Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಸಿಂಹ ಹಸ್ತ' ತಂಡದಿಂದ ಬಡ ರೋಗಿಗಳಿಗೆ ಸಹಾಯ ಹಸ್ತ
ಬರೋಬ್ಬರಿ 25 ಲಕ್ಷ ರೂಪಾಯಿ ಖರ್ಚು ಮಾಡಿ ಅದ್ಧೂರಿ ಆಡಿಯೋ ರಿಲೀಸ್ ಸಮಾರಂಭ ಮಾಡುವ ಬದಲು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ನಿರ್ಧಾರ ಮಾಡಿ 'ಸಿಂಹ ಹಸ್ತ' ಕಾರ್ಯಕ್ರಮವನ್ನು ರೂಪಿಸಿದವರು 'ನಾಗರಹಾವು' ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ.
ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಆದರ್ಶವನ್ನು ಪಾಲಿಸುತ್ತಾ, ಅವರ ಹೆಸರಿನಲ್ಲಿ ಒಂದು ಅರ್ಥ ಪೂರ್ಣ ಕಾರ್ಯಕ್ರಮ ಮಾಡಲು ಮುಂದಾದ ಸಾಜಿದ್ ಖುರೇಶಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರಕ ಕಾಯಿಲೆಗಳಿಂದ ನರಳುತ್ತಿರುವ, ಹಣ ಇಲ್ಲದೆ ಪರದಾಡುತ್ತಿರುವ ಬಡ ರೋಗಿಗಳಿಗೆ 25 ಲಕ್ಷ ರೂಪಾಯಿ ಕೊಡಲು ಮನಸ್ಸು ಮಾಡಿದ್ದರು. [ಡಾ.ವಿಷ್ಣುವರ್ಧನ್ ಹೆಸರಿಗೆ ಅಕ್ಷರಶಃ ಶೋಭೆ ತರುವ ಕೆಲಸ ಇದು.!]
ಅದರಂತೆ, ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳನ್ನು ಗುರುತಿಸುವ ಕೆಲಸ 'ಸಿಂಹ ಹಸ್ತ' ತಂಡದ್ದಾಗಿತ್ತು. ಮುಂದೆ ಓದಿ....

250ಕ್ಕೂ ಹೆಚ್ಚು ರೋಗಿಗಳಿದ್ದರು
ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿ ತೀರಾ ಕಷ್ಟದಲ್ಲಿ ಇರುವ, ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದ 250ಕ್ಕೂ ಹೆಚ್ಚು ರೋಗಿಗಳನ್ನು 'ಸಿಂಹ ಹಸ್ತ' ತಂಡ ಗುರುತಿಸಿತ್ತು. ಅದರಲ್ಲಿ 25 ರೋಗಿಗಳಿಗೆ ನಿರ್ಮಾಪಕ ಸಾಜಿದ್ ಖುರೇಶಿ ತಲಾ ಒಂದು ಲಕ್ಷ ರೂಪಾಯಿ ನೀಡಲಿದ್ದಾರೆ. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]

ಮೊದಲ ಪಟ್ಟಿ ಅಂತಿಮ
25 ರೋಗಿಗಳ ಪೈಕಿ ಮೊದಲ ಹಂತವಾಗಿ 10 ರೋಗಿಗಳನ್ನು ನಿರ್ಮಾಪಕ ಸಾಜಿದ್ ಖುರೇಶಿ ಅಂತಿಮಗೊಳಿಸಿದ್ದಾರೆ. [ಡಾ.ವಿಷ್ಣು 'ನಾಗರಹಾವು' ನೋಡಲು ತುದಿಗಾಲಲ್ಲಿ ನಿಂತಿರುವ 'ಸಿಂಗಂ' ಸೂರ್ಯ]

ಇವರೇ ಅವರು..
ನಾನಾ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವ, ಆರ್ಥಿಕ ಸಂಕಷ್ಟದಲ್ಲಿ ಇರುವ ಸೌಮ್ಯ, ವರ್ಷ, ಪ್ರಕಾಶ್, ಕಿರಣ್, ಗೌತಮ್, ಪುಷ್ಪ, ಹನುಮಂತಿ, ಅಂಬಿಕಾ, ಪಾರ್ವತಮ್ಮ ಹಾಗೂ ಶ್ರೀನಿವಾಸ್ ರವರಿಗೆ 'ನಾಗರಹಾವು' ಚಿತ್ರತಂಡ ಸಹಾಯ ಹಸ್ತ ಚಾಚಿದೆ.

ಇನ್ನು ನಾಲ್ಕು ದಿನಗಳಲ್ಲಿ 15 ಜನರ ಪಟ್ಟಿ ಅಂತಿಮ
'ನಾಗರಹಾವು' ಆಡಿಯೋ ರಿಲೀಸ್ ದಿನಾಂಕದ ಒಳಗಾಗಿ ಉಳಿದ 15 ರೋಗಿಗಳ ಪಟ್ಟಿ ಅಂತಿಮವಾಗಲಿದೆ.

ಆಗಸ್ಟ್ 14 ರಂದು ಹಣ ವಿತರಣೆ
ಆಗಸ್ಟ್ 14 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುವ 'ನಾಗರಹಾವು' ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಒಟ್ಟು 25 ಮಂದಿಗೆ ತಲಾ 1 ಲಕ್ಷ ರೂಪಾಯಿ ಹಣ ವಿತರಣೆ ಮಾಡಲಿದ್ದಾರೆ ನಿರ್ಮಾಪಕ ಸಾಜಿದ್ ಖುರೇಶಿ. ['ನಾಗರಹಾವು' ಬಗ್ಗೆ 'ನಾಗಿಣಿ' ರಮ್ಯಾ ಉದುರಿಸಿದ ಮಾತಿನ ಮುತ್ತು]

ನೀವೂ ಸಹಾಯ ಮಾಡಬಹುದು
'ನಾಗರಹಾವು' ಚಿತ್ರತಂಡ ರೂಪಿಸಿರುವ 'ಸಿಂಹ ಹಸ್ತ' ಕಾರ್ಯಕ್ರಮದ ಅಡಿ ನೀವೂ ಕೂಡ ಬಡ ರೋಗಿಗಳಿಗೆ ನಿಮ್ಮ ಕೈಯಲ್ಲಾದ ಸಹಾಯ ಮಾಡಬಹುದು.

ಸಹಾಯ ಮಾಡುವುದು ಹೇಗೆ.?
ನಿಮಗೆ ಸಹಾಯ ಮಾಡುವ ಮನಸ್ಸು ಇದ್ದರೆ, ಕೆಳಕಂಡ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ...
Account Name : SIMHA HASTHA (Current ACC)
Bank Name : DCB Bank
Account Number : 07121300000480
IFSC CODE : DCBL0000071
Branch Name : Rajaji Nagar, Bengaluru
Number - +91 8197269231