»   » ಐವತ್ತರ ಸನಿಹದಲ್ಲಿ ಕನ್ನಡದ ಪ್ರಚಂಡಕುಳ್ಳ: ಅತ್ಯುತ್ತಮ ಚಿತ್ರಗಳು

ಐವತ್ತರ ಸನಿಹದಲ್ಲಿ ಕನ್ನಡದ ಪ್ರಚಂಡಕುಳ್ಳ: ಅತ್ಯುತ್ತಮ ಚಿತ್ರಗಳು

Posted By:
Subscribe to Filmibeat Kannada

ಬಂಗ್ಲೆ ಶಾಮರಾವ್ ದ್ವಾರಕನಾಥ್ ಆಲಿಯಾಸ್ ದ್ವಾರಕೀಶ್ ಜನಿಸಿದ್ದು ಆಗಸ್ಟ್ 19, 1942ರಲ್ಲಿ. ಹುಣಸೂರಿನಲ್ಲಿ ಜನಿಸಿದ ಇವರಿಗೆ 'ದ್ವಾರಕೀಶ್' ಎಂದು ಮರುನಾಮಕಾರಣ ಮಾಡಿದವರು ಸಿ ವಿ ಶಿವಶಂಕರ್ ಅವರು.

ಮೆಕ್ಯಾನಿಕಲ್ ಪದವೀಧರರಾಗಿದ್ದ ದ್ವಾರಕೀಶ್ ಅವರು ಆಟೋಮೋಬೈಲ್ ಅಂಗಡಿ ನಡೆಸುತ್ತಿದ್ದರೂ, ಅವರ ಆಕರ್ಷಣೆ ಬಣ್ಣದ ಲೋಕದ ಮೇಲಿತ್ತು.

ಸಿನಿಮಾದಲ್ಲಿ ಒಂದು ಚಾನ್ಸ್ ಕೊಡಿಯೆಂದು ಕುಟುಂಬಿಕರೂ ಮತ್ತು ಆಗಿನ ಕಾಲದಲ್ಲಿ ಬಹುದೊಡ್ಡ ಹೆಸರಾಗಿದ್ದ ಹುಣಸೂರು ಕೃಷ್ಣಮೂರ್ತಿ ಅವರ ಬೆನ್ನು ಹಿಡಿದಿದ್ದ ದ್ವಾರಕೀಶ್ ಅವರು 1963ರಲ್ಲಿ ಸಿನಿಮಾದಲ್ಲಿ ನಟಿಸಲಾರಂಭಿಸಿದರು.

ಇದುವರೆಗೆ ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ದ್ವಾರಕೀಶ್ ಅವರನ್ನು ಕರ್ನಾಟಕದ ಜನತೆ ಪ್ರೀತಿಯಿಂದ 'ಕುಳ್ಳ' ಎಂದೇ ಗುರುತಿಸಿದ್ದಾರೆ.

1966ರಲ್ಲಿ 'ಮಮತೆಯ ಬಂಧನ' ಚಿತ್ರದ ಮೂಲಕ ದ್ವಾರಕೀಶ್ ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೆ ಮುಂದಾದರು. ಕನ್ನಡ ಸಿನಿಮಾವೊಂದರ ಚಿತ್ರೀಕರಣ ಮೊದಲ ಬಾರಿಗೆ ದೇಶದಿಂದ ಹೊರಕ್ಕೆ ನಡೆಸಿದ ಖ್ಯಾತಿ ದ್ವಾರಕೀಶ್ ಅವರದ್ದು.

ನಿರ್ಮಾಪಕನಾಗಿ ದ್ವಾರಕೀಶ್ ಐವತ್ತರ ಸನಿಹದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ನಿರ್ಮಾಣದ ಮತ್ತು ನಟನೆಯ ಪ್ರಮುಖ ಚಿತ್ರಗಳ ಸ್ಲೈಡ್ ಶೋ...

ಮೇಯರ್ ಮುತ್ತಣ್ಣ

ದ್ವಾರಕೀಶ್ ತನ್ನ ನಿರ್ಮಾಣದ ಎರಡನೇ ಚಿತ್ರದಲ್ಲೇ ಬಹುದೊಡ್ಡ ಹೆಸರು ಪಡೆದರು. 1969ರಲ್ಲಿ ಬಿಡುಗಡೆಯಾದ ಡಾ. ರಾಜ್, ಭಾರತಿ, ಎಂ ಪಿ ಶಂಕರ್, ಬಾಲಕೃಷ್ಣ, ದ್ವಾರಕೀಶ್, ತೂಗುದೀಪ ಶ್ರೀನಿವಾಸ್ ಅಭಿನಯದ 'ಮೇಯರ್ ಮುತ್ತಣ್ಣ' ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು.

ಕುಳ್ಳ ಏಜೆಂಟ್ 000

1972ರಲ್ಲಿ ಬಿಡುಗಡೆಯಾದ ಮತ್ತೊಂದು ಸೂಪರ್ ಹಿಟ್ ಚಿತ್ರ ಕುಳ್ಳ ಏಜೆಂಟ್ 000. ತಾನೇ ನಿರ್ಮಿಸಿ, ನಟಿಸಿದ್ದ ಈ ಚಿತ್ರದಲ್ಲಿ ಉದಯ್ ಕುಮಾರ್, ವಜ್ರಮುನಿ, ಶಕ್ತಿಪ್ರಸಾದ್, ಜ್ಯೋತಿಲಕ್ಷ್ಮಿ ಮುಂತಾದವರ ತಾರಾಗಣವಿತ್ತು.

ಭಾಗ್ಯವಂತರು

ಮತ್ತೊಂದು ಸೂಪರ್ ಹಿಟ್ ಚಿತ್ರ ಭಾಗ್ಯವಂತರು. ರಾಜ್, ಬಿ ಸರೋಜಾದೇವಿ, ಅಶೋಕ್, ರಾಮಕೃಷ್ಣ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 1977ರಲ್ಲಿ ಬಿಡುಗಡೆಯಾಯಿತು.

ಕಿಟ್ಟುಪುಟ್ಟು

1977ರಲ್ಲಿ ಬಿಡುಗಡೆ ಕಂಡ ಮತ್ತೊಂದು ಸೂಪರ್ ಹಿಟ್ ಚಿತ್ರ ಕಿಟ್ಟುಪುಟ್ಟು. ವಿಷ್ಣು, ದ್ವಾರಕೀಶ್, ಮಂಜುಳಾ, ವೈಶಾಲಿ ಕಾಸರವಳ್ಳಿ ಪ್ರಮುಖ ಭೂಮಿಕೆಯಲ್ಲಿದ್ದ ಚಿತ್ರ ದ್ವಾರಕೀಶ್ ವೃತ್ತಿ ಜೀವನಕ್ಕೆ ಬ್ರೇಕ್ ಕೊಟ್ಟ ಚಿತ್ರ.

ಸಿಂಗಾಪುರದಲ್ಲಿ ರಾಜಾಕುಳ್ಳ

ವಿಷ್ಣು, ದ್ವಾರಕೀಶ್ ಜೋಡಿಯ ಮತ್ತೊಂದು ಚಿತ್ರ 1978ರಲ್ಲಿ ಬಿಡುಗಡೆಯಾಯಿತು. ಸಿಂಗಾಪುರದಲ್ಲಿ ಚಿತ್ರದ ಹೆಚ್ಚಿನ ಶೂಟಿಂಗ್ ನಡೆದಿದ್ದ ಈ ಸಿನಿಮಾದ ಇತರ ಪ್ರಮುಖ ಭೂಮಿಕೆಯಲ್ಲಿ ಮಂಜುಳಾ, ಫೆಲಿನಾ, ಲೋಕನಾಥ್, ತೂಗುದೀಪ ಶ್ರೀನಿವಾಸ್ ಮುಂತಾದವರಿದ್ದರು.

ಮಂಕುತಿಮ್ಮ

1980ರಲ್ಲಿ ಬಿಡುಗಡೆಯಾದ ಮಂಕುತಿಮ್ಮ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ದ್ವಾರಕೀಶ್, ಶ್ರೀನಾಥ್, ಪದ್ಮಪ್ರಿಯ, ಮಂಜುಳ, ಸುಧೀರ್ ಮುಂತಾದವರಿದ್ದರು.

ಪ್ರೀತಿ ಮಾಡು ತಮಾಷೆ ನೋಡು

ಶ್ರೀನಾಥ್, ಶಂಕರನಾಗ್, ಮಂಜುಳ, ಪದ್ಮಪ್ರಿಯ, ದ್ವಾರಕೀಶ್, ಪ್ರಮೀಳ ಜೋಷಾಯಿ, ನರಸಿಂಹರಾಜು, ಬಾಲಕೃಷ್ಣ ಮುಂತಾದವರು ಪ್ರಮುಖ ಭೂಮಿಕೆಯಲ್ಲಿದ್ದ ಈ ಸಿನಿಮಾ 1979ರಲ್ಲಿ ಬಿಡುಗಡೆಯಾಗಿತ್ತು.

ನ್ಯಾಯ ಎಲ್ಲಿದೆ

ಶಂಕರನಾಗ್, ಆರತಿ, ಸಂಗೀತ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 1982ರಲ್ಲಿ ಬಿಡುಗಡೆಯಾಗಿತ್ತು.

ಗೆದ್ದಮಗ

ಶಂಕರ್ ನಾಗ್ ದ್ವಿಪಾತ್ರದಲ್ಲಿ ನಟಿಸಿದ್ದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಆರತಿ, ಮಾಧವಿ, ಸಿಲ್ಕ್ ಸ್ಮಿತಾ, ದ್ವಾರಕೀಶ್, ಸುಧೀರ್ ಮುಂತಾದವರಿದ್ದರು. ಈ ಚಿತ್ರ 1983ರಲ್ಲಿ ಬಿಡುಗಡೆಯಾಗಿತ್ತು.

ಗುರುಶಿಷ್ಯರು

ದ್ವಾರಕೀಶ್ ಸಿನಿಮಾ ಜೀವನಕ್ಕೆ ಬಹುದೊಡ್ಡ ಬ್ರೇಕ್ ಕೊಟ್ಟ ಮತ್ತೊಂದು ಚಿತ್ರ ಗುರುಶಿಷ್ಯರು, ಈ ಚಿತ್ರ 1981ರಲ್ಲಿ ಬಿಡುಗಡೆಯಾಗಿತ್ತು. ಕನ್ನಡದ ಹಾಸ್ಯ ಕಲಾವಿದರ ದಂಡೇ ಇರುವ ಈ ಚಿತ್ರದಲ್ಲಿ ವಿಷ್ಣು, ಮಂಜುಳಾ, ದ್ವಾರಕೀಶ್, ಜಯಮಾಲಿನಿ, ಶ್ರೀನಿವಾಸಮೂರ್ತಿ, ಶಿವರಾಂ, ರಾಜಾನಂದ್, ಮುಸುರಿ ಕೃಷ್ಣಮೂರ್ತಿ, ಬಾಲಕೃಷ್ಣ, ಎಂ ಎಸ್ ಉಮೇಶ್ ಮುಂತಾದವರಿದ್ದರು.

ಮನೆ ಮನೆ ಕಥೆ

ವಿಷ್ಣು, ಜಯಚಿತ್ರ, ದ್ವಾರಕೀಶ್, ಕೆ ವಿಜಯಾ ಪ್ರಮುಖ ತಾರಾಗಣದಲ್ಲಿದ್ದ ಈ ಚಿತ್ರ 1981ರಲ್ಲಿ ಬಿಡುಗಡೆಯಾಗಿತ್ತು.

ಪ್ರಚಂಡ ಕುಳ್ಳ

1984ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ವಿಷ್ಣು, ದ್ವಾರಕೀಶ್, ರಾಧಿಕಾ, ಸುದರ್ಶನ್ ಮುಂತಾದವರಿದ್ದರು. ಈ ಚಿತ್ರದ ಮೂಲಕ ಕನ್ನಡಿಗರ ಪಾಲಿಗೆ ದ್ವಾರಕೀಶ್ ಪರ್ಮನೆಂಟ್ 'ಕುಳ್ಳ' ಎಂದೇ ಹೆಸರು ಪಡೆದರು.

ನೀ ಬರೆದ ಕಾದಂಬರಿ

ವಿಷ್ಣು, ಭವ್ಯಾ, ಸಿ ಆರ್ ಸಿಂಹ, ಹೇಮಾ ಚೌಧುರಿ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 1985ರಲ್ಲಿ ಬಿಡುಗಡೆಯಾಗಿತ್ತು.

ನೀ ತಂದ ಕಾಣಿಕೆ

ವಿಷ್ಣು, ಗಿರೀಶ್ ಕಾರ್ನಾಡ್, ಜಯಸುಧಾ, ಸಿ ಆರ್ ಸಿಂಹ, ಮೈಸೂರು ಲೋಕೇಶ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 1985ರಲ್ಲಿ ಬಿಡುಗಡೆಯಾಗಿತ್ತು.

ಆಫ್ರಿಕಾದಲ್ಲಿ ಶೀಲಾ

ಚರಣ್ ರಾಜ್, ಸಹಿಲಾ, ಶ್ರೀನಿವಾಸಮೂರ್ತಿ, ದ್ವಾರಕೀಶ್, ಡಿಸ್ಕೋ ಶಾಂತಿ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 1986ರಲ್ಲಿ ಬಿಡುಗಡೆಯಾಯಿತು.

ಡ್ಯಾನ್ ರಾಜಾ ಡ್ಯಾನ್ಸ್

ವಿನೋದ್ ರಾಜ್ ಮೈನ್ ಸ್ಟ್ರೀಂಗೆ ಬಂದ ಸಿನಿಮಾ. ವಿನೋದ್ ರಾಜ್, ದಿವ್ಯಾ, ಸಂಗೀತಾ, ಪ್ರಣಯರಾಜ, ದೇವರಾಜ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 1987ರಲ್ಲಿ ಬಿಡುಗಡೆಯಾಗಿತ್ತು.

ಶೃತಿ

1990ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಶೃತಿ, ಸುನಿಲ್ ಮುಂತಾದವರಿದ್ದರು.

ರಾಯರು ಬಂದರು ಮಾವನ ಮನೆಗೆ

ವಿಷ್ಣು, ಬಿಂದಿಯಾ, ಡಾಲಿ, ದ್ವಾರಕೀಶ್, ಸಿ ಆರ್ ಸಿಂಹ, ವಜ್ರಮುನಿ ಪ್ರಮುಖ ತಾರಾಗಣದಲ್ಲಿದ್ದ ಈ ಚಿತ್ರ 1993ರಲ್ಲಿ ಬಿಡುಗಡೆಯಾಗಿತ್ತು.

ಆಪ್ತಮಿತ್ರ

ವಿಷ್ಣು, ಸೌಂದರ್ಯ, ರಮೇಶ್, ಪ್ರೇಮಾ, ದ್ವಾರಕೀಶ್, ಅವಿನಾಶ್, ಸತ್ಯಜಿತ್, ಶಿವರಾಮ್ ಪ್ರಮುಖ ಭೂಮಿಕೆಯಲ್ಲಿರುವ ಈ ಬ್ಲಾಕ್ ಬಸ್ಟರ್ ಚಿತ್ರ 2004ರಲ್ಲಿ ಬಿಡುಗಡೆಯಾಗಿತ್ತು.

ವಿಷ್ಣುವರ್ಧನ

ಆರು ವರ್ಷದ ಗ್ಯಾಪ್ ನಂತರ ದ್ವಾರಕೀಶ್ ನಿರ್ಮಾಣದ ಚಿತ್ರ ವಿಷ್ಣುವರ್ಧನ. ಸುದೀಪ್, ಭಾವನಾ, ದ್ವಾರಕೀಶ್, ಪ್ರಿಯಾಮಣಿ, ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರ 2011ರಲ್ಲಿ ಬಿಡುಗಡೆಯಾಗಿತ್ತು.

ಚಾರುಲತ

2012ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಪ್ರಿಯಾಮಣಿ, ಸ್ಕಂದ, ಶರಣ್ಯ ಪೊನ್ನವನ್ ಮುಂತಾದವರಿದ್ದರು.

English summary
Prachanda Kulla of Sandalwood Dwarakish completing 50 years as Producer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada