»   » ತಾರೆಯರ ಸಾಬೂನಿಗೆ ಸಮಂತಾ ಕ್ವೀನ್, ಸಿದ್ದು ಕಿಂಗ್

ತಾರೆಯರ ಸಾಬೂನಿಗೆ ಸಮಂತಾ ಕ್ವೀನ್, ಸಿದ್ದು ಕಿಂಗ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಶ್ರೀದೇವಿ, ಮಾಧುರಿ ದೀಕ್ಷಿತ್, ಕಾಜೋಲ್, ಐಶ್ವರ್ಯಾ ರೈ, ಕರೀನಾ ಕಪೂರ್, ಆಸಿನ್, ಕತ್ರೀನಾ ಕೈಫ್, ಶಾರುಖ್ ಖಾನ್ ನಂತರ ತಾರೆಯರ ಸೌಂದರ್ಯ ಸಾಬೂನು ಎಂದೇ ಚಿರಪರಿಚಿತವಾಗಿರುವ ಲಕ್ಸ್ ಸಾಬೂನಿನ ಬ್ರ್ಯಾಂಡ್ ಗೆ ದಕ್ಷಿಣ ಭಾರತದ ಬ್ಯೂಟಿ ಸಮಂತಾ ಸೇರ್ಪಡೆಯಾಗಿದ್ದಾಳೆ.

ಈ ವಿಷಯವನ್ನು ಸ್ವತಃ ಸಮಂತಾ ಟ್ವೀಟ್ ಮಾಡಿ ಎಲ್ಲರಿಗೂ ತಿಳಿಸಿದ್ದಾಳೆ. ಚಿಕ್ಕಂದಿನಲ್ಲಿ ನನ್ನ ನೆಚ್ಚಿನ ತಾರೆಯರು ಲಕ್ಸ್ ಸೋಪಿನ ಜಾಹೀರಾತಿನಲ್ಲಿ ಬರುವುದನ್ನು ನೋಡುತ್ತಿದ್ದೆ ನಾನು ಈಗ ಅದೇ ಸೋಪಿನ ಜಾಹೀರಾತಿಗಾಗಿ ಶೂಟಿಂಗ್ ಮಾಡಿರುವುದು ಥ್ರಿಲ್ ಆಗಿದೆ ಎಂದಿದ್ದಾಳೆ.

ಇಲ್ಲಿ ಇನ್ನೊಂದು ಥ್ರಿಲ್ಲಿಂಗ್ ವಿಷಯ ಇದೆ. ಸಮಂತಾ ಶೂಟಿಂಗ್ ಮಾಡಿದ್ದು ಆಪ್ತ ಗೆಳೆಯ ಸಿದ್ದಾರ್ಥ್ ಜತೆಗಂತೆ. ಈ ವಿಷಯ ಕೂಡಾ ಸಿದ್ದಾರ್ಥ್ ಟ್ವೀಟ್ ಮಾಡಿ ಜಗತ್ತಿಗೆ ಸಾರಿದ್ದಾನೆ. ಒಟ್ಟಿನಲ್ಲಿ ಯಶಸ್ಸಿನ ಬೆನ್ನೇರಿರುವ 'ಈಗ' ಚಿತ್ರದ ಬೆಡಗಿ ಸಮಂತಾ ರೂಥ್ ಪ್ರಭು ಈಗ ಟಿವಿ ಜಾಹೀರಾತು ಲೋಕದಲ್ಲೂ ಸದ್ದು ಮಾಡಲು ಶುರು ಮಾಡಿದ್ದಾಳೆ.

ಸದ್ಯಕ್ಕೆ ಪವನ್ ಕಲ್ಯಾಣ್ ಜತೆ ನಟಿಸಿರುವ ಅತ್ತರಿಂಟಿಕಿ ದಾರೆಡಿ ಹಾಗೂ ಜ್ಯೂನಿಯರ್ ಎನ್ಟಿಆರ್ ಜತೆ ರಾಮಯ್ಯ ವಸ್ತಾವಯ್ಯ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿದೆ. ಜಾಹೀರಾತು ಲೋಕದಲ್ಲಿ ಚಿಕ್ ಶಾಂಪೂ, ಡಾಬರ್ ವಾಟಿಕಾ ಹೇರ್ ಆಯಿಲ್ ಸೇರಿದಂತೆ ವಿವಿಧ ಬ್ರ್ಯಾಂಡ್ ಗಳು ಸಮಂತಾ ಜತೆ ಇದೆ.. ಸಮಂತಾ ಜಾಹೀರಾತು ಲೋಕ ಅನಾವರಣಗೊಳಿಸಲಾಗಿದೆ ನೋಡಿ

ಹೊಸ ಆಡ್ ಬಗ್ಗೆ ಸಿದ್ದಾರ್ಥ್

ಲಕ್ಸ್ ಸೌಂದರ್ಯ ಸಾಬೂನಿನ ಹೊಸ ಜಾಹೀರಾತು ನೋಡಲು ನವೆಂಬರ್ 1 ರ ತನಕ ಕಾಯಲೇಬೇಕು

ಸಿದ್ದಾರ್ಥ್ ಜತೆ ಶೂಟಿಂಗ್

ಲಕ್ಸ್ ಸೌಂದರ್ಯ ಸಾಬೂನಿನ ಹೊಸ ಜಾಹೀರಾತು ಶೂಟಿಂಗ್ ಅದೂ ಸಿದ್ದಾರ್ಥ್ ಜತೆ

ಸಮಂತಾ- ಸಿದ್ದಾರ್ಥ್

ತೆಲುಗು, ತಮಿಳು ಚಿತ್ರರಂಗದ ಆಗಾಗ ಹಿಂದಿ ಚಿತ್ರದಲ್ಲೂ ಕಾಣಿಸಿಕೊಳ್ಳುವ ಲವರ್ ಬಾಯ್ ಸಿದ್ದಾರ್ಥ್ ಜತೆ ಕುಟುಂಬ ಸಮೇತ ಸಮಂತಾ ಕಾಳಹಸ್ತಿ ದೇಗುಲದಲ್ಲಿ ದೋಷ ನಿವಾರಣೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಮೇಲೆ ಇಬ್ಬರ ನಡುವಿನ ಪ್ರೇಮ ಮದುವೆ ಬಂಧನಕ್ಕೆ ಒಳಪಡುವ ಸುದ್ದಿಗಳು ದಟ್ಟವಾಯಿತು.

ಸೋಹಾ ಅಲಿ ಖಾನ್, ಶ್ರುತಿ ಹಾಸನ್, ಪ್ರಿಯಾ ಆನಂದ್ ಪಟ್ಟಿಗೆ ಸಮಂತಾ ಸೇರ್ಪಡೆಯಾಗಿದ್ದು, ಸಿದ್ದಾರ್ಥ್ ಎಂಬ ಪ್ಲೇಬಾಯ್ ಗೆ ಸಮಂತಾ ಕಿರು ಬೆರಳ ಹಿಡಿದು ಸಪ್ತಪದಿ ತುಳಿಯುವ ಮನಸು ಮೂಡುವುದೇ ಕಾದು ನೋಡಬೇಕಿದೆ.

ಅಂದ ಹಾಗೆ ಸಮಂತಾಗೆ ಇನ್ನೂ ವಯಸ್ಸು ಇನ್ನೂ 25ರ ಪ್ರಾಯ. ಆದರೆ ಸಿದ್ಧಾರ್ಥ್ ಆಕೆಗಿಂತಲೂ 10 ವರ್ಷ ದೊಡ್ಡವನು. ಮದುವೆ ವಿಷಯದಲ್ಲಿ ಅನುಭವಿ

ಒಡೊನಿಲ್ ಜೆಲ್ Ad

ಒಡೊನೆಲ್ ರೂಮ್ ಫ್ರೆಶನಿಂಗ್ ಜೆಲ್ ಜಾಹೀರಾತು ನಲ್ಲಿ ಮೊದಮೊದಲು ಸಮಂತಾ ಗಮನ ಸೆಳೆದಳು.

Odonil Room Freshening Gel is really exciting as I can use it anywhere in my house, from the living room to the bedroom. I love the fragrances as well ಎನ್ನುತ್ತಾಳೆ ಸಮಂತಾ

ಬಿಗ್ ಸಿ Ad

ಬಿಗ್ ಸಿ ಸಿನಿಮಾಸ್ ಸಂಸ್ಥೆಯ ರಾಯಭಾರಿಯಾಗಿ ಸಮಂತಾ ಆಯ್ಕೆಯಾಗಿದ್ದಾಳೆ. ಈ ಮುಂಚೆ ಇಲಿಯಾನಾ ಡಿ ಕ್ರೂಜ್ ಇದಕ್ಕೆ ರಾಯಭಾರಿಯಾಗಿದ್ದಳು

ಚಿಕ್ ಶಾಂಪೂ Ad

ಯುವ ರೂಪದರ್ಶಿಯಾಗಿ ಚಿಕ್ ಶಾಂಪೂ ಜಾಹೀರಾತಿನಲ್ಲಿ ಸಮಂತಾ ಕಾಣಿಸಿಕೊಂಡಿದ್ದಾಳೆ

ವಾಟಿಕಾ ಹೇರ್ ಆಯಿಲ್

ವಾಟಿಕಾ ಹೇರ್ ಆಯಿಲ್ ಟಿವಿ ಜಾಹೀರಾತಿನಲ್ಲಿ 2013ರ ಆರಂಭದಿಂದ ಸಮಂತಾ ಕಾಣಿಸಿಕೊಂಡಿದ್ದಾಳೆ.

ಗೋಕುಲ್ ಸಂದಿವಾ Ad

2012ರಿಂದ ಗೋಕುಲ್ ಸಂದಿವಾ ಫೇರ್ ನೆಸ್ ಕ್ರೀಮ್ ಜಾಹೀರಾತಿನಲ್ಲಿ ಸಮಂತಾ ಕಾಣಿಸಿಕೊಂಡಿದ್ದಾಳೆ. ಕೈಲಾಸ್ ಮೆನನ್ ಸಂಗೀತವಿರುವ ಓಂ ಪ್ರಕಾಶ್ ಛಾಯಾಗ್ರಹಣದ ಅವಿನಾಶ್ ಹರಿಹರನ್ ನಿರ್ದೇಶನದ ಜಾಹೀರಾತು ಸಮಂತಾಗೂ ಇಷ್ಟವಾಯಿತಂತೆ

ಸರವಣ ಸ್ಟೋರ್ಸ್

ಸರವಣ ಗೋಲ್ಡ್ ಪ್ಯಾಲೇಸ್ ನ ರಾಯಭಾರಿಯಾಗಿ ಸಮಂತಾ ಗಮನ ಸೆಳೆದಿದ್ದಾಳೆ. RAM ಎಂಟರ್ ಟೈನ್ಮೆಂಟ್ ನಿರ್ಮಾಣದ ಜಾಹೀರಾತನ್ನು ಎಸ್ ಪಾಪು ನಿರ್ದೇಶಿಸಿದ್ದು, ರತ್ನವೇಲು ಛಾಯಾಗ್ರಹಣ, ಎಸ್ ಥಮನ್ ಮ್ಯೂಸಿಕ್ ಪಡೆದಿದೆ.

ಶಾಪಿಂಗ್ ಮಾಲ್

ಪ್ರಿಯಾಂಕಾ ದತ್ತ ನಿರ್ಮಾಣದ ದಕ್ಷಿಣ ಭಾರತ ಶಾಪಿಂಗ್ ಮಾಲ್ ಜಾಹೀರಾತನ್ನು ಕ್ರಿಶ್ ನಿರ್ದೇಶಿಸಿದ್ದಾರೆ. ಜ್ಞಾನಶೇಖರ್ ಛಾಯಾಗ್ರಹಣವಿದ್ದು, ಅಚ್ಚು ಮ್ಯೂಸಿಕ್, ವೀರಾ ಸ್ಟೈಲಿಂಗ್ ಜಾಹೀರಾತಿಗಿದೆ

English summary
The back-to-back success of movies has not only made Samantha Ruth Prabhu, a most sought after face in South Indian Film industry, but also in TV ad industry too.The latest to come her way is Lux. Yes! She has been officially roped in as a new brand ambassador for the soap
Please Wait while comments are loading...