»   » ಪುನೀತ್ ಅವರನ್ನ ಭೇಟಿ ಮಾಡಿದ ಪೋಲೆಂಡ್ ರಾಯಭಾರಿ: ಯಾಕೆ?

ಪುನೀತ್ ಅವರನ್ನ ಭೇಟಿ ಮಾಡಿದ ಪೋಲೆಂಡ್ ರಾಯಭಾರಿ: ಯಾಕೆ?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ಪೋಲೆಂಡ್ ರಾಯಭಾರಿ ಭೇಟಿ ಮಾಡಿದ್ದಾರೆ. ಭಾರತದಲ್ಲಿರುವ ಪೋಲೆಂಡ್ ರಾಯಭಾರಿ ಆಡಂ ಬುರಕೌಸ್ಕಿ ಅವರು ಪುನೀತ್ ನಿವಾಸಕ್ಕೆ ಹೋಗಿ, ಅಪ್ಪು ಜೊತೆ ಮಾತುಕತೆ ನಡೆಸಿದ್ದಾರೆ.

ಮುಂಬರುವ ದಿನಗಳಲ್ಲಿ ತಮ್ಮ ಚಿತ್ರಗಳನ್ನ ಪೋಲೆಂಡ್ ನಲ್ಲಿ ಚಿತ್ರೀಕರಣ ಮಾಡುವಂತೆ ಪುನೀತ್ ಅವರಿಗೆ ಆಹ್ವಾನ ನೀಡಿದ್ದಾರೆ. ಈ ವೇಳೆ ಪೋಲೆಂಡ್ ರಾಯಭಾರಿಗೆ ನಟ ಪುನೀತ್ ರಾಜ್ ಕುಮಾರ್ ತಮ್ಮ ತಂದೆ ಅವರ ಹೆಸರಿನಲ್ಲಿ ಬರೆದಿರುವ ಪುಸ್ತಕವನ್ನ ಉಡುಗೊರೆಯಾಗಿ ನೀಡಿದ್ದಾರೆ.

ರಾಜ್ ಸಮಾಧಿ ಬಳಿ ಹೋಗಿದ್ದ ಚರಣ್ ರಾಜ್ ಗೆ ಪುನೀತ್ ಸಿಕ್ಕಿದ್ರು.! ಆಮೇಲೇನಾಯ್ತು?

ಈ ವಿಷ್ಯವನ್ನ ಪೋಲೆಂಡ್ ರಾಯಭಾರಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ, ಕಿರುತೆರೆಯಲ್ಲಿ 'ಫ್ಯಾಮಿಲಿ ಪವರ್' ಕಾರ್ಯಕ್ರಮ ನಡೆಸಿಕೊಡುತ್ತಿರುವ ಪುನೀತ್, ಹೊಸ ಚಿತ್ರದಲ್ಲಿ ಅಭಿನಯಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Poland Ambassador met Puneeth rajkumar

ಪವನ್ ಒಡೆಯರ್ ಹಾಗೂ ಶಶಾಂಕ್ ಅವರ ನಿರ್ದೇಶನದಲ್ಲಿ ಪುನೀತ್ ನಟಿಸಲಿದ್ದು, ಯಾವುದು ಮೊದಲು ಮತ್ತು ಯಾವುದು ನಂತರ ಎಂಬ ಕುತೂಹಲ ಕಾಡುತ್ತಿದೆ.

ಮತ್ತೊಂದೆಡೆ ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ನಲ್ಲಿ ಹೊಸಬರ ಚಿತ್ರಗಳು ನಿರ್ಮಾಣವಾಗುತ್ತಿದ್ದು, ಆ ಚಿತ್ರಗಳ ಪ್ರೊಡಕ್ಷನ್ ಕೂಡ ನೋಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಪಿ.ಆರ್.ಕೆ ಆಡಿಯೋ ಸಂಸ್ಥೆ ಕೂಡ ಹುಟ್ಟುಹಾಕಿದ್ದು, ಕನ್ನಡ ಚಿತ್ರಗಳ ಆಡಿಯೋ ಕೂಡ ಬಿಡುಗಡೆ ಮಾಡ್ತಿದ್ದಾರೆ.

English summary
Ambassador of Poland to India, Adam Burakowski met Puneeth rajkumar, inviting him to shoot his films in Poland. He was gifted a book on late actor Dr Rajkumar, penned by Puneeth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada