»   » ಅಂದು ಅಪ್ಪು ಚಿತ್ರದಲ್ಲಿ ಉಪ್ಪಿ, ಇಂದು ಉಪ್ಪಿ ಚಿತ್ರದಲ್ಲಿ ಅಪ್ಪು

ಅಂದು ಅಪ್ಪು ಚಿತ್ರದಲ್ಲಿ ಉಪ್ಪಿ, ಇಂದು ಉಪ್ಪಿ ಚಿತ್ರದಲ್ಲಿ ಅಪ್ಪು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಾಯಕರು ಇನ್ನೊಬ್ಬ ನಾಯಕರ ಚಿತ್ರಕ್ಕೆ ಹಾಡು ಹಾಡುವ ಮೂಲಕ ಅಥವಾ ಚಿತ್ರ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಚಿತ್ರೋದ್ಯಮದ ದೃಷ್ಠಿಯಲ್ಲಿ ಉತ್ತಮ ಬೆಳವಣಿಗೆ.

ಸುದೀಪ್ ಮತ್ತು ಶಿವಣ್ಣ ನಡುವೆ ಏನೂ ಸರಿಯಿಲ್ಲವಂತೆ, ಎನ್ನುವ ಸುದ್ದಿಗೆ ಇಬ್ಬರೂ ನಟರು ಸ್ಪಷ್ಟೀಕರಣ ನೀಡಿದ್ದಾಗಿದೆ, ರನ್ನ ಚಿತ್ರವನ್ನು ರಾಕಿಂಗ್ ಸ್ಟಾರ್ ಯಶ್ ವೀಕ್ಷಿಸಿದ್ದೂ ಆಗಿದೆ. (ಕಂಬಿ ಎಣಿಸುತ್ತಿದ್ದಾರೆ ಪವರ್ ಸ್ಟಾರ್)

ಪುನೀತ್, ಸುದೀಪ್, ಗಣೇಶ್, ಉಪೇಂದ್ರ, ಶರಣ್ ಹೀಗೆ ಈ ನಾಯಕರುಗಳು ತಮ್ಮ ಅಭಿನಯದ ಚಿತ್ರಗಳ ಹೊರತಾಗಿಯೂ ಬೇರೆ ನಾಯಕರ ಚಿತ್ರಕ್ಕೆ ಕ್ಯಾಮೋ ರೋಲಿನಲ್ಲಿ ಅಥವಾ ಗಾಯಕರಾಗಿ ಗುರುತಿಸಿದ್ದುಂಟು.

ನಾಯಕ ನಟನಾಗಿ ಅಪ್ಪು ಆಲಿಯಾಸ್ ಪುನೀತ್ ರಾಜಕುಮಾರ್ ಅಭಿನಯದ ಚೊಚ್ಚಲ 'ಅಪ್ಪು' ಚಿತ್ರದ ತಾಲಿಬಾನ್ ಅಲ್ಲಾ ಅಲ್ಲಾ ಹಾಡಿಗೆ ಸಾಹಿತ್ಯ ಬರೆದಿದ್ದದ್ದು ಉಪೇಂದ್ರ. ಆ ಹಾಡು ಯಾವ ಮಟ್ಟಿಗೆ ಜನಪ್ರಿಯವಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮುಂದೆ ಓದಿ..

ಉಪ್ಪಿ ಚಿತ್ರದಲ್ಲಿ ಅಪ್ಪು

ಅಂದು ಪುನೀತ್ ರಾಜಕುಮಾರ್ ನಾಯಕನಾಗಿ ನಟಿಸಿದ ಚೊಚ್ಚಲ 'ಅಪ್ಪು' ಚಿತ್ರಕ್ಕೆ ಉಪೇಂದ್ರ ಸೂಪರ್ ಹಿಟ್ ಸಾಹಿತ್ಯ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಉಪೇಂದ್ರ ಅವರ ಚೊಚ್ಚಲ ನಿರ್ಮಾಣದ ಉಪ್ಪಿ 2 ಚಿತ್ರದ ಭಾಗವಾಗಿ ಪುನೀತ್ ಕಾಣಿಸಿಕೊಳ್ಳಲಿದ್ದಾರೆ.

ಉಪೇಂದ್ರ ನಿರ್ಮಾಣದ ಚಿತ್ರ

ವರ್ಷದ ಬಹುನಿರೀಕ್ಷಿತ ಉಪ್ಪಿ 2 ಚಿತ್ರದ ಹಾಡೊಂದನ್ನು ಪುನೀತ್ ಹಾಡುವ ಮೂಲಕ ಚಿತ್ರಕ್ಕೆ ಮತ್ತಷ್ಟು ಶಕ್ತಿ ನೀಡಿದ್ದಾರೆ. ಉಪ್ಪಿ 2 ಚಿತ್ರದ ಟೈಟಲ್ ಹಾಡನ್ನು ಪುನೀತ್ ಹಾಡುತ್ತಿರುವುದು ವಿಶೇಷ.

ಟಪ್ಪಾಂಗೋಚಿ ಹಾಡು

ಚಿತ್ರ ತಂಡದ ಪ್ರಕಾರ ಪುನೀತ್ ಹಾಡುವ ಹಾಡು ಪಕ್ಕಾ ಟಪ್ಪಾಂಗೋಚಿ ಹಾಡು. ಈ ಹಾಡಿಗೆ ಖುದ್ದು ಉಪೇಂದ್ರ ಅವರೇ ಸಾಹಿತ್ಯ ಬರೆದಿದ್ದು ಇನ್ನಷ್ಟು ಪ್ಲಸ್ ಪಾಯಿಂಟ್.

ಹಾಡು ಚಿತ್ರದಲ್ಲಿ ಬರುತ್ತೋ? ಗೊತ್ತಿಲ್ಲ

ಪುನೀತ್ ರಾಜಕುಮಾರ್ ಕಂಠಸಿರಿಯಲ್ಲಿ ಬರುವ ಈ ಹಾಡು ಚಿತ್ರದಲ್ಲಿ ಬರುತ್ತೋ ಅಥವಾ ಚಿತ್ರ ಬಿಡುಗಡೆಗೆ ಮುನ್ನ ಪ್ರಮೋಷನಲ್ ಗಾಗಿ ಬಳಸಿಕೊಳ್ಳಲಾಗುತ್ತಾ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ.

ಉಪ್ಪಿ ಮತ್ತು ಪುನೀತ್

ಉಪೇಂದ್ರ ಮತ್ತು ಪುನೀತ್ ಅವಾಗಾವಾಗ ತಮ್ಮ ಅಥವಾ ಬೇರೆ ನಾಯಕರ ಚಿತ್ರದಲ್ಲಿ ಹಾಡುವುದುಂಟು. ಇಬ್ಬರೂ ಶಶಾಂಕ್ ನಿರ್ದೇಶನದ ಕೃಷ್ಣಲೀಲಾ ಚಿತ್ರದ ಹಾಡನ್ನು ಹಾಡಿದ್ದರು.

English summary
Power Star Puneeth Rajkumar sings for Real Star Upendra's upcoming film Uppi 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada