಗಿ ಫೋಟೋ ಶೂಟ್ ಆಗಿದ್ದು, ಚಿತ್ರಗಳಲ್ಲಿ ಅಗತ್ಯ ಬಿದ್ದರೆ ಮಾತ್ರ ಬಿಕಿನಿ ತೊಡುತ್ತೇನೆ ಎಂದು ಅಮಿ ಹೇಳಿದ್ದಾಳೆ

  English summary
  Amy Jackson , who is returning to Tamil movies with Shankar's prestigious movie Ai, doesn't like to waste her time. After completing a schedule of her forthcoming movie, she has left the country to keep herself busy with photoshoots. Well, she is currently busy with a photoshoot and the British born actress has sported bikini for the same.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X