For Quick Alerts
  ALLOW NOTIFICATIONS  
  For Daily Alerts

  "ಧಮ್ ಇದ್ರೆ ಹೊಡಿ ನನ್ನ.. ದಿಲ್ ಇದ್ರೆ ತಡಿ ನನ್ನ" ಕವಿತೆ ಬರೆದು ಸಮರ ಸಾರಿದ ಡಾಲಿ!

  |

  ಸ್ಯಾಂಡಲ್‌ವುಡ್‌ನ ಟ್ಯಾಲೆಂಟೆಡ್ ಆಕ್ಟರ್ ಡಾಲಿ ಧನಂಜಯ್. ಯಾವುದೇ ಪಾತ್ರ ಸಿಕ್ಕಿದ್ರೂ ಕೈ ಅಂತಾರೆ. ಪಕ್ಕಾ ಫ್ಯಾಮಿಲಿ ರೋಲ್‌ನಲ್ಲಿ ಕಾಣಿಸಿಕೊಳ್ಳುವುದಕ್ಕೂ ಹಿಂದೇಟು ಹಾಕೋದಿಲ್ಲ. ಅತ್ತ ಲಾಂಗ್ ಹಿಡಿದು ಹೊಡೆದಾಡುವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ.

  ಇನ್ನೊಂದು ಕಡೆ ಪೆನ್ನು ಹಿಡಿದು ನಾಲ್ಕು ಅಕ್ಷರ ಗೀಚುವುದಕ್ಕೂ ಹಿಂದೇಟು ಹಾಕಲ್ಲ. ಈಗ್ಯಾಕೆ ಈ ಮಾತು ಅಂದರೆ, ಡಾಲಿ ಧನಂಜಯ್ 10 ಸಾಲಿನ ಕವಿತೆಯೊಂದನ್ನು ಬರೆದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

  Orchestra Mysuru Trailer: ಆರ್ಕೆಸ್ಟ್ರಾ ಸಿಂಗರ್ ಪೂರ್ಣನ ಹಾಡು ಪಾಡು ಇತ್ಯಾದಿOrchestra Mysuru Trailer: ಆರ್ಕೆಸ್ಟ್ರಾ ಸಿಂಗರ್ ಪೂರ್ಣನ ಹಾಡು ಪಾಡು ಇತ್ಯಾದಿ

  ಧನಂಜಯ್ ಬರೆದ ಈ 10 ಸಾಲುಗಳೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಡಾಲಿ ಪ್ರತಿಭೆ ಬಗ್ಗೆ ಗುಣಗಾನ ಮಾಡುತ್ತಿದ್ದರೆ, ಮತ್ತೆ ಕೆಲವರು ಧನಂಜಯ್ ಹೀಗೆ ಯಾಕೆ ಬರೆದಿರಬಹುದು? ಅಂತ ಲೆಕ್ಕಚಾರ ಹಾಕುತ್ತಿದ್ದಾರೆ.

  'ಧಮ್ ಇದ್ರೆ ಹೊಡಿ ನನ್ನ.. ದಿಲ್ ಇದ್ರೆ ತಡಿ ನನ್ನ'

  'ಧಮ್ ಇದ್ರೆ ಹೊಡಿ ನನ್ನ.. ದಿಲ್ ಇದ್ರೆ ತಡಿ ನನ್ನ'

  ಡಾಲಿ ಧನಂಜಯ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ಕವಿತೆಯೊಂದನ್ನು ಬರೆದು ಅದನ್ನು ಹಂಚಿಕೊಂಡಿದ್ದರು. ನಿನ್ನೆ (ಜನವರಿ 5) ಬರೆದಿರೋ ಈ ಕವಿತೆ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಅದ್ಯಾಕೆ ಅಂತ ನೋಡುವುದಕ್ಕೂ ಮುನ್ನ ಏನು ಬರೆದಿದ್ದಾರೆ ಅನ್ನೋದನ್ನೊಮ್ಮೆ ನೋಡಿ ಬಿಡಿ..

  "ಸುಟ್ಟು ಸುಟ್ಟು ಸುಟ್ಟಾರು ನನ್ನ
  ಸುಟ್ಟು ಬೆಳಕಾಗಿ ಉರಿವೆ..
  ಮುಚ್ಚಾರು ಮಣ್ಣಲ್ಲೇ ನನ್ನ
  ಮರವಾಗಿ ಬೆಳೆವೆ..
  ಹಾರಾಡೋ ಹಕ್ಕಿಗೆ ಇಲ್ಲಿ
  ಯಾವುದೇ ಗಡಿಯ ಹಂಗು..
  ಹಸಿದಂತ ಮಂದಿಗೆ ಇಲ್ಲಿ
  ಗೆಲ್ಲೋದೊಂದೇ ಗುಂಗು..
  ಧಮ್ ಇದ್ರೆ ಹೊಡಿ ನನ್ನ
  ದಿಲ್ ಇದ್ರೆ ತಡಿ ನಿನ್ನ"

  ಡಾಲಿ ಧಮ್ ಹಾಗೂ ದಿಲ್ ಅಂದಿದ್ದೇಕೆ?

  ಡಾಲಿ ಧಮ್ ಹಾಗೂ ದಿಲ್ ಅಂದಿದ್ದೇಕೆ?

  ಡಾಲಿ ಧನಂಜಯ್ ಈ ಕವಿತೆಯನ್ನು ಬರೆಯುತ್ತಿದ್ದಂ‍ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭ ಆಗಿದೆ. ಡಾಲಿ ನೋವಿನಿಂದ ಈ ಕವಿತೆ ಬರೆದಿದ್ದಾರಾ? ಇಲ್ಲಾ ಇದು ಯಾವುದಾದರೂ ಸಿನಿಮಾಗೆ ಅಂತ ಬರೆದ ಸಾಲುಗಳಾ? ಅಥವಾ ಚಿತ್ರರಂಗದಲ್ಲಿ ಡಾಲಿಯನ್ನು ಯಾರಾದರೂ ತುಳಿಯುವ ಪ್ರಯತ್ನ ಮಾಡುತ್ತಿದ್ದಾರಾ? ಇಂತಹದ್ದೇ ಒಂದು ಪ್ರಶ್ನೆಗಳು ನೆಟ್ಟಿಗರಿಗೆ ಹುಟ್ಟಿಕೊಂಡಿವೆ.

  ಡಾಲಿ ಕವಿತೆಗೆ ಮರುಳಾದ ನೆಟ್ಟಿಗರು

  ಡಾಲಿ ಕವಿತೆಗೆ ಮರುಳಾದ ನೆಟ್ಟಿಗರು

  ಡಾಲಿ ಧನಂಜಯ್ ಬರೆದ ಕವಿತೆ ಓದಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಒಬ್ಬರು "ಎಣ್ಣೆ ಬಾಟಲಿ ಹಿಡಿಯೋಕೂ ಸೈ.. ಲಾಂಗ್ ಹಿಡಿಯೋಕೂ ಸೈ.. ಗನ್ ಹಿಡಿಯೋಕೂ ಸೈ.. ಪೆನ್ ಹಿಡಿಯೋಕೂ ಸೈ.. ಸಕಲಕಲಾವಲ್ಲಭ.. ನಿಮ್ ಹೆಸರಲ್ಲಿರೋ 'ಧನ' ಹಾಗೂ 'ಜಯ' ಯಾವಾಗಲೂ ನಿಮ್ಮ ಜೊತೆಯಲ್ಲೇ ಇರಲಿ." ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು "ಡಾಲಿ ಧನಂಜಯ ಅವರೇ ತಮ್ಮಲ್ಲಿ ಜ್ಞಾನದ ಭಂಡಾರವೇ ಇದೆ. ಆ ಜ್ಞಾನದ ಭಂಡಾರ ಕೆಲವರಿಗೆ ಬೆಂಕಿ ಬೆಂಕಿಯಾಗಿ ಕಾಡುತ್ತದೆ. ಇನ್ನು ಕೆಲವರಿಗೆ ಬೆಳಕಾಗಿ ನೀಡುತ್ತದೆ." ಎಂದು ಬರೆದಿದ್ದಾರೆ.

  ಡಾಲಿ ಸಿನಿಮಾಗಳಲ್ಲಿ ಫುಲ್ ಬ್ಯುಸಿ

  ಡಾಲಿ ಸಿನಿಮಾಗಳಲ್ಲಿ ಫುಲ್ ಬ್ಯುಸಿ

  ಇನ್ನು ಸಿನಿಮಾ ವಿಚಾರಕ್ಕೆ ಬರೋದಾದರೆ, ಡಾಲಿ ಧನಂಜಯ್ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ. ರಮ್ಯಾ ಜೊತೆ 'ಉತ್ತರಕಾಂಡ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಹೊಯ್ಸಳ' ಹಾಗೂ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ಕೈಯಲ್ಲಿದೆ. ಅಲ್ಲದೆ 'ಜಮಾಲಿಗುಡ್ಡ' ರಿಲೀಸ್ ಆಗಿದ್ದು, 'ಟಗರು ಪಲ್ಯ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

  English summary
  Poem by Daali Dhananjay Wote Goes Viral On Social Media, Know More.
  Friday, January 6, 2023, 14:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X