»   » ತಮಿಳು ನಟನ ಜೊತೆ ನಟಿ ಹಂಸಿಕಾ ಚಮ್ಮಕ್ಕ್ ಚಲ್ಲೋ

ತಮಿಳು ನಟನ ಜೊತೆ ನಟಿ ಹಂಸಿಕಾ ಚಮ್ಮಕ್ಕ್ ಚಲ್ಲೋ

Posted By:
Subscribe to Filmibeat Kannada

ಹಂಸಿಕಾ ಮೋತ್ವಾನಿ ಗೊತ್ತಲ್ವಾ.. ಅದೇ ಪುನೀತ್ ಜೊತೆ ಬಿಂದಾಸ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಬೆಡಗಿ. ಹಂಸಿಕಾ ಮತ್ತು ತಮಿಳು ನಟ ಸಿಂಬು ಆಲಿಯಾಸ್ ಸಿಂಬರಸನ್ ನಡುವೆ ಮಾಧ್ಯಮಗಳು ಸಾಕಷ್ಟು ಗಾಸಿಪ್ ಸುದ್ದಿಗಳನ್ನು ಬರೆದಿದ್ದವು.

ಕೊನೆಗೆ ಹಂಸಿಕಾ ಮತ್ತು ಸಿಂಬು ಇಬ್ಬರೂ ತಮ್ಮ ಮದುವೆ ಬಗ್ಗೆ ಟ್ವೀಟಿಸಿ, ತಮ್ಮ ಮದುವೆಗೆ ಇಬ್ಬರ ಮನೆಯವರೂ ಒಪ್ಪಿರುವುದಾಗಿ ತಿಳಿಸಿದ್ದರು. ಮೊನ್ನೆ ರಂಜಾನ್ ಹಬ್ಬದ ದಿನ ಅಂದರೆ ಆಗಸ್ಟ್ 9ರಂದು ಹಂಸಿಕಾ ತನ್ನ 22ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.

ತನ್ನ ಭಾವೀ ಪತಿ ಸಿಂಬು ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಹಂಸಿಕಾ, ಪಾರ್ಟಿಗೆ ಹೋಗುವ ಮುನ್ನ ಮಕ್ಕಳ ಜೊತೆ ಸ್ವಲ್ಪ ಹೊತ್ತು ಸಮಯ ಕಳೆಯುವುದನ್ನು ಮರೆಯಲಿಲ್ಲ. ಮಕ್ಕಳ ಜೊತೆ ಕೇಕ್ ಕತ್ತರಿಸಿಕೊಂಡು ಮಕ್ಕಳಿಗೆ ಗಿಫ್ಟ್ ನೀಡಿದರು.

ಈ ಬಾರಿಯ ನನ್ನ ಹುಟ್ಟುಹಬ್ಬ ನನಗೆ ತುಂಬಾ ಸಂತೋಷ ತಂದಿದೆ. ಸಿಂಬು ಜೊತೆ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದೇನೆ ಎಂದು ಹಂಸಿಕಾ ಹೇಳಿದ್ದಾರೆ. ಸಿಂಬು ಈ ಸಂದರ್ಭದಲ್ಲಿ ಹಂಸಿಕಾಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

ಪಾರ್ಟಿಯ ಕೆಲವೊಂದು ಫೋಟೋಗಳು ಸ್ಲೈಡಿನಲ್ಲಿ..

ಹಂಸಿಕಾ ಟ್ವೀಟ್ ಸಂದೇಶ

ಹೋದ ತಿಂಗಳು ಹಂಸಿಕಾ ಮೋತ್ವಾನಿ ಟ್ವೀಟ್ ಸಂದೇಶ ಕಳುಹಿಸಿ ಗಾಸಿಪಿಗೆ ತೆರೆ ಎಳೆದಿದ್ದರು. "Been hearing to many rumours abt my life personal life, so jus wana clear. yes! I'm seeing Str :) hence I wouldn't like to talk about my personal life."

ಸಿಂಬು ಟ್ವೀಟ್ ಸಂದೇಶ

ತಮಿಳು ನಟ ಸಿಂಬು ತನ್ನ ಮತ್ತು ಹಂಸಿಕಾ ನಡುವೆ ಮದುವೆಯ ಬಗ್ಗೆ ಸಂದೇಶ ರವಾನಿಸಿದ್ದರು. "Yes, I'm with Hansika and right now she is doing really good and marriage will be decided by our family."

ಮಾಧ್ಯಮದ ಮೇಲೆ ಸಿಂಬು ಬೇಸರ

ಸಿಂಬು ಮತ್ತು ಹಂಸಿಕಾ ಮಾಧ್ಯಮಗಳ ಮೇಲೆ ಸಿಟ್ಟಾಗಿದ್ದರು. ನಮ್ಮಿಬ್ಬರ ಖಾಸಾಗಿ ಬದುಕಿನ ಬಗ್ಗೆ ಗೌರವ ತೋರಿ. ನಮ್ಮ ಖಾಸಾಗಿ ಜೀವನದ ಬಗ್ಗೆ ಸರಿಯಾದ ಮಾಹಿತಿ ಇದ್ದರೆ ಮಾತ್ರ ಬರಿಯಿರಿ, ಸುಮ್ಮನೆ ಗಾಸಿಪ್ ಸೃಷ್ಟಿಸ ಬೇಡಿ ಎಂದಿದ್ದರು.

ಇವರಿಬ್ಬರ ಮದುವೆ ಯಾವಾಗ?

ಮದುವೆಯ ದಿನಾಂಕ ಅಂತಿಮಗೊಳಿಸುವುದು ನಮ್ಮ ಮನೆಯವರ ಕೆಲಸ. ಸದ್ಯ ಇಬ್ಬರೂ ಒಪ್ಪಿಕೊಂಡಿರುವ ಪ್ರಾಜೆಕ್ಟಿನಲ್ಲಿ ಬ್ಯೂಸಿಯಾಗಿದ್ದೇವೆ ಎಂದಿದ್ದಾರೆ. 2014ರಲ್ಲಿ ಇಬ್ಬರಿಗೂ ಕಂಕಣಬಲ ಕೂಡಿಬರಲಿದೆ ಎನ್ನಲಾಗುತ್ತಿದೆ.

ಇವರಿಬ್ಬರ ಎರಡು ಚಿತ್ರಗಳು

ಸಿಂಬು ಮತ್ತು ಹಂಸಿಕಾ ನಟಿಸುತ್ತಿರುವ ಎರಡು ಚಿತ್ರಗಳು ಸೆಟ್ಟೇರಿದೆ. ವಾಲು ಮತ್ತು ವೆಟ್ಟೈ ಮನ್ನನ್ ಈ ಎರಡೂ ಚಿತ್ರಗಳ ಶೂಟಿಂಗ್ ನಲ್ಲಿ ಇಬ್ಬರೂ ಸದ್ಯ ಬ್ಯೂಸಿಯಾಗಿದ್ದಾರೆ.

English summary
Hansika Motwani's birthday was made special by Silambarasan aka Simbu this time. The actress, who celebrated her 22nd birthday on August 9, partied with her beau and they both together had a great time.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada