For Quick Alerts
  ALLOW NOTIFICATIONS  
  For Daily Alerts

  ಕುರುಕ್ಷೇತ್ರದಲ್ಲಿ 'ರವಿಚಂದ್ರನ್'ಗೂ ಇದ್ದಾರೆ ನಾಯಕಿ: ಯಾರು ಈಕೆ?

  |

  ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಆಗಸ್ಟ್ 9 ರಂದು ಪೌರಾಣಿಕ ಚಿತ್ರವನ್ನ ತೆರೆಮೇಲೆ ನೋಡಬಹುದು. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿ ನಟಿಸಿದ್ದಾರೆ.

  ರಿಯಲ್ ಲೈಫ್ ನಲ್ಲೂ ಕೃಷ್ಣನ ಇಮೇಜ್ ಹೊಂದಿರುವ ರವಿಚಂದ್ರನ್ ಗೆ ಕುರುಕ್ಷೇತ್ರ ಚಿತ್ರತಂಡದ ಮೇಲೆ ಒಂದು ವಿಷ್ಯಕ್ಕೆ ಬೇಸರ ಇತ್ತು. ಹೀರೋಯಿನ್ ಗಳ ಹಾಟ್ ಫೆವರೇಟ್ ಆಗಿರುವ ಕ್ರೇಜಿಸ್ಟಾರ್ ಗೆ ಈ ಚಿತ್ರದಲ್ಲಿ ಹೀರೋಯಿನ್ ಕೊಟ್ಟಿಲ್ಲ ಎಂದು ಬೇಸರ ಮಾಡಿಕೊಂಡಿದ್ದರು.

  'ಕುರುಕ್ಷೇತ್ರ'ದ ಈ ವಿಚಾರದ ಬಗ್ಗೆ ರವಿಚಂದ್ರನ್ ಗೆ ಬೇಸರ ಇದೆಯಂತೆ 'ಕುರುಕ್ಷೇತ್ರ'ದ ಈ ವಿಚಾರದ ಬಗ್ಗೆ ರವಿಚಂದ್ರನ್ ಗೆ ಬೇಸರ ಇದೆಯಂತೆ

  ಈ ವಿಷ್ಯವನ್ನ ಪ್ರೆಸ್ ಮೀಟ್ ನಲ್ಲೂ ಹೇಳಿಕೊಂಡಿದ್ದರು ರವಿಚಂದ್ರನ್. ಬಟ್, ಕುರುಕ್ಷೇತ್ರದಲ್ಲಿ ರವಿಚಂದ್ರನ್ ಗೆ ಜೋಡಿ ಇದ್ದಾರೆ. ಯಾರದು?

  ಕೃಷ್ಣ ಇದ್ಮೇಲೆ ರುಕ್ಮಿಣಿ ಇರಬೇಕಲ್ವಾ?

  ಕೃಷ್ಣ ಇದ್ಮೇಲೆ ರುಕ್ಮಿಣಿ ಇರಬೇಕಲ್ವಾ?

  ಶ್ರೀಕೃಷ್ಣನಿಗೆ ಹದಿನಾರು ಸಾವಿರ ಪತ್ನಿಯರು ಇದ್ದರು ಎಂದು ಹೇಳಲಾಗುತ್ತೆ. ಆದ್ರೆ, ಪತ್ನಿ ಎಂದು ಬಂದಾಗ ರುಕ್ಮಿಣಿ ಮತ್ತು ಸತ್ಯಭಾಮೆ ಮೊದಲು ನೆನಪಾಗ್ತಾರೆ. ಕುರುಕ್ಷೇತ್ರ ಸಿನಿಮಾದಲ್ಲಿ ರವಿಚಂದ್ರನ್ ಗೆ ಇವರಿಬ್ಬರಲ್ಲಿ ಒಬ್ಬರನ್ನಾದರೂ ಜೋಡಿಯಾಗಿ ನೀಡಬಹುದಿತ್ತಲ್ವಾ ಎಂದು ಕೇಳಬಹುದು. ಅದಕ್ಕೆ ಅನ್ಸುತ್ತೆ ರವಿಚಂದ್ರನ್ ಅವರಿಗೆ ನಿರಾಸೆ ಮಾಡುವುದು ಬೇಡ ಎಂಬ ಕಾರಣಕ್ಕೆ ರುಕ್ಮಿಣಿಯನ್ನ ನೀಡಿದ್ದಾರೆ.

  'ನಿನ್ನನ್ನ ಬಿಟ್ಟರೇ ಕರ್ನಾಟಕಕ್ಕೆ ಇನ್ನೊಬ್ಬ ದುರ್ಯೋಧನ ಇಲ್ಲ' - ರವಿಚಂದ್ರನ್'ನಿನ್ನನ್ನ ಬಿಟ್ಟರೇ ಕರ್ನಾಟಕಕ್ಕೆ ಇನ್ನೊಬ್ಬ ದುರ್ಯೋಧನ ಇಲ್ಲ' - ರವಿಚಂದ್ರನ್

  ಕೃಷ್ಣನಿಗೆ ಇವರೇ ರುಕ್ಮಿಣಿ

  ಕೃಷ್ಣನಿಗೆ ಇವರೇ ರುಕ್ಮಿಣಿ

  ಕುರುಕ್ಷೇತ್ರ ಸಿನಿಮಾದಲ್ಲಿ ಕೃಷ್ಣನಾಗಿ ನಟಿಸಿರುವ ರವಿಚಂದ್ರನ್ ಗೆ ಜೋಡಿಯಾಗಿ ರುಕ್ಮಿಣಿ ಪಾತ್ರದಲ್ಲಿ ಪ್ರಗ್ಯಾ ಜೈಸ್ವಲ್ ಅಭಿನಯಿಸಿದ್ದಾರೆ. ಅಲ್ಲಿಗೆ ರವಿಚಂದ್ರನ್ ಗೂ ಈ ಸಿನಿಮಾದಲ್ಲಿ ನಾಯಕಿ ಇದ್ದಾರೆ. ನಾಯಕಿಯಾಗಿದ್ದರೂ ಒಂದು ದೃಶ್ಯದಲ್ಲಿ ಬಂದು ಹೋಗ್ತಾರಂತೆ ಅಷ್ಟೇ.

  'ಕುರುಕ್ಷೇತ್ರ' ಚಿತ್ರದಲ್ಲಿರುವ ಸಪ್ತ ಮಹಿಳಾ ಕಲಾವಿದರು ಇವರೇ 'ಕುರುಕ್ಷೇತ್ರ' ಚಿತ್ರದಲ್ಲಿರುವ ಸಪ್ತ ಮಹಿಳಾ ಕಲಾವಿದರು ಇವರೇ

  ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂಬುದು ಬೇಸರ

  ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂಬುದು ಬೇಸರ

  ಕುರುಕ್ಷೇತ್ರ ಸಿನಿಮಾ ದುರ್ಯೋಧನನ ದೃಷ್ಟಿಕೋನದಲ್ಲಿ ತಯಾರಾಗಿದೆ. ಇಲ್ಲಿ ದುರ್ಯೋಧನ, ಪಾಂಡವರು, ದ್ರೌಪದಿ ಮತ್ತಯ ಕುರುಕ್ಷೇತ್ರ ಯುದ್ಧದ ಹಿನ್ನಲೆಯಲ್ಲಿ ಕಥೆ ಇರುವುದರಿಂದ ಕೃಷ್ಣನ ಪಾತ್ರವೂ ಯುದ್ಧದ ಆಧಾರದಲ್ಲೇ ಬಂದಿದೆ. ಹಾಗಾಗಿ, ಕೃಷ್ಣನ ಪತ್ನಿ, ಗೋಪಿಕೆಯರಿಗೆ ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇಲ್ಲ.

  ಯಾರು ಈ ರುಕ್ಮಿಣಿ

  ಯಾರು ಈ ರುಕ್ಮಿಣಿ

  ಇನ್ನು ಕೃಷ್ಣನ ಪತ್ನಿ ಪಾತ್ರದಲ್ಲಿ ನಟಿಸಿರುವ ಪ್ರಗ್ಯಾ ಜೈಸ್ವಲ್ ಯಾರು ಎಂದು ನೋಡಿದರೆ, ತೆಲುಗು ನಟಿ. ಮಂಚಿಲಾಂಟಿ ಕುರ್ರಾಡೋ, ಕಂಚೆ, ಓಂ ನಮೋ ವೆಂಕಟೇಶ, ನಕ್ಷತ್ರಂ, ಜಯ ಜಾನಕಿ ನಾಯಕ, ಅಚ್ಚರಿ ಅಮೇರಿಕಾ ಯಾತ್ರಾ ಅಂತಹ ಸಿನಿಮಾಗಳಲ್ಲಿ ನಟಿಸಿದ್ದು, ಕುರುಕ್ಷೇತ್ರ ಮೊದಲ ಕನ್ನಡ ಸಿನಿಮಾ. ಚಿರಂಜೀವಿ ಅಭಿನಯಿಸುತ್ತಿರುವ ಸೈರಾದಲ್ಲೂ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.

  English summary
  Telugu actress pragya jaiswal played ravichandran heroine role in kurukshetra movie.
  Wednesday, August 7, 2019, 13:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X