For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಅಭಿಮಾನಿಗಳ ಕಾರ್ಯಕ್ಕೆ ಶಹಭಾಸ್ ಎಂದ ರಾಜಕಾರಣಿಗಳು

  |

  ರಾಜನಂತೆ ಪ್ರಜೆಗಳು ಎಂಬ ಮಾತು ಸುಳ್ಳಲ್ಲವೆಂದು ಕೆಲವು ಘಟನೆಗಳನ್ನು ನೋಡಿದಾಗ ಎನಿಸುತ್ತೆ. ಇದಕ್ಕೆ ತಾಜಾ ಉದಾಹರಣೆ ದರ್ಶನ್ ಅಭಿಮಾನಿಗಳು ಮಾಡಿರುವ ಶ್ಲಾಘನೀಯ ಕಾರ್ಯ.

  ದರ್ಶನ್ ಸ್ವತಃ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಂತೆಯೇ ಅವರ ಅಭಿಮಾನಿಗಳೂ ಸಹ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿಯಾಗಿದ್ದಾರೆ.

  ಕೊರೊನಾ ಸಂಕಷ್ಟದಲ್ಲಿ ದರ್ಶನ್ ಅಭಿಮಾನಿಗಳು ಮೆರೆದ ಮಾನವೀಯತೆಕೊರೊನಾ ಸಂಕಷ್ಟದಲ್ಲಿ ದರ್ಶನ್ ಅಭಿಮಾನಿಗಳು ಮೆರೆದ ಮಾನವೀಯತೆ

  ಅದರಂತೆ ದರ್ಶನ್ ಅಭಿಮಾನಿಗಳು, ಕೊರೊನಾ ದ ಭೀಕರ ಪರಿಸ್ಥಿತಿಯಲ್ಲಿ ರಸ್ತೆಗೆ ಇಳಿದು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಮಾಡುತ್ತಿರುವ ಈ ಕಾರ್ಯ ರಾಜಕಾರಣಿಗಳಿಗೂ ಸಂತಸ ತಂದಿದ್ದು, ದರ್ಶನ್ ಅಭಿಮಾನಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಮೈಸೂರಿನ ದರ್ಶನ್ ಅಭಿಮಾನಿಗಳು

  ಮೈಸೂರಿನ ದರ್ಶನ್ ಅಭಿಮಾನಿಗಳು

  ಮೈಸೂರಿನ ದರ್ಶನ್ ಅಭಿಮಾನಿಗಳು ಕೊರೊನಾ ಲಾಕ್‌ಡೌನ್ ಆರಂಭವಾದಾಗಿನಿಂದಲೂ ಸಂಕಷ್ಟದಲ್ಲಿರುವವರಿಗೆ ಆಹಾರ ಸರಬರಾಜು, ತರಕಾರಿ, ದಿನಸಿ ಸರಬರಾಜು ಮಾಡುತ್ತಿದ್ದಾರೆ. ದರ್ಶನ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ನಾಗರಾಜ್ ಅವರ ನೇತೃತ್ವದಲ್ಲಿ ಈ ಸಮಾಜ ಸೇವಾ ಕಾರ್ಯ ಮುಂದುವರೆದಿದೆ.

  ಹಾಡಿ ಹೊಗಳಿದ ಸಂಸದ ಪ್ರತಾಪ್ ಸಿಂಹ

  ಹಾಡಿ ಹೊಗಳಿದ ಸಂಸದ ಪ್ರತಾಪ್ ಸಿಂಹ

  ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ದರ್ಶನ್ ಅಭಿಮಾನಿಗಳು ಮಾಡುತ್ತಿರುವ ಮಾನವೀಯ ಕಾರ್ಯಕ್ಕೆ ಮನಃಪೂರ್ವಕ ಧನ್ಯವಾದಗಳನ್ನು ಹೇಳಿದ್ದಾರೆ. ದರ್ಶನ್ ಅವರ ಮಾದರಿಯನ್ನೇ ಅಭಿಮಾನಿಗಳು ಅನುಸರಿಸುತ್ತಿದ್ದಾರೆ. ಅವರ ಕಾರ್ಯ ಮೆಚ್ಚುಗೆಗೆ ಅರ್ಹ ಎಂದು ಹೇಳಿದ್ದಾರೆ.

  ಸಚಿವ ಸೋಮಣ್ಣ ಅವರಿಂದಲೂ ಮೆಚ್ಚುಗೆಗಳ ಸುರಿಮಳೆ

  ಸಚಿವ ಸೋಮಣ್ಣ ಅವರಿಂದಲೂ ಮೆಚ್ಚುಗೆಗಳ ಸುರಿಮಳೆ

  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಹ ದರ್ಶನ್ ಅಭಿಮಾನಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಸೋಮಣ್ಣ, ದರ್ಶನ್ ನಮ್ಮ ಕುಟುಂಬ ಸದಸ್ಯರಿದ್ದಂತೆ. ಅವರ ಅಭಿಮಾನಿಗಳು ಮಾಡುತ್ತಿರುವ ಕಾರ್ಯ ಅನುಕರಣನೀಯ, ಅವರಿಗೆ ತಾಯಿ ಚಾಮುಂಡೇಶ್ವರಿ ಆಶೀರ್ವಾದವಿರಲಿ ಎಂದು ಹೇಳಿದ್ದಾರೆ.

  ಸಂದೇಶ ನೀಡಿರುವ ದರ್ಶನ್

  ಸಂದೇಶ ನೀಡಿರುವ ದರ್ಶನ್

  ದರ್ಶನ್ ಅವರು ಸಹ ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಕೆ ಸಂದೇಶಗಳನ್ನು ನೀಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಅವರ ಅಭಿಮಾನಿಗಳು ರಾಜ್ಯದಾದ್ಯಂತ ಹಲವು ಕಡೆ ಸಂಕಷ್ಟಕ್ಕೆ ಈಡಾಗಿರುವವರಿಗೆ ಸಹಾಯ ಮಾಡಿದ್ದಾರೆ.

  English summary
  Actor Darshan's fans helping poor in this corona lock down time. Politicians like V Somanna, Prathap Simha praised their work.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X