Just In
Don't Miss!
- Automobiles
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಪಘಾತ, ಡ್ರಗ್ಸ್ ಆರೋಪಕ್ಕೆ ಪ್ರಜ್ವಲ್ ದೇವರಾಜ್, ದಿಗಂತ್ ಸ್ಪಷ್ಟನೆ
ಸೆ. 27ರ ಮಧ್ಯರಾತ್ರಿ ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ಖ್ಯಾತ ಉದ್ಯಮಿ ದಿ. ಆದಿಕೇಶವುಲು ಅವರ ಮೊಮ್ಮಗ ವಿಷ್ಣುವಿನ ಕಾರು ಅಪಘಾತವಾಗಿದೆ. ವಿಷ್ಣು ಸೇರಿದಂತೆ ಈ ಅಪಘಾತದ ರಭಸಕ್ಕೆ ಓಮ್ನಿ ಕಾರು ಪಲ್ಟಿಯಾಗಿ ಅದರಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.
ಆದ್ರೆ, ಈ ಅಪಘಾತದಲ್ಲಿ ಆದಿಕೇಶವುಲು ಅವರ ಮೊಮ್ಮಗ ವಿಷ್ಣುವಿನ ಜೊತೆಯಲ್ಲಿ ಕನ್ನಡದ ಖ್ಯಾತ ನಟರಾದ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಇದ್ದರು ಎನ್ನಲಾಗಿತ್ತು. ಅಷ್ಟೇ ಅಲ್ಲದೇ, ವಿಷ್ಣುವಿನ ಕಾರಿನಲ್ಲಿ 850 ಗ್ರಾಂ ನಷ್ಟು ಗಾಂಜಾ ಸಿಕ್ಕಿದೆ ಎಂದು ಕೂಡ ಹೇಳಲಾಗುತ್ತಿದೆ.
ಹೀಗಾಗಿ, ನಟ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಅವರ ಹೆಸರು ಈ ಅಪಘಾತ ಪ್ರಕರಣದಲ್ಲಿ ಕೇಳಿ ಬಂದಿದ್ದು, ಸುದ್ದಿ ವಾಹಿನಿಗಳು ಈ ಬಗ್ಗೆ ವರದಿ ಮಾಡಿತ್ತು. ಆದ್ರೆ, ಈ ಆರೋಪವನ್ನ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ತಳ್ಳಿಹಾಕಿದ್ದಾರೆ. ಹಾಗಿದ್ರೆ, ಕಳೆದ ರಾತ್ರಿ ಈ ನಟರು ಎಲ್ಲಿದ್ರು? ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಗೋವಾದಲ್ಲಿರುವ ಪ್ರಜ್ವಲ್ ದೇವರಾಜ್
ಈ ಅಪಘಾತ ಮತ್ತು ಆರೋಪದ ಬಗ್ಗೆ ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಪ್ರಜ್ವಲ್ ದೇವರಾಜ್ ಆರೋಪವನ್ನ ತಳ್ಳಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸುದ್ದಿ ವಾಹಿನಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ದೇವರಾಜ್ ಏನಂದ್ರು?
''ಈ ಅಪಘಾತದ ಬಗ್ಗೆ ನನಗೆ ಪೂರ್ತಿ ಮಾಹಿತಿಯಿಲ್ಲ. ಆದ್ರೆ, ಈ ಪ್ರಕರಣದಲ್ಲಿ ಮಾಧ್ಯಮಗಳು ನನ್ನ ಹೆಸರು ಸೇರಿಸಿದ್ದಾರೆ ಎಂಬುದು ಗೊತ್ತಾಯಿತು. ಇದರಿಂದ ನನ್ನ ಮನೆಯವರು ಕೂಡ ಗಾಬರಿಯಾಗಿದ್ದಾರೆ. ನಾನು ಗೋವಾದಲ್ಲಿ ಚಿತ್ರೀಕರಣದಲ್ಲಿದ್ದೀನಿ. ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಗೆ ಶೂಟಿಂಗ್ ಮಾಡ್ತಿದ್ವಿ. ಆದ್ರೆ, ಇವತ್ತು ಬೆಳಿಗ್ಗೆ ಶೂಟಿಂಗ್ ಮಾಡ್ಲಿಲ್ಲ'' - ಪ್ರಜ್ವಲ್ ದೇವರಾಜ್, ನಟ

ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ
''ಇಷ್ಟು ವರ್ಷದಿಂದ ಕಷ್ಟುಪಟ್ಟು ಗಳಿಸಿಕೊಂಡ ಹೆಸರು, ಅಭಿಮಾನವನ್ನ ಕೆಲವರು ಹಾಳು ಮಾಡುತ್ತಿದ್ದಾರೆ. ನನ್ನ ಬಗ್ಗೆ ಅಪಪ್ರಚಾರ ಮಾಡಲಾಗಿತ್ತಿದೆ. ಕೆಲವು ಸುದ್ದಿ ವಾಹಿನಿಗಳು ತಮ್ಮ ಜವಾಬ್ದಾರಿಯನ್ನ ಅರಿತುಕೊಳ್ಳಬೇಕು'' - ಪ್ರಜ್ವಲ್ ದೇವರಾಜ್, ನಟ

ಕನಕಪುರದಲ್ಲಿದ್ದ ದಿಗಂತ್
ಇನ್ನು ನಟ ದಿಗಂತ್ ಚಿತ್ರದ ಚಿತ್ರೀಕರಣವೊಂದರಲ್ಲಿ ಬ್ಯುಸಿಯಾಗಿದ್ದು, ಕನಕಪುರದ ಸಮೀಪದಲ್ಲಿದ್ದಾರಂತೆ. ಈ ಪ್ರಕರಣದ ಬಗ್ಗೆ ಸುದ್ದಿ ವಾಹಿನಿಗಳಿಗೆ ಪ್ರತಿಕ್ರಿಯೆ ನೀಡಿರುವ ದಿಗಂತ್ ''ತಮಗೂ ತಮ್ಮ ವಿರುದ್ಧ ಬಂದಿರುವ ಡ್ರಗ್ಸ್ ಆರೋಪಗಳಿಗೂ ಯಾವುದೇ ಸಂಬಂಧವಿಲ್ಲ'' ಸ್ಪಷ್ಟಪಡಿಸಿದ್ದಾರೆ.
ಡ್ರಗ್ಸ್ ಆರೋಪ ನಿರಾಕರಿಸಿದ ನಟ ದಿಗಂತ್

ದಿಗಂತ್ ಹೇಳಿದ್ದೇನು?
''ಉದ್ಯಮಿ ಆದಿಕೇಶವುಲು ಮೊಮ್ಮಗ ವಿಷ್ಣು ತಮಗೆ ಪರಿಚಯವಿರುವುದು ನಿಜ. ಆದರೆ, ಘಟನೆ ನಡೆದಾಗ ನಾವು ಅವರೊಂದಿಗೆ ಇರಲಿಲ್ಲ. ನಾವು ಅವರಿಗೆ ಪರಿಚಯ ಎಂಬ ಕಾರಣಕ್ಕೇ ನನ್ನ ಹಾಗೂ ಪ್ರಜ್ವಲ್ ಅವರ ಹೆಸರುಗಳನ್ನು ಈ ಕೇಸಿನಲ್ಲಿ ಥಳಕು ಹಾಕುವುದು ಸರಿಯಲ್ಲ'' - ದಿಗಂತ್, ನಟ

ಗಾಂಜಾ ಸಿಕ್ಕಿರುವ ವರದಿಯಾಗಿತ್ತು
ಅಪಘಾತವಾದ ವಿಷ್ಣುವಿನ ಕಾರಿನಲ್ಲಿ ವಿಷ್ಣು ಜತೆಗೆ ನಟ ದಿಗಂತ್, ನಟ ಪ್ರಜ್ವಲ್ ಇದ್ದರು, ಇದನ್ನ ಜನರು ನೋಡಿದ್ದಾಗಿ ಸೆ. 28ರ ಬೆಳಗ್ಗೆ ಸುದ್ದಿ ವಾಹಿನಿಯೊಂದು ವರದಿ ಮಾಡಿತ್ತು. ಅಲ್ಲದೇ, ವಿಷ್ಣುವಿನ ಕಾರಿನಿಂದ 850 ಗ್ರಾಂ ನಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಕೂಡ ವಾಹಿನಿ ವರದಿ ಮಾಡಿತ್ತು.