»   » ಟಿವಿ ನಟಿ ಜೊತೆ ಸಿಕ್ಕಿಬಿದ್ದ ಗಿರಿನಗರ ಪೊಲೀಸ್ ಪೇದೆ

ಟಿವಿ ನಟಿ ಜೊತೆ ಸಿಕ್ಕಿಬಿದ್ದ ಗಿರಿನಗರ ಪೊಲೀಸ್ ಪೇದೆ

By: ಉದಯರವಿ
Subscribe to Filmibeat Kannada
Constable having affair with actress
"ತನ್ನ ಗಂಡ ಕಿರುತೆರೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾನೆ. ಹೇಗಾದರೂ ಮಾಡಿ ತನ್ನ ಗಂಡನನ್ನು ಆಕೆಯಿಂದ ಬಿಡಿಸಿಕೊಡಿ" ಎಂದು ಭುವನೇಶ್ವರಿ ಎಂಬುವವರು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರಲ್ಲಿ ವಿನಂತಿಸಿಕೊಂಡಿದ್ದರು.

ಆಕೆಯ ಮನವಿಗೆ ಸ್ಪಂದಿಸಿದ ಸಂಘಟನೆ ಕಾರ್ಯಕರ್ತರು ಸೋಮವಾರ (ಜು.29) ಬ್ಯಾಟರಾಯನಪುರ ವ್ಯಾಪ್ತಿಯ ಪ್ರಮೋದ್ ಲೇಔಟ್ ನಲ್ಲಿರುವ ಕಿರುತೆರೆ ನಟಿ ಪವಿತ್ರಾ ಅವರ ಮನೆ ಮೇಲೆ ದಾಳಿ ಮಾಡಿದರು. ಅಲ್ಲಿ ಭುವನೇಶ್ವರಿ ಪತಿ ಯದುಕುಮಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಗಿರಿನಗರ ಪೊಲೀಸ್ ಠಾಣೆಯಲ್ಲಿ ಯದುಕುಮಾರ್ ಪೊಲೀಸ್ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆಯೇ ಯದುಕುಮಾರ್ ಅವರಿಗೆ ಸಂಗಬಸವನದೊಡ್ಡಿಯ ಭುವನೇಶ್ವರಿ ಜೊತೆ ಮದುವೆಯಾಗಿತ್ತು.

ಆಕೆ ಐದು ತಿಂಗಳ ಗರ್ಭಿಣಿಯಾದ ಕಾರಣ ಪತ್ನಿಯನ್ನು ತವರಿಗೆ ಕಳುಹಿಸಿದ್ದ ಯದುಕುಮಾರ್. ಹೆಣ್ಣುಮಗುವಾಗಿ ಒಂದು ವರ್ಷ ಕಳೆದರೂ ಅತ್ತ ತಲೆಹಾಕಿರಲಿಲ್ಲ. ಮನೆಗೆ ಕರೆದಾಗಲೆಲ್ಲಾ ಏನೇನೋ ಸಬೂಬು ಹೇಳಿ ನುಣುಚಿಕೊಳ್ಳುತ್ತಿದ್ದ ಎಂದಿದ್ದಾರೆ ಭುವನೇಶ್ವರಿ.

ಆಗಲೇ ನಟಿಯೊಬ್ಬಳ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾನೆ ಎಂದು ಗೊತ್ತಾಯಿತು. ಆಗ ಎರಡೂ ಕುಟುಂಬದ ಹಿರಿಯರು ಸಂಧಾನ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದರು. ಕಡೆಗೂ ಯದುಕುಮಾರ್ ಬದಲಾಗಲಿಲ್ಲ ಎಂದು ಭುವನೇಶ್ವರಿ ಆರೋಪಿಸಿದ್ದಾರೆ.

ಕಡೆಗೆ ಅವರು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರಿಗೆ ವಿಷಯ ತಿಳಿಸಿ, ನಟಿ ಮನೆಯ ಮೇಲೆ ದಾಳಿ ಮಾಡಿದಾಗ ಇಬ್ಬರೂ ಸಿಕ್ಕಿಬಿದ್ದಾರೆ. ಮನೆಯ ಬಳಿ ಜನ ಜಮಾಯಿಸಿ ಭಾರಿ ಗದ್ದಲ ಗಲಾಟೆ ಶುರುವಾಗಿದೆ. ಬ್ಯಾಟರಾಯನಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಕ್ಕೆ ತಂದಿದ್ದಾರೆ.

ಬಳಿಕ ಇಬ್ಬರೂ ಕುಟುಂಬಿಕರನ್ನು ಠಾಣೆಗೆ ಕರೆದೊಯ್ದು ಪರಿಸ್ಥಿಯನ್ನು ತಿಳಿಗೊಳಿಸಿ, ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ತಿಳಿಹೇಳಿದ್ದಾರೆ. ಗುರುವಾರದತನಕ ಗಡುವು ನೀಡಿದ್ದಾರೆ.

ಅಂದಹಾಗೆ ಯದುಕುಮಾರ್ ಅವರಿಗೆ ಕಿರುತೆರೆ ನಟಿ ಜೊತೆ ಮದುವೆಗೂ ಮುಂಚಿನಿಂದಲೂ ಸಂಬಂಧವಿತ್ತು ಎನ್ನಲಾಗಿದೆ. ಮದುವೆ ಬಳಿಕವೂ ಆಕೆಯನ್ನು ಮನೆಗೂ ಕರೆದುಕೊಂಡು ಬಂದಿದ್ದ. ಈ ಬಗ್ಗೆ ಕೇಳಿದರೆ ತಮ್ಮನ್ನೇ ದಭಾಯಿಸುತ್ತಿದ್ದರು ಎಂದಿದ್ದಾರೆ ಭುವನೇಶ್ವರಿ.

English summary
Girinagar Police constable Yadukumar's wife has alleged that her husband has a long term affair with Kannada small screen actress. On Monday (29th July), she attacked the actress' house at Byatarayanapura. Along with the help of activists of Jayakarnataka organisation she caught both Yadukumar and the actress red-handed.
Please Wait while comments are loading...