twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸುವುದಿಲ್ಲ, ಆದರೆ ನಿರ್ಮಿಸುತ್ತಾರೆ ಏಕೆ?

    |

    ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಇತಿಹಾಸವನ್ನು ಗಮನಿಸಿದಾಗ ಹಲವು ಸ್ಥಿತ್ಯಂತರಗಳನ್ನು ನೋಡಬಹುದು. ಆರು ತಿಂಗಳ ಮಗುವಾಗಿದ್ದಾಗಲೇ ತೆರೆಯ ಮೇಲೆ ಕಾಣಿಸಿಕೊಂಡವರು ಅವರು. ಅತ್ಯುತ್ತಮ ಬಾಲನಟನಾಗಿ ರಾಷ್ಟ್ರಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡವರು.

    Recommended Video

    ಪುನೀತ್ ರಾಜ್ ಕುಮಾರ್ ಗೆ ದರ್ಶನ್ ಮಾಡಿದ ವಿಷ್ ಹೇಗಿತ್ತು ನೀವೇ ನೋಡಿ | Darshan Wish for Puneeth

    ನಾಯಕನಟನಾಗಿ ಎರಡನೆಯ ಇನ್ನಿಂಗ್ಸ್ ಆರಂಭಿಸಿದ ಬಳಿಕ ಪುನೀತ್ ಸಿನಿಮಾ ಪಯಣ ವಿಭಿನ್ನ ಹಾದಿಯಲ್ಲಿ ಸಾಗಿತ್ತು. ಅದರ ನಡುವೆ ಕೆಲವು ಹೊಸತನಗಳನ್ನು ನೀಡಿದ್ದರೂ ಕಮರ್ಷಿಯಲ್ ಸೂತ್ರದಿಂದ ದೂರ ಸರಿದಿರಲಿಲ್ಲ. ಹಾಗೆಂದು ತಮ್ಮ ಗುರಿಯನ್ನು ಅವರು ಮರೆತಿರಲಿಲ್ಲ ಎನ್ನುವುದಕ್ಕೆ ಅವರ 'ಪಿಆರ್‌ಕೆ ಪ್ರೊಡಕ್ಷನ್ಸ್' ಸಾಕ್ಷಿ. ಪಕ್ಕಾ ಮಾಸ್ ಎಂಟರ್‌ಟೈನ್‌ಮೆಂಟ್ ಸಿನಿಮಾಗಳನ್ನು ಮಾಡುತ್ತಿದ್ದರೂ ಪುನೀತ್, ಅದರಾಚೆಗಿನ ವರ್ಗಗಳನ್ನೂ ಸೆಳೆಯುವ 'ಮಿಲನ', 'ರಾಜಕುಮಾರ' ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ಹಾಗೆಂದು ಅವರು ತಮ್ಮ 'ಸೇಫ್ ಝೋನ್'ನಲ್ಲಿ ಇರಲು ಬಯಸಿಲ್ಲ. ಪಿಆರ್‌ಕೆ ಪ್ರೊಡಕ್ಷನ್ಸ್ ಮೂಲಕ 'ಕವಲುದಾರಿ'ಗೆ ಹೊರಳಿದ್ದಾರೆ. ವಿಭಿನ್ನ ಸಿನಿಮಾಗಳನ್ನು ನೀಡುವ ಅಭಿಲಾಷೆಗೆ ನೀರೆರೆಯುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಪ್ರಯತ್ನಗಳ ಬಗ್ಗೆ ಅವರು ಹೇಳುವುದೇನು?ಮುಂದೆ ಓದಿ...

     2002ರಲ್ಲೇ ಬೇರೆ ನಟರಿಗಾಗಿ ಸಿನಿಮಾ ನಿರ್ಮಿಸಲು ಬಯಸಿದ್ದರು ಪುನೀತ್ 2002ರಲ್ಲೇ ಬೇರೆ ನಟರಿಗಾಗಿ ಸಿನಿಮಾ ನಿರ್ಮಿಸಲು ಬಯಸಿದ್ದರು ಪುನೀತ್

    ಪುನೀತ್ ನಟಿಸುವುದಿಲ್ಲವೇಕೆ?

    ಪುನೀತ್ ನಟಿಸುವುದಿಲ್ಲವೇಕೆ?

    'ಕವಲು ದಾರಿ' ಮತ್ತು 'ಮಾಯಾಬಜಾರ್ 2016' ಪುನೀತ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ನೀಡಿರುವ ವಿಭಿನ್ನ ಪ್ರಯೋಗದ ಚಿತ್ರಗಳು. ನಿರ್ಮಾಪಕನಾಗಿ ಪುನೀತ್ ವಿಭಿನ್ನ ಹಾದಿ ತುಳಿದಿರುವುದನ್ನು ಈ ಸಿನಿಮಾಗಳು ಪ್ರತಿಬಿಂಬಿಸುತ್ತವೆ. ಆದರೆ ಸ್ವತಃ ಪುನೀತ್ ಇಂತಹ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸುವುದಿಲ್ಲವೇಕೆ? ಅವರು ನಟಿಸಿದರೆ ಹೊಸ ಪ್ರಯೋಗಗಳಿಗೆ ಉತ್ತೇಜನ ನೀಡಿದಂತಾಗುತ್ತದೆಯಲ್ಲವೇ ಎಂಬ ಪ್ರಶ್ನೆಗಳಿವೆ. ಇದಕ್ಕೆ ಸ್ವತಃ ಪುನೀತ್ ಸಂದರ್ಶನವೊಂದರಲ್ಲಿ ಉತ್ತರ ನೀಡಿದ್ದಾರೆ.

    ಸ್ಟಾರ್‌ಗಳಿಗೆ ಮಿತಿಗಳಿವೆ

    ಸ್ಟಾರ್‌ಗಳಿಗೆ ಮಿತಿಗಳಿವೆ

    ಪುನೀತ್ ರಾಜ್ ಕುಮಾರ್ ಎಂಬ ಸ್ಟಾರ್ ಎಲ್ಲಾ ಬಗೆಯ ಸಿನಿಮಾಗಳನ್ನು ಮಾಡಲಾರ ಎಂಬ ಮಾತನ್ನು ಪುನೀತ್ ಒಪ್ಪಿಕೊಂಡಿದ್ದಾರೆ. ಹೌದು. ನಾವು ಕೆಲವು ನಿರ್ದಿಷ್ಟ ಸಂಗತಿಗಳಿಗೆ ಸೀಮಿತವಾಗಿರುತ್ತೇವೆ. ಕಮರ್ಷಿಯಲ್ ಸಿನಿಮಾಗಳ ಮೇಲೆ ಸಾಕಷ್ಟು ಹೂಡಿಕೆ ಮಾಡಲಾಗುತ್ತದೆ. ದೊಡ್ಡ ಮೊತ್ತದ ಹೂಡಿಕೆಯಲ್ಲಿ ನೀವು ಸೂಪರ್ ಸ್ಟಾರ್‌ಗೆ ಬೇಕಾದ ಸೋ ಕಾಲ್ಡ್ ಅಂಶಗಳನ್ನು ನೀಡಬೇಕಾಗುತ್ತದೆ ಒಳ್ಳೆಯ ಸಂಗೀತ, ಆಕ್ಷನ್ ಮತ್ತು ಎಮೋಷನ್ ಕೆಲವು ಸಿನಿಮಾಗಳು ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವಂತೆ ಇರಬೇಕು ಎಂದು ಪುನೀತ್ ತಾವು ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸದೆ ಇರುವ ಮಿತಿಯ ಕಾರಣವನ್ನು ವಿವರಿಸಿದ್ದಾರೆ.

    ಪುನೀತ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸ್ಟಾರ್ಸ್: ಯಾರ್ಯಾರ ವಿಶ್ ಹೇಗಿದೆ?ಪುನೀತ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸ್ಟಾರ್ಸ್: ಯಾರ್ಯಾರ ವಿಶ್ ಹೇಗಿದೆ?

    ಪ್ರಯತ್ನ ಮಾಡಿದ ಉದಾಹರಣೆ ಇದೆ

    ಪ್ರಯತ್ನ ಮಾಡಿದ ಉದಾಹರಣೆ ಇದೆ

    ಇದರ ಅರ್ಥ ನಾವು ಪ್ರಯೋಗಗಳನ್ನು ಪ್ರಯತ್ನಿಸುವುದಿಲ್ಲ ಎಂದಲ್ಲ. ಪೃಥ್ವಿ 2010ರಲ್ಲಿ ಬಾಕ್ಸಾಫೀಸ್‌ನಲ್ಲಿ ಚೆನ್ನಾಗಿ ಓಡಿತು. ಮಾಧ್ಯಮ, ಜನರಿಂದ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿತು. ಸಿನಿಮಾ ಮಾಸ್ ಆಡಿಯನ್ಸ್ ಅಲ್ಲದವರಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು ಎಂದು ಅವರು ಹೇಳುತ್ತಾರೆ. 'ಪರಮಾತ್ಮ'ದಂತಹ ವಿಭಿನ್ನ ಕಥೆ, ನಿರೂಪಣೆಯ ಸಿನಿಮಾದಲ್ಲಿ ಪುನೀತ್ ನಟಿಸಿದ್ದರು. ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕಮರ್ಷಿಯಲ್ ಕಥೆಗಳಾಚೆಗಿನ ಪ್ರಯತ್ನಗಳಲ್ಲಿ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ ಎನ್ನುವುದೂ ನಿಜ.

    ಎಲ್ಲ ಭಾಷೆ, ಪ್ರದೇಶದವರೂ ನೋಡುವಂತಾಗಬೇಕು

    ಎಲ್ಲ ಭಾಷೆ, ಪ್ರದೇಶದವರೂ ನೋಡುವಂತಾಗಬೇಕು

    ಪಿಆರ್‌ಕೆ ಅಡಿಯಲ್ಲಿ ನಾವು ಕಂಪೆನಿಯಾಗಿ ಉತ್ತಮ ಕಂಟೆಂಟ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದೇವೆ. ಈಗ ಸಿನಿಮಾ ಡಿಜಿಟಲ್ ಆಗಿ ವಿಭಿನ್ನವಾಗಿ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ. ಎಲ್ಲವೂ ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕಿಲ್ಲ. ಆದರೆ ಸಿನಿಮಾಗಳನ್ನು ಜಗತ್ತಿನಾದ್ಯಂತ ನೋಡುತ್ತಿದ್ದಾರೆ. ನಿಮ್ಮ ಕಂಟೆಂಟ್ ಚೆನ್ನಾಗಿದ್ದರೆ, ನಿಮ್ಮ ದೇಶ, ನಿಮ್ಮ ಪ್ರಾದೇಶಿಕತೆ ಬಯಸುವುದನ್ನು ನೀವು ಮಾಡುತ್ತಿದ್ದರೆ, ಮತ್ತೊಂದು ಪ್ರದೇಶ ಅಥವಾ ಮತ್ತೊಂದು ದೇಶದ ಜನರು ಬಂದು ನಿಮ್ಮ ಸಿನಿಮಾ ನೋಡಿ ಅರ್ಥ ಮಾಡಿಕೊಂಡರೆ, ಮೆಚ್ಚಿದರೆ ಅದನ್ನು ಒಳ್ಳೆಯ ಸಿನಿಮಾ ಎಂದೇ ಹೇಳಬಹುದು ಎಂದು ಪುನೀತ್ ಹೇಳಿದ್ದಾರೆ.

    ಗೆಲ್ಲುವ ಟ್ರಿಕ್ ಗೊತ್ತಾಗಬೇಕು

    ಗೆಲ್ಲುವ ಟ್ರಿಕ್ ಗೊತ್ತಾಗಬೇಕು

    ಒಳ್ಳೆಯ ಸಿನಿಮಾ, ಸಾಮಾಜಿಕ ಮೌಲ್ಯ, ಜನರು ನೋಡುವಂತೆ ಅವರನ್ನು ಆಕರ್ಷಿಸುವಂತಿರಬೇಕು. ಅದನ್ನು ನಾನು ಪಿಆರ್‌ಕೆ ಮೂಲಕ ಮಾಡಲು ಪ್ರಯತ್ನಿಸುತ್ತಿದ್ದೇವೆ. ಎಲ್ಲರೂ ಯಶಸ್ವಿ, ಲಾಭದಾಯಕ ಸಿನಿಮಾ ಮಾಡಲು ಬಯಸುತ್ತಾರೆ. ಯಾವುದು ಸೋಲುತ್ತದೆ ಯಾವುದು ಗೆಲ್ಲುತ್ತದೆ ಎಂಬುದು ನಮಗೆ ಗೊತ್ತಿರುವುದಿಲ್ಲ. ನಿರ್ಮಾಪಕರು, ನಿರ್ದೇಶಕರು, ನಟರು ಪ್ರತಿ ಸಿನಿಮಾವನ್ನೂ ಗೆಲ್ಲುವಂತೆ ಮಾಡುವ ಟ್ರಿಕ್ ತಿಳಿದುಕೊಳ್ಳುವಂತಾಗಬೇಕು ಎಂದು ಆಶಿಸುತ್ತೇನೆ ಎಂದಿದ್ದಾರೆ.

    ಕಂಟೆಂಟ್ ಮೇಲೆ ಗಮನ ಹರಿಸಬೇಕು

    ಕಂಟೆಂಟ್ ಮೇಲೆ ಗಮನ ಹರಿಸಬೇಕು

    ಸಿನಿಮಾ ಚೆನ್ನಾಗಿದ್ದರೆ, ಹೊಸ ನಟರೊಂದಿಗೆ ಮಾಡುವ ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಮಾಡಿದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಓಡುತ್ತದೆ. ಸಿನಿಮಾ ನಿರ್ಮಾಣ ಮಾಡುವಾಗ ಹೊಸ ಪೀಳಿಗೆಯ ನಿರ್ದೇಶಕ, ನಟರಿಗೆ ನಿಜಕ್ಕೂ ಅವರು ಮಾಡುವ ಕಂಟೆಂಟ್ ಮೇಲೆ ಗಮನ ಹರಿಸಿ ಸರಿಯಾದ ಸಮಯಕ್ಕೆ ಬಿಡುಗಡೆ ಮಾಡುವುದು ಮುಖ್ಯ.

    ಸಣ್ಣ ಸಿನಿಮಾಗಳಿಗೆ ಕ್ರೌಡ್ ಇಲ್ಲ

    ಸಣ್ಣ ಸಿನಿಮಾಗಳಿಗೆ ಕ್ರೌಡ್ ಇಲ್ಲ

    ವರ್ಷಕ್ಕೆ 60-70ರಷ್ಟಿದ್ದ ಸಿನಿಮಾಗಳು ಇಂದು 120-130 ಸಿನಿಮಾಗಳಿಗೆ ಮುಟ್ಟಿದ್ದೇವೆ. ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳು ತಯಾರಾಗುತ್ತವೆ. ಇದು ಎಲ್ಲ ಭಾಷೆಯ ಸಿನಿಮಾಗಳೊಂದಿಗಿನ ನಮ್ಮ ಸ್ಪರ್ಧೆಯನ್ನು ತೋರಿಸುತ್ತದೆ. ಆದರೆ ಶುಕ್ರವಾರದಿಂದ ಶುಕ್ರವಾರಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಸಣ್ಣ ಸಿನಿಮಾಗಳಿಗೆ ಆ ಕ್ರೌಡ್ ಇರುವುದಿಲ್ಲ. ದೊಡ್ಡ ನಟರಿಗೆ ಜಾಗ ಇದೆ.

    ಸಿನಿಮಾ ದುಬಾರಿಯಾಗುತ್ತಿದೆ

    ಸಿನಿಮಾ ದುಬಾರಿಯಾಗುತ್ತಿದೆ

    ಈಗ ನಿಜಕ್ಕೂ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. 5-6 ಸದಸ್ಯರಿರುವ ಕುಟುಂಬದವರು ವೀಕೆಂಡ್‌ನಲ್ಲಿ ಸಿನಿಮಾ ನೊಡಲು ಬಂದರೆ 2,500-3,500 ರೂ ಖರ್ಚಾಗುತ್ತದೆ. ಇದು ಬಹಳ ದುಬಾರಿ. ಹೀಗಾಗಿ ಸಿನಿಮಾ ಲಕ್ಸುರಿಯಾಗುತ್ತಿದೆ. ಕಂಟೆಂಟ್ ತುಂಬಾ ಒಳ್ಳೆಯದಾಗಿದ್ದರೆ ಜನರು ಬಂದು ನೋಡುತ್ತಾರೆ. ದುಬಾರಿಯಾದ ಕಾರಣ ಬೇರೆ ಕಡೆ ಸಿನಿಮಾ ಲಭ್ಯವಾದಾಗ ಮನೆಯಲ್ಲಿಯೇ ಕುಳಿತು ನೋಡಬಹುದಲ್ಲ ಎಂಬ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಆದರೆ ಸಿನಿಮಾವನ್ನು ಪ್ರೀತಿಸುವ ಜನರು ಹಾಗೆ ಮಾಡುವುದಿಲ್ಲ. ಅವರು ಚಿತ್ರಮಂದಿರಕ್ಕೆ ಬಂದು ನೋಡುತ್ತಾರೆ. ಅಲ್ಲಿ ಕುಳಿತು ಇಡೀ ಅನುಭವ ಸಂತಸವನ್ನು ನೋಡಿ ಸಂಭ್ರಮಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    English summary
    Puneeth Rajkumar says why he is not acting in experimental movies but producing such movies for new actors and directors.
    Tuesday, June 30, 2020, 11:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X