»   » ಡಾ. ರಾಜಕುಮಾರ್ ಜೀವನದಲ್ಲಿ ಶಿಸ್ತು ರೂಢಿಸಿಕೊಂಡಿದ್ದು ಹೇಗೆ?

ಡಾ. ರಾಜಕುಮಾರ್ ಜೀವನದಲ್ಲಿ ಶಿಸ್ತು ರೂಢಿಸಿಕೊಂಡಿದ್ದು ಹೇಗೆ?

Posted By:
Subscribe to Filmibeat Kannada

ಬಂಗಾರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಡಾ. ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿದ್ದ ಸಂದರ್ಭ. ವಿಧಾನಸೌಧದ ಮುಂಭಾಗದಲ್ಲಿ ನಡೆದ ಈ ಕಾರ್ಯಕ್ರಮವನ್ನು ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು.

ಪ್ರಶಸ್ತಿ ಸ್ವೀಕರಿಸಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ರಾಜಕುಮಾರ್, ಇಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿರುವ ನಿಮ್ಮಲ್ಲಿ ಯಾರಾದರೂ ದೇವರನ್ನು ಕಂಡಿದ್ದೀರಾ ಎನ್ನುವ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರ ಅಭಿಮಾನಿಗಳಿಂದ ಬರುತ್ತೆ. ಅದಕ್ಕೆ ರಾಜ್ ಪ್ರತಿಕ್ರಿಯಿಸುತ್ತಾ, ನಾನು ದೇವರನ್ನು ನೋಡಿದ್ದೇನೆ. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]

Power Star Puneeth Rajkumar remembering Dr. Rajkumar's discipline in life

ಎಲ್ಲಿ ಅಂದರೆ, ನನ್ನೆದುರು ಇಷ್ಟು ಅಗಾಧ ಸಂಖ್ಯೆಯಲ್ಲಿ ಸೇರಿರುವ ನೀವೇ ನನ್ನ ಪಾಲಿನ ದೇವರು, ಇದಕ್ಕಿಂತ ದೊಡ್ಡ ಸೌಭಾಗ್ಯ ನೀವು ಬೆಳೆಸಿರುವ ಈ ಕಲಾವಿದನಿಗೆ ಬೇಕೇ? ಇದು ಕನ್ನಡದ ಮೇರುನಟ ಅಣ್ಣಾವ್ರು ಅಭಿಮಾನಿಗಳನ್ನು ಕಾಣುತ್ತಿದ್ದ ರೀತಿ. (ಪಿ ಬಿ ಶ್ರೀನಿವಾಸ್ ಹಾಡು ನಿಂತಿದ್ದು ಯಾಕೆ)

ಏಪ್ರಿಲ್ 24, 2015 ವರನಟ ಡಾ. ರಾಜಕುಮಾರ್ ಅವರ 86ನೇ ಹುಟ್ಟಿದ ಹಬ್ಬ. ಅಪ್ಪಾಜಿಯವರು ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡಿದ್ದು ಹೇಗೆ? ಅವರ ಪುತ್ರ ಪುನೀತ್ ರಾಜಕುಮಾರ್ ಅವರ ಉತ್ತರ ಹೀಗಿದೆ..

ನನ್ನ ತಂದೆ ಮತ್ತು ತಾಯಿ ಬಹಳ ಶಿಸ್ತಿನ ವ್ಯಕ್ತಿಗಳು. ಅದರಲ್ಲೂ ನನ್ನ ತಂದೆಗೆ ಶಿಸ್ತು ಉಸಿರಾಗಿತ್ತು. ಅವರೇ ನನಗೆ ಜೀವನದಲ್ಲಿ ನಿಜವಾದ ಅರ್ಥದಲ್ಲಿ ಶಿಸ್ತು, ಸಾಮಾಜಿಕ ಹೊಣೆ ಮತ್ತು ಜೀವನದ ಮೌಲ್ಯಗಳನ್ನು ಕಡ್ಡಾಯವಾಗಿ ಕಲಿಸಿಕೊಟ್ಟರು ಎಂದು ಅಪ್ಪಾಜಿ, ಅವರ ತಂದೆ ತಾಯಿಯ ಬಗ್ಗೆ ನನ್ನಲ್ಲಿ ಹೇಳುತ್ತಿದ್ದರು ಎಂದು ಪುನೀತ್ ಸ್ಮರಿಸಿಕೊಳ್ಳುತ್ತಾರೆ.

ಅಪ್ಪಾಜಿಗೆ ತಾತ ಅಜ್ಜಿಯ ಮೇಲೆ ಬಹಳ ಗೌರವ ಹಾಗೂ ಭಕ್ತಿ. ಇವತ್ತು ನಾನು ಏನು ಆಗಿರುವೆನೋ ಅದೆಲ್ಲಾ ನನ್ನ ಮಾತಾಪಿತೃಗಳ ಆಶೀರ್ವಾದದ ಫಲ. ಅವರು ನನಗಿತ್ತ ಮಾರ್ಗದರ್ಶನ, ಕಲಿಸಿದ ಸದ್ವರ್ತನೆ, ತಿಳುವಳಿಕೆ ಮತ್ತು ಹಿತೋಪದೇಶಗಳನ್ನು ನಾನೆಂದಿಗೂ ಮರೆಯಲಾರೆ ಎಂದು ಅಪ್ಪಾಜಿ ತನ್ನ ತಂದೆ ತಾಯಿಯ ಬಗ್ಗೆ ಗೌರವದ ಮಾತನ್ನಾಡುತ್ತಿದ್ದರು ಎಂದು ಪುನೀತ್, ರಾಜಕುಮಾರ್ ಶಿಸ್ತಿನ ಜೀವನದ ಬಗ್ಗೆ ಮಾತನ್ನಾಡುತ್ತಾರೆ.

English summary
Kannada matinee idol, legendary actor, Dadasaheb Phalke Award winner late Dr. Rajkumar is well known for leading disciplined life. Well, how he imbibed the discipline which moulded his personality?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada