For Quick Alerts
  ALLOW NOTIFICATIONS  
  For Daily Alerts

  ರಮೇಶ್ ಅರವಿಂದ್ ಜೊತೆ ಪೈಪೋಟಿಗೆ ನಿಂತ ಧನಂಜಯ್

  |

  ನಟ ರಮೇಶ್ ಅರವಿಂದ್ ಗೆ ಡಾಲಿ ಧನಂಜಯ್ ಪೈಪೋಟಿ ನೀಡಲು ಸಿದ್ಧವಾಗಿದ್ದಾರೆ. ಇದೇ ತಿಂಗಳು ಇಬ್ಬರ ನಡುವೆ ಸ್ಪರ್ಧೆ ಏರ್ಪಡುತ್ತಿದೆ.

  ಒಂದೇ ದಿನ ಇಬ್ಬರು ನಟರ ಸಿನಿಮಾಗಳು ಬರುವುದು ಪಕ್ಕಾ ಆಗಿದೆ. ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್' ಸಿನಿಮಾ ಮತ್ತು 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ಫೆಬ್ರವರಿ 21 ರಂದು ರಿಲೀಸ್ ಆಗುತ್ತಿವೆ.

  ಶಿವರಾತ್ರಿ ಹಬ್ಬದ ವಿಶೇಷವಾಗಿ ಈ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಅದೇ ದಿನ ಇನ್ನು ಹೆಚ್ಚಿನ ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಫೆಬ್ರವರಿಯಲ್ಲಿ ರಿಲೀಸ್ ಆಗುವ ಸಿನಿಮಾಗಳ ಸಂಖ್ಯೆ ಬಹಳ ದೊಡ್ಡದಿದೆ.

  'ಶಿವರಾಜಿ ಸುರತ್ಕಲ್' ಸಿನಿಮಾ ಟ್ರೇಲರ್ ನಿನ್ನೆ (ಜನವರಿ 07) ಬಿಡುಗಡೆಯಾಗಿದೆ. ಟ್ರೇಲರ್ ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದ ಕ್ವಾಲಿಟಿ, ಸಸ್ಪೆನ್ಸ್ ಅಂಶಗಳು ತುಂಬ ಚೆನ್ನಾಗಿದೆ. ಆಕಾಶ್ ಶ್ರೀವತ್ಸ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

  'ಪಾಪ್ ಕಾರ್ನ್ ಮಂಕಿ ಟೈಗರ್' ಸೂರಿ ನಿರ್ದೇಶನದ ಸಿನಿಮಾ. ಧನಂಜಯ್, ನಿವೇದಿತಾ, ಅಮೃತ ಐಯ್ಯಂಗಾರ್, ಸಪ್ತಮಿ ಸಿನಿಮಾದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತದ ಹಾಡು ಹಿಟ್ ಆಗಿದೆ.

  'ಪಾಪ್ ಕಾರ್ನ್ ಮಂಕಿ ಟೈಗರ್' ಪಕ್ಕಾ ಮಾಸ್, ಸೂರಿ ಸ್ಟೈಲ್ ಸಿನಿಮಾವಾದ್ರೆ, 'ಶಿವರಾಜಿ ಸುರತ್ಕಲ್' ಥ್ರಿಲ್ಲರ್ ಸಿನಿಮಾವಾಗಿದೆ. ಎರಡರಲ್ಲಿ ಪ್ರೇಕ್ಷಕರ ಪ್ರೀತಿ ಯಾರಿಗೆ ಸಿಗುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Popcorn Monkey Tiger and Shivaji Surathkal movie will be releasing on february 21st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X