For Quick Alerts
  ALLOW NOTIFICATIONS  
  For Daily Alerts

  ಮೂರು ಚಿತ್ರ ನಿರ್ಮಿಸಲಿದ್ದಾರೆ ಪೂಜಾ ಗಾಂಧಿ!

  |
  ಚುನಾವಣೆ ಮುಗಿದ ಬಳಿಕ ಮಳೆ ಹುಡುಗಿ ಪೂಜಾ ಗಾಂಧಿ ಎಲ್ಲಿ ಹೋದರು ಎಂಬ ಪ್ರಶ್ನೆಗೆ ಉತ್ತರ ದೊರಕಿದೆ. ಪೂಜಾ ಗಾಂಧಿ ಮತ್ತೊಮ್ಮೆ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಆದರೆ, ನಟಿಯಾಗಿ ಅಲ್ಲ, ನಿರ್ಮಾಪಕಿಯಾಗಿ. ಮೂರು ಚಿತ್ರಗಳನ್ನು ಪೂಜಾ ನಿರ್ಮಾಣ ಮಾಡುತ್ತಿದ್ದಾರೆ.

  ರಾಯಚೂರಿನ ಚುನಾವಣೆ ಸೋಲಿನ ನಂತರ ಪೂಜಾ ಗಾಂಧಿ ಯಾವ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲವಿತ್ತು. ಅವರು ಒಂದು ಹಾಡಿನಲ್ಲಿ ಕುಣಿದು ಹೋದ ಡೈರೆಕ್ಟರ್ ಸ್ಪೆಷಲ್ ಚಿತ್ರ ಸಹ ಬಿಡುಗಡೆಗೊಂಡಿತು. ಸದ್ಯ ಯಾವ ಚಿತ್ರವನ್ನು ಒಪ್ಪಿಕೊಳ್ಳದ ಪೂಜಾ ಮೂರು ಚಿತ್ರಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

  ಗಾಂಧಿನಗರದ ಮೂಲಗಳ ಮಾಹಿತಿ ಪ್ರಕಾರ ಪೂಜಾ ಕನ್ನಡದ ಚಾನೆಲ್ ವೊಂದರ ಪಾಲುದಾರಿಕೆಯಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಒಂದು ಚಿತ್ರದಲ್ಲಿ ಅವರೇ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಮೂರು ಚಿತ್ರಗಳು ನೈಜ ಘಟನೆಯ ಕುರಿತಾದವು ಎಂಬುದು ಸದ್ಯದ ಮಾಹಿತಿ.

  ಮೊದಲ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ನಾಯಕರಾಗಿ ನಟಿಸುತ್ತಿದ್ದಾರೆ. ಮತ್ತೊಂದು ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಿರೋ. ಮೊದಲು ಪ್ರೇಮ್ ನಟಿಸುತ್ತಿರುವ ಚಿತ್ರ ಸೆಟ್ಟೇರಲಿದೆ. ಚಿತ್ರದ ನಿರ್ದೇಶಕರಾರು ಎಂಬ ಮಾಹಿತಿ ಗೌಪ್ಯವಾಗಿದೆ. ಮೂರು ಸಿನಿಮಾಗಳಿಗೂ ಹೊಸ ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಾರೆ ಎಂಬ ಸುದ್ದಿ ಹಬ್ಬಿದೆ.

  ಎಲ್ಲವೂ ಅಂದುಕೊಡಂತೆ ನಡೆದರೆ ಜುಲೈ ಮೊದಲನೇ ವಾರದಲ್ಲಿ ಪೂಜಾಗಾಂಧಿ ನಿರ್ಮಿಸುವ ಮೊದಲ ಚಿತ್ರ ಸೆಟ್ಟೇರಲಿದೆ. ಆ ಚಿತ್ರದಲ್ಲಿ ಪೂಜಾ ನಾಯಕಿಯಾಗಿ ಅಭಿನಯಿಸುತ್ತಾರೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ಅರ್ಧ ಹಣ ಪೂಜಾ ಗಾಂಧಿ ಅವರದ್ದು, ಉಳಿದ ಹಣ ಕನ್ನಡ ಚಾನೆಲ್ ಹಾಕುತ್ತದೆ.

  ಕನ್ನಡ ನಟಿಯರು ನಿರ್ಮಾಪಕಿಯಾಗಿ ಬದಲಾಗುವುದು ಹೊಸದೇನಲ್ಲ, ರಕ್ಷಿತಾ ಪ್ರೇಮ್ ಮತ್ತು ರಾಧಿಕಾ ಕುಮಾರಸ್ವಾಮಿ ಈಗಾಗಲೇ ನಿರ್ಮಾಪಕಿಯರಾಗಿ ಯಶಸ್ಸುಗಳಿಸಿದ್ದಾರೆ. ಸದ್ಯ ಮಳೆ ಹುಡುಗಿ ಪೂಜಾ ಗಾಂಧಿಯ ಸರದಿ. ಅವರಿಗೂ ಯಶಸ್ಸು ಸಿಗಲಿ ಎಂದು ಹಾರೈಸೋಣ.

  English summary
  Kannada Actress Pooja Gandhi become producer now. Pooja Gandhi will produce Three films. Nenapirali Prem and Srinagar Kitty will hero for Two films. in one film Pooja Gandhi acting as heroine. the first film shooting begins from July month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X