For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಖ್ಯಾತ ನಿರೂಪಕನಿಗೆ ಸಹಾಯ ಮಾಡಿ ಎಂದು ಕೇಳಿಕೊಂಡ ಸುದೀಪ್

  |

  ಎರಡು ದಶಕಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತ ಕಲಾವಿದ ಸಂಜೀವ್ ಕುಲಕರ್ಣಿ. ಉದಯ ಟಿವಿ ಹಾಗೂ ಅಂದಿನ ಈಟಿವಿಯಲ್ಲಿ ಪ್ರಸಾರವಾದ ಹಲವು ಕಾರ್ಯಕ್ರಮಗಳಿಗೆ ನಿರೂಪಕರಾಗಿದ್ದವರು ಸಂಜೀವ್ ಕುಲಕರ್ಣಿ. ನಿರೂಪಣೆ ಜೊತೆಗೆ ನಟನೆಯನ್ನೂ ಮಾಡುತ್ತಿರುವ ಸಂಜೀವ್ ಕುಲಕರ್ಣಿ ಆರೋಗ್ಯದಲ್ಲಿ ಸದ್ಯ ಏರುಪೇರು ಉಂಟಾಗಿದೆ.

  ಕಳೆದ 15 ವರ್ಷಗಳಿಂದ ಕಾರ್ಡಿಯೋಮಯೋಪತಿ ಎಂಬ ಕಾಯಿಲೆಯಿಂದ ಸಂಜೀವ್ ಕುಲಕರ್ಣಿ ಬಳಲುತ್ತಿದ್ದಾರೆ. ನಾಲ್ಕೈದು ತಿಂಗಳಿಂದ ಅವರ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿದ್ದು, ಹಾರ್ಟ್ ಟ್ರ್ಯಾನ್ಸ್ ಪ್ಲಾಂಟ್ ಮಾಡಲು ವೈದ್ಯರು ಸೂಚಿಸಿದ್ದಾರೆ.

  ಹಾರ್ಟ್ ಟ್ರ್ಯಾನ್ಸ್ ಪ್ಲಾಂಟ್ ಗಾಗಿ 40-45 ಲಕ್ಷ ರೂಪಾಯಿ ಬೇಕಾಗಿದೆ. ಅಷ್ಟೊಂದು ದುಡ್ಡು ಕುಟುಂಬದ ಬಳಿ ಇಲ್ಲದ ಕಾರಣ, ಹಣ ಸಂಗ್ರಹ ಮಾಡಲಾಗುತ್ತಿದೆ. ನಟ, ನಿರೂಪಕ ಸಂಜೀವ್ ಕುಲಕರ್ಣಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿರಿ...

  ಟ್ವೀಟ್ ಮಾಡಿರುವ ಸುದೀಪ್

  ಟ್ವೀಟ್ ಮಾಡಿರುವ ಸುದೀಪ್

  ''ಇಂತಹ ಸಮಯದಲ್ಲಿ ನೀವು ಮಾಡುವ ಚಿಕ್ಕ ಸಹಾಯವೂ ದೊಡ್ಡದು'' ಎಂದು ಸಂಜೀವ್ ಕುಲಕರ್ಣಿಗಾಗಿ ಹಣ ಸಂಗ್ರಹ ಮಾಡುತ್ತಿರುವ ಲಿಂಕ್ ನ ಶೇರ್ ಮಾಡಿ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

  ಸಂಜೀವ್ ಕುಲಕರ್ಣಿ ಪುತ್ರ ಸೌರಬ್ ಏನಂತಾರೆ.?

  ಸಂಜೀವ್ ಕುಲಕರ್ಣಿ ಪುತ್ರ ಸೌರಬ್ ಏನಂತಾರೆ.?

  ''ನಾಲ್ಕೈದು ತಿಂಗಳಿಂದ ಅಪ್ಪನ ಆರೋಗ್ಯದಲ್ಲಿ ತುಂಬಾ ಸಮಸ್ಯೆ ಆಗಿದೆ. ಹೀಗಾಗಿ ಹಾರ್ಟ್ ಟ್ರ್ಯಾನ್ಸ್ ಪ್ಲಾಂಟ್ ಮಾಡಬೇಕು ಅಂತ ವೈದ್ಯರು ತಿಳಿಸಿದ್ದಾರೆ. ಹಾರ್ಟ್ ಟ್ರ್ಯಾನ್ಸ್ ಪ್ಲಾಂಟ್ ಗಾಗಿ 40-45 ಲಕ್ಷ ಬೇಕಾಗಿದೆ. ನಮ್ಮದು ಮಿಡಲ್ ಕ್ಲಾಸ್ ಫ್ಯಾಮಿಲಿ. ಅಷ್ಟೊಂದು ದುಡ್ಡು ನಮ್ಮ ಬಳಿ ಇಲ್ಲ. ಹೀಗಾಗಿ, ಫಂಡ್ ರೈಸ್ ಮಾಡುತ್ತಿದ್ದೇವೆ'' ಎಂದು 'ಫಿಲ್ಮಿಬೀಟ್ ಕನ್ನಡ'ಗೆ ಸಂಜೀವ್ ಕುಲಕರ್ಣಿ ಪುತ್ರ ಸೌರಬ್ ಕುಲಕರ್ಣಿ ತಿಳಿಸಿದರು.

  ಎಲ್ಲರಿಗೂ ಚಿರಋಣಿ

  ಎಲ್ಲರಿಗೂ ಚಿರಋಣಿ

  ''ಇಂಡಸ್ಟ್ರಿಯಿಂದ ನಮಗೆ ತುಂಬಾ ಸಹಾಯ ಸಿಕ್ಕಿದೆ. ನಮ್ಮ ಪಾಪಾ ಪಾಂಡು ಸೀರಿಯಲ್ ತಂಡದವರು ಕೂಡ ಸಹಾಯ ಮಾಡಿದ್ದಾರೆ. ಸುದೀಪ್ ಸರ್ ಕೂಡ ಟ್ವೀಟ್ ಮಾಡಿದ್ದಾರೆ. ಒಬ್ಬರು ಇಬ್ಬರು ಅಂತ ಅಲ್ಲ. ನಮ್ಮ ಕ್ಯಾಂಪೇನ್ ನಿಂದಾಗಿ ಎಷ್ಟೋ ಜನ ತಮ್ಮ ಕೈಲಾದ ಸಹಾಯವನ್ನು ನಮಗೆ ಮಾಡಿದ್ದಾರೆ. ಎಲ್ಲರಿಗೂ ನಾವು ಚಿರಋಣಿ'' - ಸೌರಬ್ ಕುಲಕರ್ಣಿ, ಸಂಜೀವ್ ಕುಲಕರ್ಣಿ ಪುತ್ರ.

  ವಿಶ್ವದ ವಿವಿಧ ಕಡೆಯಿಂದ ಸಹಾಯ

  ವಿಶ್ವದ ವಿವಿಧ ಕಡೆಯಿಂದ ಸಹಾಯ

  ಸಂಜೀವ್ ಕುಲಕರ್ಣಿಗಾಗಿ ಇಲ್ಲಿಯವರೆಗೂ 2500 ಕ್ಕೂ ಹೆಚ್ಚು ಮಂದಿ ತಮಗೆ ಆದಷ್ಟು ಹಣ ಸಹಾಯ ಮಾಡಿದ್ದಾರೆ. ಯು.ಎಸ್, ಯು.ಕೆ, ಅರಬ್ ದೇಶದ ಕನ್ನಡಿಗರು ಕೂಡ ಸಹಾಯ ಹಸ್ತ ಚಾಚಿದ್ದಾರೆ ಅಂತಾರೆ ಸೌರಬ್ ಕುಲಕರ್ಣಿ.

  ಸಂಜೀವ್ ಕುಲಕರ್ಣಿ ಕುರಿತು

  ಸಂಜೀವ್ ಕುಲಕರ್ಣಿ ಕುರಿತು

  ವೃತ್ತಿಯಲ್ಲಿ ನಿರೂಪಕರಾಗಿದ್ದ ಸಂಜೀವ್ ಕುಲಕರ್ಣಿ 90 ರ ದಶಕದಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ಹಲವು ಕಾರ್ಯಕ್ರಮಗಳನ್ನ ನಡೆಸಿಕೊಟ್ಟಿದ್ದರು. ಅಂದಿನ ಈಟಿವಿಯಲ್ಲಿ ಪ್ರಸಾರವಾದ 'ಡಿಮ್ಯಾಂಡಪ್ಪೋ ಡಿಮ್ಯಾಂಡು' ಕಾರ್ಯಕ್ರಮದ ಸಾವಿರ ಸಂಚಿಕೆಗಳಿಗೆ ಸಂಜೀವ್ ಕುಲಕರ್ಣಿ ಆಂಕರ್ ಆಗಿದ್ದರು. 3000ಕ್ಕೂ ಹೆಚ್ಚು ಸ್ಟೇಜ್ ಪ್ರೋಗ್ರಾಂಗಳಿಗೆ ಸಂಜೀವ್ ಕುಲಕರ್ಣಿ ಆಂಕರಿಂಗ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟನೆ ಕೂಡ ಆರಂಭಿಸಿದ ಅವರು 'ನಿಗೂಢ ರಾತ್ರಿ', 'ನಾಗಿಣಿ', 'ರಾಜಾ ರಾಣಿ', 'ಏಟು ಎದಿರೇಟು' ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸಂಜೀವ್ ಕುಲಕರ್ಣಿ ಪುತ್ರ ಸೌರಬ್ ಕುಲಕರ್ಣಿ ಸದ್ಯ 'ಪಾಪಾ ಪಾಂಡು' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

  ಇಲ್ಲಿಯವರೆಗೂ ಸಂಗ್ರಹ ಆಗಿರುವ ಹಣ

  ಇಲ್ಲಿಯವರೆಗೂ ಸಂಗ್ರಹ ಆಗಿರುವ ಹಣ

  ಸಂಜೀವ್ ಕುಲಕರ್ಣಿ ಅವರಿಗೆ ಇಲ್ಲಿಯವರೆಗೂ ಸುಮಾರು 17 ಲಕ್ಷ ರೂಪಾಯಿಯಷ್ಟು ಹಣ ಸಂಗ್ರಹವಾಗಿದೆ. ಆಪರೇಶನ್ ದಿನಾಂಕ ಇನ್ನೂ ನಿಗದಿ ಆಗಿಲ್ಲ.

  English summary
  Kannada TV Actor, Anchor Sanjeev Kulkarni needs financial help for heart transplant.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X