»   » 'ಬಾಹುಬಲಿ-3' ಆಫರ್ ಗೆ ಪ್ರಭಾಸ್ ಕೊಟ್ಟ ಉತ್ತರ ಕೇಳಿ ರಾಣಾ ಕಂಗಾಲು.!

'ಬಾಹುಬಲಿ-3' ಆಫರ್ ಗೆ ಪ್ರಭಾಸ್ ಕೊಟ್ಟ ಉತ್ತರ ಕೇಳಿ ರಾಣಾ ಕಂಗಾಲು.!

Posted By:
Subscribe to Filmibeat Kannada

ತೆಲುಗು ಚಿತ್ರ 'ಬಾಹುಬಲಿ' ವಿಶ್ವಾದ್ಯಂತ ಅಬ್ಬರಿಸಿ, ದಾಖಲೆಗಳನ್ನೆಲ್ಲಾ ಪುಡಿ ಪುಡಿ ಮಾಡಿದೆ. 'ಬಾಹುಬಲಿ' ಮೊದಲ ಭಾಗ ಬಂದಾಗಲು ಅಷ್ಟೇ, 'ಬಾಹುಬಲಿ' ಎರಡನೇ ಭಾಗ ಬಿಡುಗಡೆಯಾದಗಲೂ ಅಷ್ಟೇ ಚಿತ್ರಜಗತ್ತಿನಲ್ಲಿ ಈ ಚಿತ್ರದ್ದೇ ಹವಾ.

'ಬಾಹುಬಲಿ-2' ಚಿತ್ರದ ನಂತರ 'ಬಾಹುಬಲಿ-3' ಚಿತ್ರ ಬರಬಹುದಾ ಎಂಬ ಪ್ರಶ್ನೆಗಳು, ಚರ್ಚೆಗಳು ಹೆಚ್ಚಾಗಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಿರ್ದೇಶಕ ರಾಜಮೌಳಿ ಕೂಡ, ''ಕಥೆ ಸಿದ್ದವಾದರೇ, 'ಬಾಹುಬಲಿ-3' ಬರುವ ಸಾಧ್ಯತೆಯಿದೆ'' ಎಂದು ಹೇಳುವ ಮೂಲಕ ನಿರೀಕ್ಷೆ ಹುಟ್ಟಿಸಿದ್ದರು.

ಈ ಬಗ್ಗೆ ಈಗ ಪ್ರಭಾಸ್ ಕೂಡ ಪ್ರತಿಕ್ರಿಯಿಸಿದ್ದಾರೆ. ಈ ರಿಯಾಕ್ಷನ್ ನೋಡಿ ಬಲ್ಲಾಳದೇವ ರಾಣಾ ದಗ್ಗುಬಾಟಿ ಕೂತಲ್ಲೇ ಶಾಕ್ ಅಗಿದ್ದಾರೆ. ಅಷ್ಟಕ್ಕೂ, ಪ್ರಭಾಸ್ ಏನಂದ್ರು ಅಂತ ಮುಂದೆ ಓದಿ....

'ಬಾಹುಬಲಿ-3' ಚಿತ್ರಕ್ಕೆ ಪ್ರಭಾಸ್ ಗೆ ಆಫರ್!

ತೆಲುಗು ಟಿವಿ ವಾಹಿನಿಯೊಂದರಲ್ಲಿ ರಾಣಾ ದಗ್ಗುಬಾಟಿ ಟಾಕ್ ಶೋ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಬಾಹುಬಲಿ ನಿರ್ದೇಶಕ ಎಸ್.ಎಸ್ ರಾಜಮೌಳಿ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ನಟ ಪ್ರಭಾಸ್ ಗೆ 'ಬಾಹುಬಲಿ-3' ಚಿತ್ರಕ್ಕೆ ಆಫರ್ ನೀಡಿದ್ದಾರೆ.

ರಾಜಮೌಳಿ ಆಫರ್ ಗೆ ಪ್ರಭಾಸ್ ಶಾಕ್.!

ಅಂದ್ಹಾಗೆ, ಈ ಟಾಕ್ ಶೋ ನಲ್ಲಿ ಪ್ರಭಾಸ್ ಭಾಗವಹಿಸಿರಲಿಲ್ಲ. ಕೇವಲ ರಾಜಮೌಳಿ ಮಾತ್ರ ಬಂದಿದ್ದರು. ಈ ವೇಳೆ ಪ್ರಭಾಸ್ ಗೆ ಫೋನ್ ಮಾಡಿದ ರಾಜಮೌಳಿ ''ಹಾಯ್ ಡಾರ್ಲಿಂಗ್ ನಿನ್ನ ಭೇಟಿ ಮಾಡ್ಬೇಕು'' ಎಂದರು. ಅದಕ್ಕೆ ಪ್ರಭಾಸ್ ''ಯಾಕೆ ಡಾರ್ಲಿಂಗ್'' ಎಂದಾಗ, ರಾಜಮೌಳಿ, ''ಬಾಹುಬಲಿ-3 ಬಗ್ಗೆ ಮಾತನಾಡುವುದಕ್ಕೆ ಎಂದರು......ಇದನ್ನ ಕೇಳಿ ಪ್ರಭಾಸ್ ಆಶ್ಚರ್ಯಗೊಂಡರು.

ಪ್ರಭಾಸ್ ಕೊಟ್ಟ ರಿಯಾಕ್ಷನ್ ಏನು?

ನಿರ್ದೇಶಕ ರಾಜಮೌಳಿ ಕೊಟ್ಟ ಆಫರ್ ಗೆ ಪ್ರಭಾಸ್ ಒಂದು ಕ್ಷಣ ಶಾಕ್ ಆಗಿಬಿಟ್ಟರು. ಅದನ್ನ ಅವರದ್ದೇ ಆದ ಆತ್ಮೀಯತೆಯ ರೂಪದಲ್ಲಿ ವ್ಯಕ್ತಪಡಿಸಿದ್ದರು. ಇದನ್ನ ಕೇಳಿದ ನಿರೂಪಕ ರಾಣಾ ದಗ್ಗುಬಾಟಿ ಕೂಡ ಒಂದು ಕ್ಷಣ ದಂಗಾದರು.

ಪ್ರಭಾಸ್ ಕೊಟ್ಟ ರಿಯಾಕ್ಷನ್ ಕೇಳಲು ಈ ಲಿಂಕ್ ಕ್ಲಿಕ್ ಮಾಡಿ

'ಬಾಹುಬಲಿ-3' ಬಂದ್ರು ಬರಬಹುದು...

'ಬಾಹುಬಲಿ-3' ಚಿತ್ರ ಬರಲ್ಲವೆನ್ನುವುದು ಗೊತ್ತಿರುವ ವಿಚಾರ. ಆದ್ರೆ, ಜನರ ನಿರೀಕ್ಷೆ, ಕುತೂಹಲವನ್ನ ನೋಡಿದ ರಾಜಮೌಳಿ ದಿಟ್ಟೆದೆಯಿಂದ 'ಬಾಹುಬಲಿ-3' ಮಾಡಿದ್ರು ಮಾಡಬಹುದು. ಮೊದಲೇ ಅವರ ತಂದೆ ಕಥೆ ಮಾಡಿದ್ರೆ, ನಾನು ರೆಡಿ ಅಂದ್ದಿದ್ದಾರೆ. ಒಂದು ವೇಳೆ ಕಥೆಗಾರ ವಿಜೇಂದ್ರ ಪ್ರಸಾದ್ ಕಥೆ ಬರೆದರೇ ಮುಗಿತು. ಮತ್ತೆ 'ಬಾಹುಬಲಿ'ಯ ಅಬ್ಬರವೇ.

English summary
When Director SS Rajamouli Asked Prabhas About Baahubali-3, His Reaction was Too Funny.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada