For Quick Alerts
  ALLOW NOTIFICATIONS  
  For Daily Alerts

  ಕುಡ್ಲದ ಬೆಡಗಿ ಪೂಜಾ ಟಾಲಿವುಡ್ ಎಂಟ್ರಿ!

  By ಜೇಮ್ಸ್ ಮಾರ್ಟಿನ್
  |

  ಮಂಗಳೂರು ಮೂಲದ ಮುಂಬೈ ನಿವಾಸಿ ಪೂಜಾ ಹೆಗ್ಡೆ ಟಾಲಿವುಡ್ ಎಂಟ್ರಿ ಬಹುತೇಕ ಖಚಿತವಾಗಿದೆ. ಕಾಲಿವುಡ್ ನಲ್ಲಿ ಮಿಸ್ಕಿನ್ ನಿರ್ದೇಶನದ ಮುಗಮೂಡಿ ಚಿತ್ರದಲ್ಲಿ ನಟಿಸಿದ್ದ ಪೂಜಾ ಅವರು ಈಗ ಅಕ್ಕಿನೇನಿ ನಾಗಾರ್ಜುನ ಅವರ ಮಗ ನಾಗ ಚೈತನ್ಯ ಜತೆ ನಟಿಸಲಿದ್ದಾರೆ.

  ಮುಗಮೂಡಿ ಚಿತ್ರದಲ್ಲಿ ಕುಡ್ಲದ ಹುಡುಗಿ ನಟನೆಗೆ ವಿಮರ್ಶಕರು, ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು ಇದರಿಂದ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಸಿಕ್ಕಿದೆ. ಗುಂಡೇ ಜಾರಿ ಗಲ್ಲಂಥಾಯಿಂದೆ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಿರ್ದೇಶಕ ವಿಜಯ ಕುಮಾರ್ ಕೊಂಡಾ ಅವರ ಮುಂದಿನ ಚಿತ್ರದಲ್ಲಿ ನಾಗ ಚೈತನ್ಯ ಜತೆ ಪೂಜಾ ಹಾಡಿ ಕುಣಿದು ನಲಿಯಲಿದ್ದಾರೆ.

  ಪೂಜಾ ಬಗ್ಗೆ ಮಾತನಾಡಿದ ನಿರ್ದೇಶಕ ವಿಜಯ್, ನಾವು ಈ ಚಿತ್ರಕ್ಕೆ ಹೊಸಮುಖವನ್ನು ಹುಡುಕುತ್ತಿದ್ದೆವು. ಪೂಜಾ ಅವರ ತಮಿಳು ಚಿತ್ರ ನೋಡಿದೆ ತುಂಬಾ ಇಷ್ಟವಾಯಿತು. ಈ ಚಿತ್ರದಲ್ಲಿ ನಟಿಸುವಂತೆ ಆಕೆಗೆ ಆಫರ್ ನೀಡಿದೆವು. ಎಲ್ಲವೂ ಇನ್ನೂ ಮಾತುಕತೆ ಹಂತದಲ್ಲಿದೆ ಹೀಗಾಗಿ ಅಧಿಕೃತವಾಗಿ ಇನ್ನೂ ಘೋಷಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.

  ಚಿತ್ರದ ಇತರೆ ತಾರಾಗಣದ ಬಗ್ಗೆ ಫಿಕ್ಸ್ ಮಾಡಿಕೊಂಡ ಮೇಲೆ ನವೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸುವ ಸಾಧ್ಯತೆಯಿದೆ ಎಂದು ನಿರ್ದೇಶಕ ವಿಜಯ್ ಹೇಳಿದ್ದಾರೆ.

  ಮಂಗಳೂರು ಮೂಲದ ಪೂಜಾ ಅವರು ಮುಂಬೈನ ಎಂಎಂಕೆ ಕಾಲೇಜಿನಲ್ಲಿ ಓದಿದ್ದಾರೆ. ಭರತನಾಟ್ಯ ಕಲಾವಿದೆ, ರೂಪದರ್ಶಿಯಾಗಿರುವ ಪೂಜಾ ಇಂಗ್ಲೀಷ್, ಹಿಂದಿ, ತುಳು ಭಾಷೆ ಸರಾಗವಾಗಿ ಮಾತನಾಡುತ್ತಾರೆ. ಭುವನ ಸುಂದರಿ ಇಂಡಿಯಾ 2010 ಸ್ಪರ್ಧೆ ಹಾಗೂ ಮಿಸ್ ಇಂಡಿಯಾ ದಕ್ಷಿಣ 2010 ಸ್ಪರ್ಧೆಗಳಲ್ಲಿ ರನ್ನರ್ ಅಪ್ ಆಗಿದ್ದರು.

  ಮಿಸ್ ಇಂಡಿಯಾ ಸೌಥ್ ಉತ್ತಮ ಕೇಶರಾಶಿ ಹಾಗೂ ಮಿಸ್ ಇಂಡಿಯಾ ಟ್ಯಾಲೆಂಟೆಡ್ 2009 ವಿಜೇತೆ. ತಮಿಳಿನಲ್ಲಿ ನಟ ಜೀವಾ ಜತೆ ಮುಗಮೂಡಿ ಚಿತ್ರದಲ್ಲಿ ನಟಿಸಿದ್ದು ಈಗ ಟಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ.

  English summary
  Pooja Hegde , who was crowned as the Miss Universe India 2010 second runner up, made her debut in films with Mysskin's Mugamoodi (Tamil), which garnered rave reviews from film critics and viewers. Now, this Mangalorean beauty is heading to make debut in Telugu film industry. She will be seen romancing young actor Akkineni Naga Chaitanya in his upcoming Tollywood film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X