»   » ಒಂಬತ್ತು ಭಾಷೆಗಳಲ್ಲಿ ತೆರೆಕಾಣಲಿದೆ ಕನ್ನಡದ 'ಅಭಿನೇತ್ರಿ'

ಒಂಬತ್ತು ಭಾಷೆಗಳಲ್ಲಿ ತೆರೆಕಾಣಲಿದೆ ಕನ್ನಡದ 'ಅಭಿನೇತ್ರಿ'

Posted By:
Subscribe to Filmibeat Kannada

ಬಹುಶಃ ಪೂಜಾ ಗಾಂಧಿ ಅಭಿನಯದ ಮೊದಲ ಕನ್ನಡ ಸಿನಿಮಾ 'ಮುಂಗಾರು ಮಳೆ'ಗೂ ಇಂತಹ ಪ್ರಚಾರ ಸಿಕ್ಕಿರಲಿಲ್ಲ. ಅಷ್ಟರ ಮಟ್ಟಿಗೆ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಚಿತ್ರ 'ಅಭಿನೇತ್ರಿ'.

ವಿವಾದಗಳಿಂದಲೇ ಎಲ್ಲರ ಮನೆಮಾತಾಗಿರುವ 'ಅಭಿನೇತ್ರಿ' ಇಷ್ಟೊತ್ತಿಗಾಗಲೇ ರಿಲೀಸ್ ಆಗಿ ತಿಂಗಳುಗಳು ಕಳೆದಿರಬೇಕಿತ್ತು. ಒಂದಲ್ಲಾ ಒಂದು ಅಡ್ಡಿ-ಆತಂಕದಿಂದ 'ಅಭಿನೇತ್ರಿ' ಬಿಡುಗಡೆ ದಿನಾಂಕವನ್ನು ಮುಂದೂಡುತ್ತಲೇ ಬಂದಿರುವ ಪೂಜಾ ಗಾಂಧಿ, ಇದೀಗ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.


pooja-gandhi

'ಅಭಿನೇತ್ರಿ' ಮೂಲಕ ನಿರ್ಮಾಪಕಿಯ ಪಟ್ಟಕ್ಕೇರಿರುವ ಪೂಜಾ ಗಾಂಧಿ, ಈಗ ಅದೇ ಚಿತ್ರವನ್ನ ಬರೋಬ್ಬರಿ ಎಂಟು ಭಾಷೆಗಳಲ್ಲಿ ಡಬ್ ಮಾಡಿ, ರಿಲೀಸ್ ಮಾಡುತ್ತಿದ್ದಾರೆ. ಕನ್ನಡದ ಮಟ್ಟಿಗೆ ಇದು ಹೊಸ ದಾಖಲೆ ಮತ್ತು ವಿಭಿನ್ನ ಪ್ರಯೋಗ. [ಕಲ್ಪನಾ-ಪುಟ್ಟಣ್ಣ ಬಗ್ಗೆ 'ಅಭಿನೇತ್ರಿ' ಚಿತ್ರದಲ್ಲೇನಿದೆ..?]


ಇಲ್ಲಿಯವರೆಗೂ ಹಿಂದಿ, ತೆಲುಗು, ತಮಿಳು ಭಾಷೆಗಳಿಗೆ ಕನ್ನಡ ಚಿತ್ರವೊಂದು ಡಬ್ ಆಗುತ್ತಿತ್ತು. ಆದ್ರೆ, ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಪೂಜಾ ಗಾಂಧಿ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಸೇರಿದಂತೆ ಭೋಜ್ ಪುರಿ, ಬೆಂಗಾಲಿ, ಪಂಜಾಬಿ ಮತ್ತು ಮರಾಠಿ ಭಾಷೆಗೂ ಕನ್ನಡದ 'ಅಭಿನೇತ್ರಿ'ಯನ್ನ ಕೊಂಡೊಯ್ಯುತ್ತಿದ್ದಾರೆ.


pooja-gandhi2

ಈ ಎಲ್ಲಾ ಭಾಷೆಗಳಲ್ಲೂ ಡಬ್ ಮಾಡಿಸಿ, 'ಅಭಿನೇತ್ರಿ'ಯನ್ನ ಭಾರತದಾದ್ಯಂತ ಮಿಂಚಿಸುವ ಪ್ಲಾನ್ ಮಾಡಿದ್ದಾರೆ ಪೂಜಾ ಗಾಂಧಿ. ಹಾಗಂತ ಇಲ್ಲಿ ಡಬ್ಬಿಂಗ್ ರೈಟ್ಸ್ ನ ಬೇರೆ ಯಾರೂ ಕೊಂಡುಕೊಂಡಿಲ್ಲ. 'ಅಭಿನೇತ್ರಿ' ಸ್ಟಾರ್ ನಟಿಯ ಕುರಿತ ನೈಜ ಚಿತ್ರವಾದ್ದರಿಂದ ಎಲ್ಲರೂ ನೋಡಲೇಬೇಕು ಅಂತ ಪೂಜಾ ಖುದ್ದು ಇಂಟ್ರೆಸ್ಟ್ ತೆಗೆದುಕೊಂಡು ಡಬ್ಬಿಂಗ್ ಕೆಲಸಕ್ಕೆ ಚಾಲನೆ ನೀಡಿದ್ದಾರೆ.['ಅಭಿನೇತ್ರಿ'ಯಲ್ಲಿ ನನ್ನ ಕಥೆಯೂ ಇದೆ - ಪೂಜಾಗಾಂಧಿ]


ವಿಶೇಷ ಅಂದ್ರೆ, ಕನ್ನಡದ 'ಅಭಿನೇತ್ರಿ'ಗೆ ಪೂಜಾ ಗಾಂಧಿ ಕಂಠದಾನ ಮಾಡಿದ್ದಾರೆ. ಬರೋಬ್ಬರಿ ಒಂದು ತಿಂಗಳು ಕಾಲಾವಕಾಶ ತೆಗೆದುಕೊಂಡು, ಕನ್ನಡದಲ್ಲಿ ಡಬ್ ಮಾಡಿದ್ದಾರಂತೆ ಪೂಜಾ. ['ರಂಗನಾಯಕಿ' ಆಗ್ಬೇಕಿದ್ದ ಪೂಜಾ ಎಲ್ಲಿ ಮರೆಯಾದರು?]


pooja-gandhi3

''ನಾನಿನ್ನೂ ಕನ್ನಡ ಕಲಿಯುತ್ತಿದ್ದೀನಿ. ಡೈಲಾಗ್ ನೀಟಾಗಿ ಬರಬೇಕು. ಹೀಗಾಗಿ ಸ್ವಲ್ಪ ಟೈಮ್ ತಗೊಳ್ತು. ನನ್ನ ಮಾತೃಭಾಷೆ ಪಂಜಾಬಿಯಾಗಿದ್ರೂ, ನನಗೆ ಪಂಜಾಬಿ ಅಷ್ಟೊಂದು ಬರಲ್ಲ. ಆದ್ರೆ, ಪಂಜಾಬಿ ಮತ್ತು ಹಿಂದಿಯಲ್ಲಿ ಡಬ್ ಮಾಡೋಕೆ ಪ್ರಯತ್ನಿಸುತ್ತಿದ್ದೀನಿ'' ಅಂತ ಪೂಜಾ ಗಾಂಧಿ 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿದ್ದಾರೆ.


''ಅಭಿನೇತ್ರಿ ಓರ್ವ ಸೂಪರ್ ಸ್ಟಾರ್ ನಟಿಯ ಲೈಫ್ ಸ್ಟೋರಿ. ಈ ಚಿತ್ರ ಎಲ್ಲರ ಮನಸ್ಸಿಗೆ ಹತ್ತಿರವಾಗುತ್ತೆ. ಹಾಗಾಗಿ ಎಲ್ಲಾ ಭಾಷೆಯಲ್ಲೂ ನಾವೇ ಡಬ್ ಮಾಡೋಣ ಅಂತ ಮುಂದಾಗಿದ್ದೀವಿ. ಪ್ರಯತ್ನ ನಮ್ಮದು, ರಿಸಲ್ಟ್ ಮುಂದೆ ನೋಡೋಣ'' ಅಂತ ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ ಮಳೆ ಹುಡುಗಿ. [ಜನವರಿಯಲ್ಲಿ ಅಭಿನೇತ್ರಿ ಭಾಗ-2 ಶುರು..!?]


ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಿರುವ 'ಅಭಿನೇತ್ರಿ'ಗೆ ಥಿಯೇಟರ್ ಕೊರತೆ ಕಾಡ್ತಿದೆ. ಅದು ಬಗೆಹರಿದರೆ, ಇದೇ ತಿಂಗಳು ನಿಮ್ಮೆಲ್ಲರ ಮುಂದೆ 'ಅಭಿನೇತ್ರಿ' ಬರುವುದು ಪಕ್ಕಾ. (ಫಿಲ್ಮಿಬೀಟ್ ಕನ್ನಡ)

English summary
Actress Pooja Gandhi of Mungaaru Male fame is currently in news for her new venture 'Abhinetri'. Pooja Gandhi, being the producer of the film has decided to dub 'Abhinetri' to 8 languages including Telugu, Tamil, Hindi, Malayalam, Punjabi, Bhojpuri, Bengali and Marathi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada