»   » ಗಿರಿಗಿಟ್ಲೆ ಆಡುತ್ತಿರುವ ಶ್ರೀಶಾಂತ್,ಲಕ್ಷ್ಮಿ ರೈ ಫೋಟೋ

ಗಿರಿಗಿಟ್ಲೆ ಆಡುತ್ತಿರುವ ಶ್ರೀಶಾಂತ್,ಲಕ್ಷ್ಮಿ ರೈ ಫೋಟೋ

Posted By:
Subscribe to Filmibeat Kannada

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಕೇರಳದ ಕ್ರಿಕೆಟರ್ ಶ್ರೀಶಾಂತ್ ಸಿಕ್ಕಿ ಅಂದರ್ ಆದ ಮೇಲೆ ಎಲ್ಲಿ ತನ್ನ ಹೆಸರನ್ನು ಬಾಹರ್ ಮಾಡುತ್ತಾರೋ ಎಂದು ಬೆಳಗಾವಿ ಚೆಲುವೆ ಲಕ್ಷ್ಮಿ ರೈ ಚಿಂತಾಕ್ರಾಂತರಾಗಿದ್ದಾರಂತೆ.

ಶ್ರೀಶಾಂತ್ ಬಹಳ ದಿನಗಳಿಂದ ನನಗೆ ಟಚ್ ನಲ್ಲಿ ಇಲ್ಲ. ಆತನೊಂದಿಗೆ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ. ಐಪಿಎಲ್ ಫಿಕ್ಸಿಂಗ್ ಜಂಜಾಟದಲ್ಲಿ ತನ್ನನ್ನು ದಯವಿಟ್ಟು ಎಳೆಯಬೇಡಿ ಪ್ಲೀಸ್.. ಎಂದು ಲಕ್ಷ್ಮಿ ರೈ ಬಗೆಬಗೆಯಾಗಿ ಮಾಧ್ಯಮದ ಮುಂದೆ ವಿನಂತಿಸಿಕೊಂಡಿದ್ದರೂ ಶ್ರೀಶಾಂತ್ ಮತ್ತು ಲಕ್ಷ್ಮಿ ರೈ ಫೋಟೋಗಳು ಅಂತರ್ಜಾಲದಲ್ಲಿ ಗಿರಿಗಿಟ್ಲೆಯಂತೆ ಸುತ್ತಾಡುತ್ತಿದೆ.

ಮೂರು ವರ್ಷದ ಹಿಂದೆ ನಾನು ಶ್ರೀಶಾಂತ್ ಜೊತೆ ಮಾತನಾಡಿದ್ದೆ. ಅದಾದ ಮೇಲೆ ನಾನು ಶ್ರೀಶಾಂತ್ ಜೊತೆ ಯಾವುದೇ ರೀತಿಯಲ್ಲಿ ಟಚ್ ನಲ್ಲಿ ಇಲ್ಲ. ಸುಖಾಸುಮ್ಮನೆ ನನ್ನ ಹೆಸರನ್ನು ಎಳೆಯಲಾಗುತ್ತಿದೆ. ಇದರಿಂದ ನನ್ನ ಖಾಸಾಗಿ ಬದುಕಿಗೆ ಹಾನಿಯಾಗುತ್ತಿದೆ ಎಂದು ಲಕ್ಷ್ಮಿ ರೈ ಡೆಕ್ಕನ್ ಕ್ರೋನಿಕಲ್ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆ ಕೂಡಾ ಲಕ್ಷ್ಮಿ ರೈ ಹೆಸರು ಕೇಳಿ ಬರುತ್ತಿತ್ತು.

ಶ್ರೀಶಾಂತ್ ಜೊತೆ ಲಕ್ಷ್ಮಿರೈ

ಐಪಿಎಲ್ ಮೊದಲನೇ ಸೀಸನಿನಲ್ಲಿ ನಯನತಾರ ಜೊತೆ ಚೆನ್ನೈ ಸೂಪರ್ ಕಿಂಗ್ಸಿನ ಬ್ರಾಂಡ್ ಅಂಬಾಸಡರ್ ಆಗಿದ್ದ ಲಕ್ಷ್ಮಿರೈ ಅದಾದ ನಂತರ ಯಾವುದೇ ತಂಡದ ಜೊತೆ ಗುರುತಿಸಿಕೊಂಡಿರಲಿಲ್ಲ.

ಶ್ರೀಶಾಂತ್ ಜೊತೆ ಲಕ್ಷ್ಮಿರೈ

ಯಾವುದೇ ತಂಡದ ಜೊತೆ ಅಫಿಸಿಯಲ್ ಆಗಿ ಗುರುತಿಸಿಕೊಂಡಿಲ್ಲವಾದರೂ ಲಕ್ಷ್ಮಿರೈ ಕೇರಳ ಸ್ಟ್ರೈಕರ್ ತಂಡವನ್ನು ಹಲವು ಪಂದ್ಯದಲ್ಲಿ ಬೆಂಬಲಿಸುತ್ತಿದ್ದರು.

ಶ್ರೀಶಾಂತ್ ಜೊತೆ ಲಕ್ಷ್ಮಿರೈ

ಕೇರಳ ಸ್ಟ್ರೈಕರ್ ತಂಡದ ಜೊತೆ ಗುರುತಿಸಿಕೊಂಡಿದ್ದಕ್ಕೆ ಕಾರಣ ನೀಡುವ ಲಕ್ಷ್ಮಿರೈ ನಿರ್ದೇಶಕ ಮತ್ತು ಕೇರಳ ಸ್ಟ್ರೈಕರ್ ತಂಡದ ಸಹ ಮಾಲೀಕರಾದ ಪ್ರಿಯದರ್ಶನ್ ವಿನಂತಿ ಮೇರೆಗೆ ಪಂದ್ಯದಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುತ್ತಾರೆ.

ಶ್ರೀಶಾಂತ್ ಜೊತೆ ಲಕ್ಷ್ಮಿರೈ

ಲಕ್ಷ್ಮಿರೈ ಜೊತೆ ಶ್ರೀಶಾಂತ್ ಗುಸುಗುಸು ಆರಂಭವಾಗಿದ್ದು ಇಬ್ಬರೂ ಫೋಟೋ ಶೂಟೌಟಿನಲ್ಲಿ ಕಾಣಿಸಿಕೊಂಡ ನಂತರ. ಇಬ್ಬರ ನಡುವೆ affair ಬಗ್ಗೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು.

ಶ್ರೀಶಾಂತ್ ಜೊತೆ ಲಕ್ಷ್ಮಿರೈ

ಈ ಎಲ್ಲಾ ವಿವಾದಕ್ಕೆ ತೆರೆಯೆಳೆಯಲು ಲಕ್ಷ್ಮಿರೈ ಪ್ರಯುತ್ನಿಸಿದರೂ ಇವರಿಬ್ಬರ ಫೋಟೊಗಳು ಅಂತರ್ಜಾಲದಲ್ಲಿ ಸುತ್ತಾಡುತ್ತಿದೆ. ಸದ್ಯಕ್ಕೆ ತಾನು ಬಿಜಿನೆಸ್ ಮ್ಯಾನ್ ಒಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಲಕ್ಷ್ಮಿರೈ ಹೇಳಿದ್ದರು.

English summary
Even after actress Lakshi Rai clears his relationship with cricket Shreesanth, the photographs of both these two rounds in internet.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada