»   » ನಗರದ ಕುಡುಕರು ಪೂನಂ ಪಾಂಡೆಯನ್ನು ಬೆಚ್ಚಿಬೀಳಿಸಿದ್ರಂತೆ

ನಗರದ ಕುಡುಕರು ಪೂನಂ ಪಾಂಡೆಯನ್ನು ಬೆಚ್ಚಿಬೀಳಿಸಿದ್ರಂತೆ

Posted By:
Subscribe to Filmibeat Kannada

ಸಾಧ್ಯವಾದಷ್ಟು ಕಮ್ಮಿ ಬಟ್ಟೆ ಧರಿಸಿ ಪಡ್ಡೆ ಹೈಕ್ಳ ಕೊರೆಯುವ ಧನುರ್ಮಾಸದ ಚಳಿಯುನ್ನು ಒದ್ದೋಡಿಸುವ ಪೂನಂ ಪಾಂಡೆ ಹೊಸ ವರ್ಷಾಚರಣೆಗೆ ಇದೇ ಮೊದಲ ಬಾರಿಗೆ ಲೈವ್ ಪರ್ಫಾರ್ಮೆನ್ಸ್ ನೀಡಲು ಬೆಂಗಳೂರಿಗೆ ಬಂದಿದ್ದರು. (ಡಿ.31ರ ರಾತ್ರಿ ಬೆಂಗಳೂರಲ್ಲಿ ಪೂನಂ ಏರಿಸಲಿದ್ದಾಳೆ ನಶಾ)

ನಗರದ ಜೆ ಪಿ ನಗರ 9ನೇ ಹಂತದಲ್ಲಿರುವ (ಅಂಜನಾಪುರ, ಕನಕಪುರ ರಸ್ತೆ) ಕ್ಯಾಪಿಟಲ್ ಕ್ಲಬ್ ರಿಸಾರ್ಟಿನಲ್ಲಿ ಡಿಸೆಂಬರ್ 31ರಂದು ಸಂಜೆ ಏಳೂವರೆಗೆ ಪೂನಂ ಪಾಂಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕುಣಿಯಲು ಪೂನಂ ಪಾಂಡೆ ಒಂದು ಕೋಟಿ ಪಡೆದಿದ್ದರೆನ್ನುವುದು ಸುದ್ದಿಯಿತ್ತು.

ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ತನಗಾದ ಕಹಿ ಘಟನೆಯನ್ನು ಪೂನಂ ಪಾಂಡೆ ಖಾಸಗಿ ಪತ್ರಿಕೆಯೊಂದಕ್ಕೆ ತೆರೆದಿಟ್ಟಿದ್ದಾರೆ. ಅಲ್ಲದೇ, ಇನ್ನು ಮುಂದೆ ಯಾವ ಕಾರಣಕ್ಕೂ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ನ್ಯೂಇಯರ್ ರೆಸೊಲ್ಯುಷನ್ ತೆಗೆದು ಕೊಂಡಿದ್ದಾರೆ.

Poonam Pandey chased by drunken mob in Bangalore

ಬೆಂಗಳೂರು ಐಷಾರಾಮಿ ರಿಸಾರ್ಟಿನಲ್ಲಿ ಹೊಸ ವರ್ಷಾಚರಣೆಯಂದು ನಡೆದಿದ್ದೇನು ಎನ್ನುವುದನ್ನು ಪೂನಂ ಪಾಂಡೆ ವಿವರಿಸಿದ್ದು ಹೀಗೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ದೊಡ್ಡ ಮೊತ್ತದ ಹಣದ ಮಾತುಕತೆಯಾಗಿತ್ತು. ಕಾರ್ಯಕ್ರಮ ಆರಂಭವಾಗಿ ಕೇವಲ ಹತ್ತು ನಿಮಿಷಗಳಾಗಿದ್ದವು.

ನನಗೆ ರಿಸಾರ್ಟಿನಲ್ಲಿ ಉತ್ತಮ ಭದ್ರತೆಯನ್ನು ಒದಗಿಸಲಾಗಿತ್ತು. 15 ರಿಂದ 20 ಬೌನ್ಸರ್ ಮತ್ತು ಸೆಕ್ಯೂರಿಟಿ ವ್ಯವಸ್ಥೆಯನ್ನು ನೀಡಲಾಗಿತ್ತು. ಆದರೆ ಪಾನಮತ್ತರಾಗಿದ್ದ ಯುವಕರ ಗುಂಪೊಂದು ವೇದಿಕೆಯ ಮುಂದೆ ನನ್ನ ಜೊತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು.

ಕೊನೆ ಕೊನೆಗೆ ಬೌನ್ಸರ್ ಮತ್ತು ಸೆಕ್ಯೂರಿಟಿಗಳಿಗೂ ಅವರನ್ನು ನಿಯಂತ್ರಿಸಲಾಗಲಿಲ್ಲ. ನನ್ನ ಕಾರ್ಯಕ್ರಮ ಮುಗಿಯುತ್ತಿದ್ದಂತೇ ವೇದಿಕೆಯನ್ನೇ ಅವರು ಹತ್ತಿದರು. ಅವರ ವರ್ತನೆ ನನಗೆ ಭಯ ಹುಟ್ಟಿಸಿತು.

ಅಷ್ಟರಲ್ಲೇ ಹುಷಾರಾದ ನಾನು ವೇದಿಕೆಯಿಂದ ಕೆಳಗಿಳಿದು ನನಗೆ ನೀಡಲಾಗಿದ್ದ ಕೊಠಡಿ ಕಡೆಗೆ ಓಡಲಾರಂಭಿಸಿದೆ. ಪಾನಮತ್ತ ಯುವಕರು ಕೊಠಡಿಯ ವರೆಗೂ ನನ್ನನ್ನು ಹಿಂಬಾಲಿಸಿ ಕೊಂಡು ಬಂದರು. ನನ್ನ ಜೀವನದಲ್ಲಿ ಅಷ್ಟು ಜೋರಾಗಿ ಎಂದೂ ನಾನು ಓಡಿಲ್ಲ,

ಕೊನೆಗೆ ಸೆಕ್ಯೂರಿಟಿ ಮತ್ತು ಬೌನ್ಸರುಗಳು ಹರಸಾಹಸ ಪಟ್ಟು ಅವರನ್ನು ಹೊರಕ್ಕೆ ಎಳೆದು ಕೊಂಡು ಹೋದರು. ಇನ್ನು ಮುಂದೆ ಇಂತಹ ಪಾರ್ಟಿಯಲ್ಲಿ ನಾನೆಂದೂ ಭಾಗವಹಿಸುವುದಿಲ್ಲ ಎಂದು ಪೂನಂ ಪಾಂಡೆ ತನ್ನ ಭಯಾನಕ ಅನುಭವವನ್ನು ಬಿಚ್ಚಿಟ್ಟರು.

ಪಡ್ಡೆಗಳ ಹೃದಯ ಸಿಂಹಾಸನಕ್ಕೆ ಕಿಚ್ಚು ಹಚ್ಚುತ್ತಿದ್ದ ಪೂನಂ ಪಾಂಡೆ ಕುಡುಕರಿಂದ ನಗರದಲ್ಲಿ ಬೆಚ್ಚಿಬಿದ್ದ ಪರಿಯಿದು.

English summary
Poonam Pandey, who showed her dance moves on New Year's eve party was reportedly chased by a group of drunken men. The actress was in a club, located near Anjanapura, Kanakpura main road in Bangalore city.
Please Wait while comments are loading...