»   » ಮಾಡದ ತಪ್ಪಿಗೆ ಬಳ್ಳಾರಿ ಜೈಲು ಸೇರಿದ್ರು ನಟಿ ಪೂಜಾ ಗಾಂಧಿ!

ಮಾಡದ ತಪ್ಪಿಗೆ ಬಳ್ಳಾರಿ ಜೈಲು ಸೇರಿದ್ರು ನಟಿ ಪೂಜಾ ಗಾಂಧಿ!

Posted By:
Subscribe to Filmibeat Kannada

ಟೈಟಲ್ ನೋಡಿ ಎಲ್ಲರಿಗೂ ಶಾಕ್ ಆಗುವುದರಲ್ಲಿ ಸಂಶಯವಿಲ್ಲ. ಸ್ಯಾಂಡಲ್ ವುಡ್ ನ ಲವ್ಲಿ ಗರ್ಲ್ ಪೂಜಾ ಗಾಂಧಿ ಅಭಿನಯದ 'ದಂಡುಪಾಳ್ಯ-2' ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಇಂತ ಸಂದರ್ಭದಲ್ಲಿ ನಟಿ ಏನಪ್ಪಾ.. ಅನಾಹುತ ಮಾಡಿಕೊಂಡ್ರು ಅಂತ ನೀವೆಲ್ಲಾ ಗಾಬರಿ ಆಗಬಹುದು.[ಪೂಜಾ ಗಾಂಧಿ ಬಂಡವಾಳದಲ್ಲಿ ಸೆಟ್ಟೇರಲಿದೆ ಮೂರು ಹೊಸ ಸಿನಿಮಾಗಳು!]

ಅಲ್ಲದೇ ಇತ್ತೀಚೆಗೆ 'ದಂಡುಪಾಳ್ಯ-2' ಚಿತ್ರದ ವಿಷಯದಲ್ಲಿ ಮೊದಲೇ ಸಂಜನಾ ಅವರು ಪೂಜಾ ಗಾಂಧಿ ಮೇಲೆ ಬೇಸರ ಮಾಡಿಕೊಂಡಿದ್ರು ಅನ್ನೋ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಏನಾದ್ರು ಎಡವಟ್ಟು ಆಗಿದೆಯೇ ಅನ್ನೋ ಅನುಮಾನ ಸಹ ಬರಬಹುದು. ಆದರೆ ಈ ರೀತಿ ಏನೇನೋ ಥಿಂಕ್ ಮಾಡುವ ಮೊದಲು ಮಳೆ ಹುಡುಗಿ ಪೂಜಾ ಗಾಂಧಿ ಬಳ್ಳಾರಿ ಜೈಲು ಸೇರಲು ಕಾರಣವಾದರು ಏನು ಅಂತ ತಿಳಿಯಲು ಮುಂದೆ ಓದಿ..

ಬಳ್ಳಾರಿ ಜೈಲು ಸೇರಿದ ಮಳೆ ಹುಡುಗಿ

ನಟಿ ಪೂಜಾ ಗಾಂಧಿ ಬಳ್ಳಾರಿ ಜೈಲು ಸೇರಿರುವುದು ಯಾವುದೋ ಅಪರಾಧವೆಸಗಿ ಅಲ್ಲ. ಅವರು ಸದ್ಯದಲ್ಲಿ ಚಿತ್ರವೊಂದರಲ್ಲಿ ನಟಿಸುತ್ತಿದ್ದು ಶೂಟಿಂಗ್ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನ ಒಳಗೆ ಎಂಟ್ರಿ ಕೊಟ್ಟಿದ್ದಾರೆ.

ಯಾವುದು ಆ ಸಿನಿಮಾ?

ಕನ್ನಡ ಚಿತ್ರರಂಗದ ಅಭಿನೇತ್ರಿ ಇತ್ತೀಚೆಗಷ್ಟೆ ಅನೌನ್ಸ್ ಮಾಡಿದ್ದ 'ಉತಾಯಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ಪಾದಾರ್ಪಣೆ ಮಾಡಿದ್ದು, ಅಲ್ಲಿನ ಖೈದಿಗಳ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.

ಪೂಜಾ ಗಾಂಧಿ ನಿರ್ಮಾಣದಲ್ಲಿ 'ಉತಾಯಿ'

'ಉತಾಯಿ' ಚಿತ್ರವನ್ನು ಪೂಜಾ ಗಾಂಧಿ ರವರೇ ತಮ್ಮ ಹೊಸ ಪ್ರೊಡಕ್ಷನ್ ಸಂಸ್ಥೆ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟ ಮತ್ತು ನಿರ್ದೇಶಕರಾದ ಜೆ.ಡಿ.ಚಕ್ರವರ್ತಿ ರವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.

5 ದಿನಗಳ ಕಾಲ ಚಿತ್ರೀಕರಣ

ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ 'ಉತಾಯಿ' ಚಿತ್ರೀಕರಣ 5 ದಿನಗಳ ಕಾಲ ನಡೆಯಲಿದ್ದು, ಮಾಡದ ತಪ್ಪಿಗೆ ಜೈಲಿಗೆ ಹೋದಾಗ ನಡೆಯುವ ಘಟನೆಗಳ ಸನ್ನಿವೇಶಗಳನ್ನು ಚಿತ್ರತಂಡ ಸೆರೆಹಿಡಿಯಲಿದೆಯಂತೆ.

'ಉತಾಯಿ' ನಾಯಕ ನಟ ಯಾರು ಗೊತ್ತೇ?

ಚಿತ್ರದಲ್ಲಿ ಪೂಜಾ ಗಾಂಧಿ ಲವರ್ ಗರ್ಲ್ ಆಗಿ ನಟಿಸುತ್ತಿದ್ದು, ನಾಯಕ ನಟನಾಗಿ ನಿರ್ದೇಶಕ ಜೆ.ಡಿ.ಚಕ್ರವರ್ತಿ ರವರೇ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ ಎಂದು ತಿಳಿದಿದೆ.

English summary
Sandalwood Actress Pooja Gandhi Starrer 'Uetahi' film shooting in Ballari Central Jail. This Movie is directs by J.D.Chakravarthy,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada