Don't Miss!
- News
ರಾಜ್ಯದಲ್ಲಿ ಕೊರೊನಾ ಏರಿಕೆ; ಏ.20ಕ್ಕೆ ರಾಜ್ಯಪಾಲರ ನೇತೃತ್ವದಲ್ಲಿ ಸಭೆ
- Sports
ಐಪಿಎಲ್ 2021: ಟಿ20 ಕ್ರಿಕೆಟ್ ವಿಶ್ವ ದಾಖಲೆ ಬರೆದ ಸಿಎಸ್ಕೆ ನಾಯಕ ಎಂಎಸ್ ಧೋನಿ
- Automobiles
2021ರ ಫೋಕ್ಸ್ವ್ಯಾಗನ್ ಪೊಲೊ ಕಾರಿನ ಆಕರ್ಷಕ ಟೀಸರ್ ಬಿಡುಗಡೆ
- Finance
ಚಿನ್ನದ ಬೆಲೆ ಏರಿಕೆ: ಏಪ್ರಿಲ್ 19ರ ಬೆಲೆ ಹೀಗಿದೆ
- Education
Vikas Bank Recruitment 2021: ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸಂಹಾರಿಣಿ' ಅವತಾರದಲ್ಲಿ ಕಂಬ್ಯಾಕ್ ಆದ ಪೂಜಾ ಗಾಂಧಿ
'ಮಳೆ ಹುಡುಗಿ' ಪೂಜಾ ಗಾಂಧಿ ಬಹಳ ದಿನಗಳ ನಂತರ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ. ದಂಡುಪಾಳ್ಯ ಸರಣಿಗಳ ಬಳಿಕ ತೆರೆಯಿಂದ ಮರೆಯಾಗಿದ್ದ ನಟಿ ಪೂಜಾ ಈಗ 'ಸಂಹಾರಿಣಿ' ಅವತಾರದಲ್ಲಿ ಕಂಬ್ಯಾಕ್ ಮಾಡುತ್ತಿದ್ದಾರೆ.
ಹೌದು, ಪೂಜಾ ಗಾಂಧಿ ನಟನೆಯ 'ಸಂಹಾರಿಣಿ' ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಸದ್ಯ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ.
ಹೊಸ ವ್ಯಾಪಾರ ಶುರು ಮಾಡಿದ 'ಜಿಲೇಬಿ' ಹುಡುಗಿ ಪೂಜಾ ಗಾಂಧಿ
2M ಸಿನಿಮಾಸ್ ಸಂಸ್ಥೆಯ ಮುಖಾಂತರ ಶಬರೀಶ್ ಕೆ.ವಿ. ರವರ ನಿರ್ಮಾಣದಲ್ಲಿ ಹಾಗೂ ಜವಾಹರ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಂಹಾರಿಣಿ ಚಿತ್ರದಲ್ಲಿ ಪೂಜಾಗಾಂಧೀ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಟ್ಟ ಸಮಾಜದ ವಿರುದ್ಧದ ರಿವೇಂಜ್ ತೆಗೆದುಕೊಳ್ಳುವ ಪಾತ್ರದಲ್ಲಿ ಹಾಗೂ ಮೊದಲ ಬಾರಿಗೆ ಪೂರ್ಣಮಟ್ಟದ ಆಕ್ಷನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಚಿತ್ರತಂಡ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿ ತೆರೆಗೆ ಬರಲು ಸಿದ್ಧವಾಗಿದೆ. ಸಂಹಾರಿಣಿ ಚಿತ್ರದ ಮೊದಲ ಮೋಷನ್ ಪೋಷ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಈ ಸಿನಿಮಾ ಪೂಜಾಗಾಂಧೀ ರವರಿಗೆ ಮತ್ತೆ ಚಿತ್ರರಂಗದಲ್ಲಿ ಮರು ಜನ್ಮ ಪಡೆಯಲಿದ್ದಾರೆ ಎಂದು ಪಾಸಿಟಿವ್ ಆಗಿ ಖುಷಿಯಾಗಿದ್ದಾರೆ.
ಕನ್ನಡ ನಟಿ ಪೂಜಾ ಗಾಂಧಿ ಆ ಬಾಲಿವುಡ್ ನಟನ ಪತ್ನಿಯಂತೆ.!
ಚಿತ್ರ ಬಹುಶಃ ಸಂಹಾರಿಣಿ ಸಿನಿಮಾ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದ್ದು ಅದರ ಪೂರ್ವಭಾವಿಯಾಗಿ ಚಿತ್ರತಂಡ ಕೆಲಸ ಶುರುಮಾಡಿದೆ.
ಇನ್ನು ಪೂಜಾ ಗಾಂಧಿ ಅವರನ್ನು ಕೊನೆಯದಾಗಿ 2018ರಲ್ಲಿ ತೆರೆಗೆ ಬಂದಿದ್ದ ದಂಡುಪಾಳ್ಯ 3 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುಂಚೆ 2017ರಲ್ಲಿ ದಂಡುಪಾಳ್ಯ 2 ಚಿತ್ರದಲ್ಲಿ ನಟಿಸಿದ್ದರು.